RRB Paramedical Recruitment 2026
ರೈಲ್ವೆಯಲ್ಲಿ 590 ಪ್ಯಾರಾಮೆಡಿಕಲ್ ಹುದ್ದೆಗಳ ನೇಮಕಾತಿ!ನರ್ಸಿಂಗ್ ಸೂಪರಿಂಟೆಂಡೆಂಟ್ ಸೇರಿದಂತೆ 9 ವಿಭಾಗಗಳ ಹುದ್ದೆಗಳು – ಸಂಪೂರ್ಣ ಮಾಹಿತಿ
ರೈಲ್ವೆ ಇಲಾಖೆಯಲ್ಲಿ ಸರ್ಕಾರಿ ಉದ್ಯೋಗ ಪಡೆಯಬೇಕು ಎಂದು ಕಾಯುತ್ತಿರುವ Paramedical ಕ್ಷೇತ್ರದ ಅಭ್ಯರ್ಥಿಗಳಿಗೆ ಇದೀಗ ಉತ್ತಮ ಅವಕಾಶವೊಂದು ಬಂದಿದೆ. Railway Recruitment Boards (RRBs) ವತಿಯಿಂದ RRB Paramedical Recruitment 2026 ನೇಮಕಾತಿಗೆ ಅಧಿಕೃತ ಅಧಿಸೂಚನೆ ಬಿಡುಗಡೆಯಾಗಿದೆ. ಈ ಬಾರಿ ದೇಶದ ವಿವಿಧ ರೈಲ್ವೆ ವಲಯಗಳಲ್ಲಿ ಒಟ್ಟು 590 Paramedical ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
ಈ ನೇಮಕಾತಿಯಲ್ಲಿ Nursing Superintendent, Pharmacist, Radiographer X-Ray Technician, ECG Technician, Optometrist, Lab Assistant ಸೇರಿದಂತೆ ಒಟ್ಟು 9 ವಿವಿಧ ಹುದ್ದೆಗಳು ಒಳಗೊಂಡಿವೆ. ಹುದ್ದೆಗೆ ಅನುಗುಣವಾಗಿ 12ನೇ ತರಗತಿ ಜೊತೆಗೆ ಸಂಬಂಧಿತ Diploma ಹೊಂದಿರುವವರು, Nursing, Pharmacy ಹಾಗೂ ಇತರೆ paramedical ವಿಭಾಗಗಳಲ್ಲಿ ಪದವಿ ಪಡೆದಿರುವವರು ಅರ್ಜಿ ಸಲ್ಲಿಸಲು ಅವಕಾಶವಿದೆ
ಈ ನೇಮಕಾತಿಯ ಆನ್‌ಲೈನ್ ಅರ್ಜಿ ಪ್ರಕ್ರಿಯೆ ಸೆಪ್ಟೆಂಬರ್ 15, 2026ರಿಂದ ಆರಂಭವಾಗಲಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಅಕ್ಟೋಬರ್ 14, 2026 ರಾತ್ರಿ 11:59 ಗಂಟೆ. ಹೀಗಾಗಿ ಅರ್ಹ ಅಭ್ಯರ್ಥಿಗಳು ಕೊನೆಯ ದಿನದವರೆಗೆ ಕಾಯದೆ, ಅಧಿಸೂಚನೆಯನ್ನು ಸಂಪೂರ್ಣವಾಗಿ ಪರಿಶೀಲಿಸಿ ಅರ್ಜಿ ಸಲ್ಲಿಸುವುದು ಉತ್ತಮ.
