“2nd PUC ಫೇಲಾದವರಿಗೆ ಮತ್ತೆ ಅವಕಾಶ! ಪಿಯುಸಿ ಪಾಸ್ ಆದವರಿಗೆ AI Career Guidance ಸಂಪೂರ್ಣ ಮಾಹಿತಿ ಇಲ್ಲಿದೆ!”
2025-2026ನೇ ಸಾಲಿನ ಕರ್ನಾಟಕ ದ್ವಿತೀಯ ಪಿಯುಸಿ (2nd PUC) ಫಲಿತಾಂಶ ಪ್ರಕಟವಾಗಿದ್ದು ಈ ಬಾರಿ ಫಲಿತಾಂಶದಲ್ಲಿ ಶೇಕಡ 13 ರಷ್ಟು ಏರಿಕೆಯಾಗಿದೆ ಮತ್ತು ಮುಖ್ಯವಾಗಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಈ ಬಾರಿ ಹೆಚ್ಚಿನ ಸಾಧನೆಯನ್ನು ಮಾಡಿದ್ದಾರೆ ಇದು ಇನ್ನೊಂದು ಸಂತೋಷವಾದ ಕ್ಷಣವಾಗಿದೆ ಏಕೆಂದರೆ ಹಳೆಯ ಫಲಿತಾಂಶದಲ್ಲಿ ಅನುತ್ತೀರ್ಣರಾದವರು ಧೈರ್ಯವಾಗಿ ತಮ್ಮ ಫೇಲಾದ ವಿಷಯಗಳನ್ನು ಮತ್ತೊಮ್ಮೆ ಬರೆಯಲು ಅವಕಾಶ ಹೊಂದಿದ್ದಾರೆ ವಿದ್ಯಾರ್ಥಿಗಳು ಫೇಲಾದೆ ಅನ್ನೋ ಚಿಂತೆ ಬಿಟ್ಟು ಮತ್ತೊಮ್ಮೆ ಪ್ರಯತ್ನಿಸಿ ಮತ್ತಷ್ಟು ಜಾಸ್ತಿ ಓದಿನ ಕಡೆ ಗಮನ ಕೊಡಿ.
ಶಿಕ್ಷಣ ಸಚಿವ ಮಧು ಬಂಗಾರಪ್ಪ ಸುದ್ದಿಗೋಷ್ಠಿಯಲ್ಲಿ ಫಲಿತಾಂಶವನ್ನು ಪ್ರಕಟಿಸಿದರು ರಾಜ್ಯದ 6,32,200 ವಿದ್ಯಾರ್ಥಿಗಳಲ್ಲಿ 5,46,698 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಈ ಪೈಕಿ 2,32,928 (83.65%) ಬಾಲಕರು ಮತ್ತು 3,13,770 (88.70%) ಬಾಲಕಿಯರು ಉತ್ತೀರ್ಣರಾಗಿದ್ದಾರೆ. ಮತ್ತೊಮ್ಮೆ ಗಮನಿಸಬೇಕಾದ ವಿಚಾರವೆಂದರೆ, ಬಾಲಕಿಯರು ಶೇ. 88.70 ರೊಂದಿಗೆ ಮತ್ತೊಮ್ಮೆ ಮೇಲುಗೈ ಸಾಧಿಸಿದ್ದಾರೆ.
ಈ ಬಾರಿ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ರಾಜ್ಯ ಮಟ್ಟದಲ್ಲಿ 86.48% ಫಲಿತಾಂಶ ದಾಖಲಾಗಿದ್ದು, ಇದು ಐತಿಹಾಸಿಕ ಸಾಧನೆಯೆಂದು ಸಚಿವರು ಸಂತೋಷವನ್ನು ವ್ಯಕ್ತಪಡಿಸಿದ್ದಾರೆ . ಇದೇ ರೀತಿ ಪ್ರತಿ ವರ್ಷ ನಮ್ಮ ರಾಜ್ಯದಿಂದ ಇದಕ್ಕಿಂತ ಹೆಚ್ಚಿನ ಫಲಿತಾಂಶ ಬರಲಿ ಎಂದು ಆಶಿಸೋಣ.
ವಿಭಾಗವಾರು ಫಲಿತಾಂಶ ವಿವರಗಳು
- ಕಲಾ ವಿಭಾಗ (Arts): 98,310 ವಿದ್ಯಾರ್ಥಿಗಳು (72.86%)
- ವಾಣಿಜ್ಯ ವಿಭಾಗ (Commerce): 1,82,317 ವಿದ್ಯಾರ್ಥಿಗಳು (88.04%)
- ವಿಜ್ಞಾನ ವಿಭಾಗ (Science): 2,66,071 ವಿದ್ಯಾರ್ಥಿಗಳು (86.48%)
ನಗರ ವಿಭಾಗದಲ್ಲಿ 3,71,853 ಮಕ್ಕಳು (85.95%) ಉತ್ತೀರ್ಣರಾಗಿದ್ದು, ಗ್ರಾಮೀಣ ಭಾಗದ ವಿದ್ಯಾರ್ಥಿಗಳು 1,74,845 (87.62%) ಉತ್ತೀರ್ಣರಾಗಿದ್ದಾರೆ. ಶ್ರೇಣಿವಾರು: ಉನ್ನತ ಶ್ರೇಣಿಯಲ್ಲಿ 1,70,529, ಪ್ರಥಮ ದರ್ಜೆಯಲ್ಲಿ 2,95,385, ದ್ವಿತೀಯ ದರ್ಜೆಯಲ್ಲಿ 63,957, ಮತ್ತು ಜಸ್ಟ್ ಪಾಸ್ ಆಗಿರುವವರು 16,827 ಮಕ್ಕಳು.
2026ರ 2ನೇ PUC ಫಲಿತಾಂಶದಲ್ಲಿ Udupi district ರಾಜ್ಯದಲ್ಲೇ ಮೊದಲ ಸ್ಥಾನ ಪಡೆದು ಮತ್ತೆ ತನ್ನ ಶ್ರೇಷ್ಠತೆಯನ್ನು ತೋರಿಸಿದೆ. ಉತ್ತಮ pass percentage ಮೂಲಕ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಪರಿಶ್ರಮ ಸ್ಪಷ್ಟವಾಗಿದೆ. ಉಡುಪಿ ಜಿಲ್ಲೆಯ ಶೈಕ್ಷಣಿಕ ಮಟ್ಟ ಮತ್ತೊಮ್ಮೆ ರಾಜ್ಯದ ಗಮನ ಸೆಳೆದಿದೆ, ಇತರ ಜಿಲ್ಲೆಗಳಿಗೂ ಮಾದರಿಯಾಗಿದೆ.
ಅದೊಂದಿಗೇ 5,577 ವಿದ್ಯಾರ್ಥಿಗಳು 33–35% ಅಂಕಗಳೊಂದಿಗೆ ಪಾಸ್ ಆಗಿದ್ದಾರೆ. ಸರ್ಕಾರವು ಫಲಿತಾಂಶವನ್ನು ವೆಬ್ಸೈಟ್ನಲ್ಲಿ ಮೊದಲೇ ಪ್ರಕಟಿಸಿ, ಡಿಜಿ ಲಾಕರ್ನಲ್ಲಿ ಅಂಕಪಟ್ಟಿ ಲಭ್ಯವಾಗುವಂತೆ ಮಾಡಲಾಗಿದೆ.ಡಿಜಿ ಲಾಕರ್ನಲ್ಲಿ ದ್ವಿತೀಯ ಪಿಯುಸಿ ಫಲಿತಾಂಶದ ಅಂಕಪಟ್ಟಿ ಲಭ್ಯವಾಗಿದೆ.