RRB ಪ್ಯಾರಾಮೆಡಿಕಲ್ ನೇಮಕಾತಿ 2026 ಅಧಿಕೃತ ಅಧಿಸೂಚನೆ PDF
RRB ಪ್ಯಾರಾಮೆಡಿಕಲ್ ನೇಮಕಾತಿ 2026: ಪ್ರಮುಖ ವಿವರಗಳು
| ವಿವರಗಳು | ಮಾಹಿತಿ |
| ನೇಮಕಾತಿ ಮಂಡಳಿ | ರೈಲ್ವೆ ನೇಮಕಾತಿ ಮಂಡಳಿಗಳು (RRBs) |
| ಅಧಿಸೂಚನೆ ಸಂಖ್ಯೆ | CEN No. 05/2026 |
| ಒಟ್ಟು ಹುದ್ದೆಗಳು | 590 |
| ವಿಭಾಗಗಳ ಸಂಖ್ಯೆ | 9 |
| ಅರ್ಜಿ ವಿಧಾನ | ಆನ್‌ಲೈನ್ |
| ಅರ್ಜಿ ಆರಂಭ | 15-09-2026 |
| ಅರ್ಜಿ ಕೊನೆಯ ದಿನಾಂಕ | 14-10-2026 |
| ಶುಲ್ಕ ಪಾವತಿಗೆ ಕೊನೆಯ ದಿನ | 16-10-2026 |
| ಆಯ್ಕೆ ಪ್ರಕ್ರಿಯೆ | ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) → ದಾಖಲೆಗಳ ಪರಿಶೀಲನೆ → ವೈದ್ಯಕೀಯ ಪರೀಕ್ಷೆ |
| ಅಧಿಕೃತ ವೆಬ್‌ಸೈಟ್ | rrb.indianrailways.gov.in |
RRB ಪ್ಯಾರಾಮೆಡಿಕಲ್ ಹುದ್ದೆಗಳ ವಿವರ (Vacancy Details)
ಒಟ್ಟು 9 ಹುದ್ದೆಗಳಿಗೆ 590 ಖಾಲಿ ಹುದ್ದೆಗಳಿದ್ದು, ಇವುಗಳನ್ನು ಎಲ್ಲಾ RRB ವಲಯಗಳಲ್ಲಿ ಹಂಚಿಕೆ ಮಾಡಲಾಗಿದೆ. RRBವಾರು ಹಾಗೂ ರೈಲ್ವೆ ವಲಯವಾರು ಹುದ್ದೆಗಳ ವಿವರಗಳನ್ನು ಅಧಿಕೃತ ಅಧಿಸೂಚನೆಯನಲ್ಲಿ ನೀಡಲಾಗಿದೆ. ಅದರ ಸಂಪೂರ್ಣ ವಿವರವನ್ನು ಇಲ್ಲಿ ನೀಡದೆ, ಹುದ್ದೆವಾರು ಒಟ್ಟು ಹುದ್ದೆಗಳ ಸಂಖ್ಯೆಯನ್ನು ಕೆಳಗೆ ನೀಡಲಾಗಿದೆ.
| ಕ್ರ.ಸಂ. | ಹುದ್ದೆಯ ಹೆಸರು | ಹುದ್ದೆಗಳ ಸಂಖ್ಯೆ |
|---|---|---|
| 1 | ನರ್ಸಿಂಗ್ ಸೂಪರಿಂಟೆಂಡೆಂಟ್ (Nursing Superintendent) | 365 |
| 2 | ಡಯಾಲಿಸಿಸ್ ಟೆಕ್ನಿಷಿಯನ್ (Dialysis Technician) | 1 |
| 3 | ಹೆಲ್ತ್ & ಮಲೇರಿಯಾ ಇನ್ಸ್‌ಪೆಕ್ಟರ್ ಗ್ರೇಡ್ II (Health & Malaria Inspector Grade II) | 43 |
| 4 | Audiologist & Speech Therapist – ಆಡಿಯಾಲಜಿಸ್ಟ್ ಮತ್ತು ಸ್ಪೀಚ್ ಥೆರಪಿಸ್ಟ್ | 1 |
| 5 | ಫಾರ್ಮಸಿಸ್ಟ್ (ಎಂಟ್ರಿ ಗ್ರೇಡ್) (Pharmacist – Entry Grade) | 118 |
| 6 | ರೇಡಿಯೋಗ್ರಾಫರ್ / ಎಕ್ಸ್-ರೇ ಟೆಕ್ನಿಷಿಯನ್ (Radiographer / X-ray Technician) | 25 |
| 7 | ECG ಟೆಕ್ನಿಷಿಯನ್ (ECG Technician) | 4 |
| 8 | ಆಪ್ಟೋಮೆಟ್ರಿಸ್ಟ್ (Optometrist) | 2 |