ವಿದ್ಯಾರ್ಥಿಗಳು ತಮ್ಮ roll number ಬಳಸಿ login ಆಗಿ ತಮ್ಮ subject-wise ಅಂಕಗಳನ್ನು ಸುಲಭವಾಗಿ ನೋಡಬಹುದು. ಅಂಕಪಟ್ಟಿ ಡಿಜಿಟಲ್ ರೂಪದಲ್ಲಿ ಲಭ್ಯವಿರುವುದರಿಂದ, ಎಲ್ಲೇನಾದರೂ access ಮಾಡಬಹುದು ಮತ್ತು ಭವಿಷ್ಯದ reference ಅಥವಾ admission/college requirement ಗಾಗಿ download ಮಾಡಬಹುದು.ಇದೊಂದು ಒಳ್ಳೆಯ ಅಪ್ಲಿಕೇಶನ್.
2ನೇ ಪಿಯುಸಿ ಎರಡನೇ ಪರೀಕ್ಷೆ – ಫೇಲಾದವರಿಗೆ ಮತ್ತೊಂದು ಅವಕಾಶ
ದ್ಯಾರ್ಥಿಗಳು ಫೇಲಾದೆ ಅಂತ ಬೇಜಾರಾಗಬೇಡಿ ಈ ಒಂದೇ ಹಂತದಲ್ಲಿ ನಿಮ್ಮ ಜೀವನ ರೂಪಿಸಲ್ಲ ಇನ್ನೂ ಕೂಡ ತುಂಬಾ ಅವಕಾಶಗಳಿವೆ ಹಾಗೆ ಇನ್ನೊಂದು ಸಲಿ ಪರೀಕ್ಷೆ ಬರೆಯಲು ಅವಕಾಶ ಇದೆ ಹೀಗಾಗಿ ವಿದ್ಯಾರ್ಥಿಗಳು ಆದ ರಿಸಲ್ಟ್ ಬಗ್ಗೆ ತಲೆ ಕೆಡಿಸಿಕೊಳ್ಳದೆ ಮತ್ತೊಂದು ಸಾರಿ ಚೆನ್ನಾಗಿ ಓದಿ ಪಾಸಾಗ್ತಿನಿ ಅನ್ನು ಮನೋಭಾವನೆಯನ್ನು ಇಟ್ಟುಕೊಳ್ಳಿ. ಪುನಃ ಪ್ರಯತ್ನಿಸಿ ಚೆನ್ನಾಗಿ ಓದಿ ಇದಕ್ಕಾಗಿ ಸರ್ಕಾರ ಇನ್ನೊಂದು ಸರಿ ಪರೀಕ್ಷೆ ಬರೆಯಲು ಅನುಮತಿ ನೀಡುತ್ತಿದೆ.
2ನೇ ಪಿಯುಸಿ ಎರಡನೇ ಪರೀಕ್ಷೆ (Exam-2) ಏಪ್ರಿಲ್ 30ರಿಂದ ಮೇ 13ರವರೆಗೆ ನಡೆಯಲಿದೆ. ಈ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ತಮ್ಮ ಪಾಸಿಂಗ್ ಶೇಕಡಾವಾರು ಅಥವಾ ತಮ್ಮ ಅಂಕಗಳನ್ನು ಸುಧಾರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಆದರೆ, ಈ ಬಾರಿ ಮೂರನೇ ಪರೀಕ್ಷೆ (Exam-3) ನಡೆಸಲಾಗುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ಮರುಮೌಲ್ಯಮಾಪನ (Revaluation):
ರಿಸಲ್ಟ್ ಬಗ್ಗೆ ವಿದ್ಯಾರ್ಥಿಗಳಿಗೆ ಅನುಮಾನವಿದ್ದರೆ ಅಂದರೆ ನನಗೆ ಇನ್ನೂ ಮಾರ್ಕ್ಸ್ ಬರಬೇಕಿತ್ತು ಕಡಿಮೆ ಬಂದಿದೆ ಇತರ ಏನಾದರೂ ಅನುಮಾನವಿದ್ದರೆ ಅದಕ್ಕೂ ಕೂಡ ನೀವು ನಿಮಗೆ ಅನುಮಾನ ಇರುವ ವಿಷಯದ ಬಗ್ಗೆ ಪುನಃ ಮರುಮೌಲ್ಯಮಾಪನ (Revaluation) ಮತ್ತು ಮರುಎಣಿಕೆ (Recounting) ಅರ್ಜಿ ಸಲ್ಲಿಸಬಹುದು.
ಪ್ರತಿ ವಿಷಯಕ್ಕೆ ₹1,670 ಶುಲ್ಕವಿದ್ದು, ಅರ್ಜಿ ಸಲ್ಲಿಕೆ ಏಪ್ರಿಲ್ 13 ರಿಂದ 19ರೊಳಗೆ ಮಾಡಬೇಕು. ಈ ಪ್ರಕ್ರಿಯೆ ವಿದ್ಯಾರ್ಥಿಗಳಿಗೆ ತಮ್ಮ ಅಂಕಗಳನ್ನು ಪರಿಶೀಲಿಸಿ ಸುಧಾರಣೆಯ ಅವಕಾಶ ನೀಡುತ್ತದೆ ಮತ್ತು ಫಲಿತಾಂಶದ ಬಗ್ಗೆ ಸ್ಪಷ್ಟತೆ ನೀಡುತ್ತದೆ.
- ಅರ್ಜಿ ಸಲ್ಲಿಕೆ: ಏಪ್ರಿಲ್ 13–19
- ಶುಲ್ಕ: ಪ್ರತಿ ವಿಷಯಕ್ಕೆ ₹1,670
- ವಿದ್ಯಾರ್ಥಿಗಳು ತಮ್ಮ ಅಂಕಗಳನ್ನು ಮತ್ತೊಮ್ಮೆ ಪರಿಶೀಲಿಸಬಹುದು
2ನೇ ಪಿಯುಸಿ ನಂತರ ಯಾವ ಕೋರ್ಸ್ ಆಯ್ಕೆ ಮಾಡೋದು?
ಇದು ಎಲ್ಲಾ ವಿದ್ಯಾರ್ಥಿಗಳಿಗೂ ಒಂದು ಕಾಮನ್ ಕನ್ಫ್ಯೂಷನ್ ಎಷ್ಟೋ ವಿದ್ಯಾರ್ಥಿಗಳು ರಿಸಲ್ಟ್ ಆದ್ಮೇಲೆ ಏನ್ ಮಾಡಬೇಕು ಯಾವ course ಮಾಡಬೇಕು ಏನು ಅಂತ ತುಂಬಾ confusion ಅಲ್ಲಿ ಇರುತ್ತಾರೆ.ಸಂಪೂರ್ಣ ಮಾಹಿತಿ ಇಲ್ಲಿದೆ.
ಪಿಯುಸಿ ನಂತರ AI ಕ್ಷೇತ್ರದಲ್ಲಿ ಉಜ್ವಲ ವೃತ್ತಿ
ಇತ್ತೀಚಿನ ವರ್ಷಗಳಲ್ಲಿ ಕೃತಕ ಬುದ್ಧಿಮತ್ತೆ (Artificial Intelligence – AI) ವೇಗವಾಗಿ ಬೆಳೆಯುತ್ತಿದೆ. ಪಿಯುಸಿ ನಂತರ, ಸೈನ್ಸ್, ಕಾಮರ್ಸ್ ಅಥವಾ ಆರ್ಟ್ಸ್ ವಿದ್ಯಾರ್ಥಿಗಳು ತಮ್ಮ ಆಸಕ್ತಿಗೆ ಅನುಗುಣವಾಗಿ AI ಕೋರ್ಸ್ಗಳನ್ನು ಆಯ್ಕೆ ಮಾಡಿಕೊಂಡು ಭವಿಷ್ಯ ರೂಪಿಸಬಹುದು.