| 9 | ಲ್ಯಾಬ್ ಅಸಿಸ್ಟೆಂಟ್ ಗ್ರೇಡ್ II (Lab Assistant Grade II) | 31 |
| ಒಟ್ಟು | 590 | |
ಅರ್ಹತಾ ಮಾನದಂಡಗಳು(Eligibility Criteria)
ಶೈಕ್ಷಣಿಕ ಅರ್ಹತೆ(Educational Qualification)
RRB ಪ್ಯಾರಾಮೆಡಿಕಲ್ ನೇಮಕಾತಿ 2026ಕ್ಕೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿಗೆ ಸಂಬಂಧಿಸಿದ ಕನಿಷ್ಠ ಅರ್ಹತಾ ಮಾನದಂಡಗಳನ್ನು ಕಡ್ಡಾಯವಾಗಿ ಪೂರೈಸಿರಬೇಕು.
- ನರ್ಸಿಂಗ್ ಸೂಪರಿಂಟೆಂಡೆಂಟ್ (Nursing Superintendent)
- ಡಯಾಲಿಸಿಸ್ ಟೆಕ್ನಿಷಿಯನ್ (Dialysis Technician)
- ಹೆಲ್ತ್ & ಮಲೇರಿಯಾ ಇನ್ಸ್‌ಪೆಕ್ಟರ್ ಗ್ರೇಡ್ II (Health & Malaria Inspector Grade II)
ಯಾವುದೇ Chemistry ವಿಭಾಗದಲ್ಲಿ Chemistryಯನ್ನು Main / Optional Subject ಆಗಿ ಅಧ್ಯಯನ ಮಾಡಿದ B.Sc ಪದವಿ ಹೊಂದಿರಬೇಕು. ಜೊತೆಗೆ (a) 1 ವರ್ಷದ Health / Sanitary Inspector Diploma ಅಥವಾ (b) National Council for Vocational Training, Ministry of Labour and Employment, Government of India, New Delhi ನೀಡುವ 1 ವರ್ಷದ Health Sanitary Inspector National Trade Certificate (NTC) ಹೊಂದಿರಬೇಕು.
- ಆಡಿಯಾಲಜಿಸ್ಟ್ ಮತ್ತು ಸ್ಪೀಚ್ ಥೆರಪಿಸ್ಟ್ – (Audiologist & Speech Therapist )
ಈ ಹುದ್ದೆಗೆ Bachelor in Audiology and Speech Language Pathology, ಅಂದರೆ BASLP ಪದವಿ ಹೊಂದಿರಬೇಕು. ಪದವಿ ಮಾನ್ಯ ವಿಶ್ವವಿದ್ಯಾಲಯದಿಂದ ಪಡೆದಿರಬೇಕು ಮತ್ತು ಅಭ್ಯರ್ಥಿಯು Rehabilitation Council of India (RCI)ಯಲ್ಲಿ ನೋಂದಾಯಿತರಾಗಿರಬೇಕು.
- ಫಾರ್ಮಸಿಸ್ಟ್ (ಎಂಟ್ರಿ ಗ್ರೇಡ್) (Pharmacist – Entry Grade)
Pharmacist ಅಭ್ಯರ್ಥಿಗಳಿಗೆ ಈ ಬಾರಿ 118 ಹುದ್ದೆಗಳು ಲಭ್ಯವಿವೆ.ಅರ್ಜಿ ಸಲ್ಲಿಸುವವರು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ Bachelor Degree in Pharmacy (Allopathic) ಅಥವಾ Doctor of Pharmacy (Pharm.D) ಪದವಿ ಹೊಂದಿರಬೇಕು. ಅದೇ ರೀತಿ, Pharmacy Act, 1948ರ ಅಡಿಯಲ್ಲಿ Pharmacist ಆಗಿ ನೋಂದಣಿ ಹೊಂದಿರಬೇಕು.