AI ತಂತ್ರಜ್ಞಾನವು ಯಂತ್ರಗಳಿಗೆ ಮನುಷ್ಯನಂತೆ ಆಲೋಚಿಸುವ ಮತ್ತು ಕಲಿಯುವ ಶಕ್ತಿಯನ್ನು ನೀಡುತ್ತದೆ. ಮುಂದಿನ ದಶಕಗಳಲ್ಲಿ ಈ ತಂತ್ರಜ್ಞಾನ ಎಲ್ಲಾ ಕ್ಷೇತ್ರಗಳನ್ನು ಆವರಿಸುತ್ತದೆ, ಆದ್ದರಿಂದ ಇಂದು ನವತಂತ್ರಜ್ಞಾನದಲ್ಲಿ ಪರಿಣತಿ ಹೊಂದಿದವರು ಭವಿಷ್ಯದಲ್ಲಿ ಮುನ್ನಡೆಯುವರು ಏಕೆಂದರೆ ಈಗ ಹೇಯ್ ತಂತ್ರಜ್ಞಾನ ತುಂಬಾ ವೇಗದಲ್ಲಿ ನಡಿತಾ ಇದೆ ಹೀಗಾಗಿ ವಿದ್ಯಾರ್ಥಿಗಳು ಈ ಕ್ಷೇತ್ರದಲ್ಲಿ ಮುಂದುವರೆದರೆ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಭವಿಷ್ಯ ಇನ್ನೂ ಉತ್ತಮವಾಗಬಹುದು.
ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ (Science Students)
- B.Tech in Artificial Intelligence & Machine Learning (AI & ML) – 4 ವರ್ಷ
ಈ ಕೋರ್ಸ್ ನಲ್ಲಿ ವಿದ್ಯಾರ್ಥಿಗಳು ಅಲ್ಗಾರಿದಮ್, ರೋಬೋಟಿಕ್ಸ್, ಡೇಟಾ ಸೈನ್ಸ್, ಮೆಷಿನ್ ಲರ್ನಿಂಗ್ ಬಗ್ಗೆ ತಿಳಿದುಕೊಳ್ಳುತ್ತಾರೆ. Python, programming, simple AI projects ಮಾಡುವುದು ಕಲಿಯುತ್ತಾರೆ. ವಿದ್ಯಾರ್ಥಿಗಳು AI industry jobs, research, robotics, data analysis ಗೆ ಸಿದ್ಧರಾಗುತ್ತಾರೆ.
2. B.Sc in Data Science / AI – 3 ವರ್ಷ ಸಂಶೋಧನೆ ಮತ್ತು ಡೇಟಾ ವಿಶ್ಲೇಷಣೆಗೆ ಒತ್ತು
ಈ ಕೋರ್ಸ್ನಲ್ಲಿ ವಿದ್ಯಾರ್ಥಿಗಳಿಗೆ ಡೇಟಾ ಸಂಗ್ರಹಣೆ, ಡೇಟಾ ಕ್ಲೀನಿಂಗ್, ಅಂಕಿ-ಅಂಶ ವಿಶ್ಲೇಷಣೆ, Python programming, Machine Learning ತಂತ್ರಗಳು ಕಲಿಸಲಾಗುತ್ತದೆ. ವಿದ್ಯಾರ್ಥಿಗಳು ಪ್ರಾಜೆಕ್ಟ್ work, real-time data analysis, research, AI solutions development ಅನುಭವ ಪಡೆಯುತ್ತಾರೆ. ಕೊನೆಗೆ, data analyst, AI developer, research assistant ಆಗಿ career ಅವಕಾಶಗಳಿಗಾಗಿ ಸಿದ್ಧರಾಗುತ್ತಾರೆ.