- ರೇಡಿಯೋಗ್ರಾಫರ್ / ಎಕ್ಸ್-ರೇ ಟೆಕ್ನಿಷಿಯನ್ (Radiographer / X-ray Technician)
Physics ಮತ್ತು Chemistry ವಿಷಯಗಳೊಂದಿಗೆ 10+2 ಜೊತೆಗೆ ಮಾನ್ಯತೆ ಪಡೆದ ಸಂಸ್ಥೆಯಿಂದ Radiography / X-Ray Technician / Radio Diagnosis Technologyಯಲ್ಲಿ 2 ವರ್ಷದ Diploma ಹೊಂದಿರಬೇಕು. Radiography / X-Ray Technician / Radio Diagnosis Technologyಯಲ್ಲಿ 2 ವರ್ಷದ Diploma ಹೊಂದಿರುವ Science Graduatesಗೆ ಆದ್ಯತೆ ನೀಡಲಾಗುತ್ತದೆ.
- ECG ಟೆಕ್ನಿಷಿಯನ್ (ECG Technician)
ಅಭ್ಯರ್ಥಿಗಳು 10+2 ಅಥವಾ Science ವಿಭಾಗದಲ್ಲಿ Graduation ಜೊತೆಗೆ ECG Laboratory Technology, Cardiology ಅಥವಾ Cardiology Technician/Techniquesನಲ್ಲಿ ಕನಿಷ್ಠ ಒಂದು ವರ್ಷದ Certificate, Diploma ಅಥವಾ Degree ಹೊಂದಿರಬೇಕು
- ಆಪ್ಟೋಮೆಟ್ರಿಸ್ಟ್ (Optometrist)
ಅಭ್ಯರ್ಥಿಗಳು B.Sc in Optometry ಪದವಿ ಅಥವಾ 3ರಿಂದ 4 ವರ್ಷದ Ophthalmic Technician Diploma ಹೊಂದಿರಬೇಕು. ಜೊತೆಗೆ ಸಂಬಂಧಿತ Council ಅಥವಾ Licensing Bodyನಲ್ಲಿ registration ಹೊಂದಿರುವುದು ಅಗತ್ಯ.
- ಲ್ಯಾಬ್ ಅಸಿಸ್ಟೆಂಟ್ ಗ್ರೇಡ್ II (Lab Assistant Grade II)
12th (10+2) Science ಜೊತೆಗೆ (a) Diploma in Medical Laboratory Technology (DMLT) ಅಥವಾ (b) Diploma in Medical Laboratory Technology (DMLT)ಗೆ ಸಮಾನವಾದ Certificate Course in Medical Laboratory Technology ಹೊಂದಿರಬೇಕು.
ವಯೋಮಿತಿ (Age Limit)
ವಯೋಮಿತಿಯನ್ನು 01.01.2027ರ ಆಧಾರದ ಮೇಲೆ ಪರಿಗಣಿಸಲಾಗುತ್ತದೆ. ಅರ್ಜಿ ಸಲ್ಲಿಸುವ ಹುದ್ದೆಗೆ ಅನುಗುಣವಾಗಿ ಕನಿಷ್ಠ ಮತ್ತು ಗರಿಷ್ಠ ವಯೋಮಿತಿ ಬದಲಾಗುತ್ತದೆ. ವಿವಿಧ ಹುದ್ದೆಗಳಿಗೆ 18–33 ವರ್ಷದಿಂದ 20–40 ವರ್ಷಗಳವರೆಗೆ ವಯೋಮಿತಿ ನಿಗದಿಪಡಿಸಲಾಗಿದೆ. ಅಭ್ಯರ್ಥಿಯ ಜನ್ಮ ದಿನಾಂಕವು 10ನೇ ತರಗತಿ/SSLC ಪ್ರಮಾಣಪತ್ರದಲ್ಲಿರುವ ಜನ್ಮ ದಿನಾಂಕಕ್ಕೆ ಹೊಂದಿಕೆಯಾಗಿರಬೇಕು. ನಂತರದಲ್ಲಿ ಮಾಡಲಾದ ಜನ್ಮ ದಿನಾಂಕದ ಯಾವುದೇ ಬದಲಾವಣೆಯನ್ನು ಪರಿಗಣಿಸಲಾಗುವುದಿಲ್ಲ.