ಕಾಮರ್ಸ್ ವಿಭಾಗದ ವಿದ್ಯಾರ್ಥಿಗಳಿಗೆ (Commerce Students)
- BCA with AI Specialization – ಕಡಿಮೆ ಗಣಿತ ಅಗತ್ಯ, ಕಾರ್ಯಾನುಷ್ಠಾನಿಕ ಕೋರ್ಸ್
ಈ ಕೋರ್ಸ್ಗೆ ಹೆಚ್ಚು ಗಣಿತ ಬೇಡ, ಹೆಚ್ಚು ಪ್ರಾಯೋಗಿಕ ಅಭ್ಯಾಸಕ್ಕೆ ಒತ್ತು ನೀಡಲಾಗಿದೆ. ವಿದ್ಯಾರ್ಥಿಗಳು ಪ್ರೋಗ್ರಾಮಿಂಗ್, AI tools, ಮತ್ತು ಸಾಫ್ಟ್ವೇರ್ ಡೆವೆಲಪ್ಮೆಂಟ್ನಲ್ಲಿ ಪ್ರಾಯೋಗಿಕ ಅನುಭವ ಪಡೆಯುತ್ತಾರೆ, IT ಮತ್ತು AI ಉದ್ಯೋಗಗಳಿಗೆ ಸಿದ್ಧರಾಗುತ್ತಾರೆ.
2. BBA in Business Analytics – ಡೇಟಾ ಅನಾಲಿಟಿಕ್ಸ್ ಮತ್ತು AI ಉಪಕರಣಗಳ ಬಳಕೆ
ಈ ಕೋರ್ಸ್ನಲ್ಲಿ ವಿದ್ಯಾರ್ಥಿಗಳು ಡೇಟಾ ಅನಾಲಿಟಿಕ್ಸ್ ಮತ್ತು AI tools ಬಳಸುವ ತರಬೇತಿ ಪಡೆಯುತ್ತಾರೆ. ಡೇಟಾವನ್ನು ಅರ್ಥಮಾಡಿಕೊಳ್ಳಲು, ಬ್ಯುಸಿನೆಸ್ ನಿರ್ಧಾರಗಳಿಗೆ practical skills ಮೇಲೆ ಒತ್ತು ನೀಡಲಾಗಿದೆ. ಈ skills ಉದ್ಯೋಗದಲ್ಲಿ, especially data analyst, business analyst, ಮತ್ತು AI-driven roles ಗೆ ನೇರವಾಗಿ ಸಹಾಯವಾಗುತ್ತದೆ ಹಾಗೂ ಮುಂದಿನ ದಿನಗಳಲ್ಲಿ ಇದು ವಿದ್ಯಾರ್ಥಿಗಳ career ರೂಪಿಸಿಕೊಳ್ಳಲು ಒಂದು ಉತ್ತಮ ಆಯ್ಕೆಯಾಗಿದೆ.
3. ಫಿನ್ಟೆಕ್ (FinTech) ಮತ್ತು ಡಿಜಿಟಲ್ ವ್ಯವಹಾರಗಳಲ್ಲಿ ಅವಕಾಶಗಳು
ಈ ಕ್ಷೇತ್ರದಲ್ಲಿ ಬ್ಯಾಂಕಿಂಗ್, ಡಿಜಿಟಲ್ ಪೇಮೆಂಟ್ ಮತ್ತು ಆನ್ಲೈನ್ ವ್ಯವಹಾರಗಳಲ್ಲಿ ಹಲವಾರು ಉದ್ಯೋಗ ಅವಕಾಶಗಳಿವೆ. ತಂತ್ರಜ್ಞಾನ ಬಳಸಿ ಹಣಕಾಸು ಸೇವೆಗಳನ್ನು ಸುಲಭವಾಗಿ ನೀಡುವ ಕೆಲಸಗಳಲ್ಲಿ ಉತ್ತಮ career growth ಸಿಗುತ್ತದೆ.
ಆರ್ಟ್ಸ್ ವಿಭಾಗದ ವಿದ್ಯಾರ್ಥಿಗಳಿಗೆ (Arts Students)
ಕಲಾ ವಿಭಾಗದ ವಿದ್ಯಾರ್ಥಿಗಳು AI ಅನ್ನು ಸೃಜನಶೀಲ ಕ್ಷೇತ್ರಗಳಲ್ಲಿ ಬಳಸಬಹುದು. AI ಸಹಾಯದಿಂದ ಅವರು ಬರವಣಿಗೆ, ಡಿಸೈನ್, ಕಂಟೆಂಟ್ ಕ್ರಿಯೇಷನ್ ಮತ್ತು ಹೊಸ ಐಡಿಯಾಗಳನ್ನು ಸುಲಭವಾಗಿ ಅಭಿವೃದ್ಧಿಪಡಿಸಬಹುದು.
- B.Des with AI Integration – ಚಿತ್ರಕಲೆ, UX Design, ಜಾಹೀರಾತು
ಈ ಕ್ಷೇತ್ರದಲ್ಲಿ ಚಿತ್ರಕಲೆ, UX Design, ಜಾಹೀರಾತುಗಳಲ್ಲಿ AI ಬಳಸಿ creative skills ಅಭಿವೃದ್ಧಿಪಡಿಸಿ modern design ಕ್ಷೇತ್ರದಲ್ಲಿ career ಅವಕಾಶಗಳನ್ನು ಪಡೆಯಬಹುದು.
2. Diploma in AI – 6 ತಿಂಗಳು–1 ವರ್ಷ,
6 ತಿಂಗಳು–1 ವರ್ಷ ಕೋರ್ಸ್. ಪಿಯುಸಿ ನಂತರ ಅಥವಾ ಅಥವಾ ಪದವಿ ವೇಳೆ ಮಾಡಬಹುದು . AI basics, programming, tools ಕಲಿಸಿ, data analysis ಮತ್ತು technology ಕ್ಷೇತ್ರಗಳಲ್ಲಿ entry-level job ಅವಕಾಶ ಸಿಗುತ್ತದೆ.
AI ಕೋರ್ಸ್ಗಳು ವಿದ್ಯಾರ್ಥಿಗಳಿಗೆ:
- ತಾಂತ್ರಿಕ ಜ್ಞಾನ ಹೆಚ್ಚಿಸಿಕೊಳ್ಳಲು
- ರೆಸ್ಯೂಮೆಗೆ ಮೌಲ್ಯ ಹೆಚ್ಚಿಸಲು
- ಡಿಜಿಟಲ್ ಜಗತ್ತಿನಲ್ಲಿ ಸ್ಪರ್ಧಿಸಲು
ಪಿಯುಸಿ ನಂತರ AI ನಲ್ಲಿ ವೃತ್ತಿ ಆಯ್ಕೆಗಳು
- AI Researcher / Scientist – ವಿದ್ಯಾರ್ಥಿಯು ಗಣಿತ ಮತ್ತು ತಂತ್ರಜ್ಞಾನದಲ್ಲಿ ಪರಿಣತಿ ಹೊಂದಿದರೆ
- Machine Learning Engineer – ತಾಂತ್ರಿಕ ಸಮಸ್ಯೆಗಳಿಗೆ AI ಉಪಾಯಗಳನ್ನು ರೂಪಿಸುವುದು
- Business Analyst / AI Consultant – AI ಉಪಕರಣಗಳನ್ನು ವ್ಯವಹಾರ ನಿರ್ಧಾರಗಳಲ್ಲಿ ಬಳಸುವುದು
- UX / UI Designer with AI Tools – ಸೃಜನಶೀಲ ಕ್ಷೇತ್ರಗಳಲ್ಲಿ AI ಬಳಕೆ
ಈ ಎಲ್ಲಾ ಅವಕಾಶಗಳು ವಿದ್ಯಾರ್ಥಿಗಳಿಗೆ ಪಿಯುಸಿ ನಂತರಲೇ ಪ್ರಾರಂಭವಾಗಬಹುದಾಗಿದೆ.
ವಿದ್ಯಾರ್ಥಿಗಳಿಗೆ ಸಲಹೆ
- ಫಲಿತಾಂಶವನ್ನು ಬೇಸರದಿಂದ ನೋಡಬೇಡಿ; ಎರಡನೇ ಪರೀಕ್ಷೆ ಅವಕಾಶವನ್ನು ಬಳಸಿಕೊಳ್ಳಿ
- AI/Tech ಕೋರ್ಸ್ಗಳನ್ನು ಆಯ್ಕೆ ಮಾಡುವಾಗ ನಿಮ್ಮ ಆಸಕ್ತಿ ಮತ್ತು ಶಕ್ತಿಯನ್ನು ಗಮನದಲ್ಲಿ ಇಡಿ
- Online Certifications ಮೂಲಕ ತಕ್ಷಣ skill-building ಆರಂಭಿಸಿ
- ಯಾವುದೇ ವಿಭಾಗದ ವಿದ್ಯಾರ್ಥಿಯಾಗಿದ್ದರೂ AI ಕ್ಷೇತ್ರದಲ್ಲಿ ಉದ್ಯೋಗ ಅಥವಾ ಉದ್ಯಮ ಆರಂಭಿಸಬಹುದಾಗಿದೆ
ಕೊನೆಯ ಮಾತು
ಕರ್ನಾಟಕದ 2ನೇ ಪಿಯುಸಿ ಫಲಿತಾಂಶ ಶೇ. 86.48 ರೊಂದಿಗೆ ಐತಿಹಾಸಿಕವಾಗಿದೆ. ಫೇಲಾದ ವಿದ್ಯಾರ್ಥಿಗಳಿಗೆ ಎರಡನೇ ಪರೀಕ್ಷೆ ಅವಕಾಶವಿದ್ದು, ತಮ್ಮ ಫಲಿತಾಂಶ ಸುಧಾರಿಸಿಕೊಳ್ಳಬಹುದು ಫೇಲ್ ಆಯ್ತು ಅಂತ ಚಿಂತೆ ಮಾಡುತ್ತ ಕೂರಬೇಡಿ ಈಗಿನಿಂದಲೇ ಓದಲು ಶುರು ಮಾಡಿ ಈ ಪ್ರಯತ್ನ ನಿಮ್ಮ ಭವಿಷ್ಯವನ್ನು ರೂಪಿಸುತ್ತದೆ ಆದ್ದರಿಂದ ವಿದ್ಯಾರ್ಥಿಗಳೇ ಫೇಲಾಯಿತು ಅನ್ನೋ ಚಿಂತೆಗಿಂತ ಈ ಸಲಿ ಪಾಸ್ ಆಗೇ ಆಗ್ತೀನಿ ಅನ್ನೋ ಛಲ ಇರ್ಲಿ.
ಪಿಯುಸಿ ನಂತರ, AI ಕ್ಷೇತ್ರದಲ್ಲಿ career opportunities ಎಲ್ಲಾ ವಿಭಾಗದ ವಿದ್ಯಾರ್ಥಿಗಳಿಗೆ ಲಭ್ಯವಿದೆ. ವಿಜ್ಞಾನ, ಕಾಮರ್ಸ್ ಅಥವಾ ಆರ್ಟ್ಸ್ ವಿದ್ಯಾರ್ಥಿಗಳು ತಮ್ಮ ಆಸಕ್ತಿಗೆ ಅನುಗುಣವಾಗಿ ಕೋರ್ಸ್ ಆಯ್ಕೆ ಮಾಡಿಕೊಳ್ಳಬಹುದು. Online certifications, diplomas ಮತ್ತು degree courses ಮೂಲಕ AI ನಲ್ಲಿ bright future ರೂಪಿಸಿಕೊಳ್ಳಬಹುದು.
ಇದನ್ನು ಓದಿ:
IRCTC Recruitment 2026:84 ಹುದ್ದೆಗಳು ಖಾಲಿ – ನೇರ ಸಂದರ್ಶನಕ್ಕೆ ಅವಕಾಶ, ಇಂದೇ Apply ಮಾಡಿ! |
VIVO T5 Pro Entry : 9,020mAh ಬ್ಯಾಟರಿ ಮತ್ತು 144Hz ಸ್ಮೂತ್ ಡಿಸ್ಪ್ಲೇ – ಈ ಹೊಸ ಮೊಬೈಲ್ ನೋಡಿ! |