- ಕನಿಷ್ಠ ವಯಸ್ಸು (Minimum Age): 18 ವರ್ಷ
- ಗರಿಷ್ಠ ವಯಸ್ಸು (Maximum Age): 30ರಿಂದ 40 ವರ್ಷಗಳವರೆಗೆ
ವಯೋಮಿತಿ ಸಡಿಲಿಕೆ
| ವರ್ಗ | ಗರಿಷ್ಠ ವಯೋಮಿತಿ ಸಡಿಲಿಕೆ |
| SC/ST | 5 ವರ್ಷ |
| OBC-NCL | 3 ವರ್ಷ |
| PwBD – UR/EWS | 10 ವರ್ಷ |
| PwBD – OBC-NCL | 13 ವರ್ಷ |
| PwBD – SC/ST | 15 ವರ್ಷ |
ಅರ್ಜಿ ಶುಲ್ಕ (Application Fee)
RRB ಪ್ಯಾರಾಮೆಡಿಕಲ್ ನೇಮಕಾತಿ 2026ಕ್ಕೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಗತ್ಯವಿರುವ ಅರ್ಜಿ ಶುಲ್ಕವನ್ನು ಪಾವತಿಸಬೇಕು. ಅರ್ಜಿ ಶುಲ್ಕವನ್ನು ಆನ್‌ಲೈನ್ ಅಥವಾ ಆಫ್‌ಲೈನ್ ಮೂಲಕ ಪಾವತಿಸಬಹುದು. ಅಭ್ಯರ್ಥಿಗಳು Internet Banking, Debit/Credit Card ಅಥವಾ UPI ಮೂಲಕ ಆನ್‌ಲೈನ್‌ನಲ್ಲಿ ಶುಲ್ಕ ಪಾವತಿಸಬಹುದು.
- UR/OBC ಅಭ್ಯರ್ಥಿಗಳು: ₹500/-
- SC/ST/ಮಾಜಿ ಸೈನಿಕರು (Ex-Servicemen)/PwBD/ಟ್ರಾನ್ಸ್‌ಜೆಂಡರ್ ಅಭ್ಯರ್ಥಿಗಳು: ₹250/-
RRB ಪ್ಯಾರಾಮೆಡಿಕಲ್ ನೇಮಕಾತಿ : ವೇತನ ಶ್ರೇಣಿ(Pay Scale)
| ಹುದ್ದೆಯ ಹೆಸರು | ಆರಂಭಿಕ ವೇತನ |
| Nursing Superintendent | ₹44,900 |
| Dialysis Technician / Health & Malaria Inspector Gr. II / Audiologist & Speech Therapist | ₹35,400 |
| Pharmacist (Entry Grade) / Radiographer X-Ray Technician | ₹29,200 |
| ECG Technician / Optometrist | ₹25,500 |
| Lab Assistant Gr. II | ₹21,700 |
RRB ಪ್ಯಾರಾಮೆಡಿಕಲ್ ನೇಮಕಾತಿ: ಆಯ್ಕೆ ಪ್ರಕ್ರಿಯೆ(Selection Process)
ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯು ಮೊದಲು ಒಂದು ಹಂತದ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ಮೂಲಕ ನಡೆಯಲಿದೆ. ನಂತರ ದಾಖಲೆಗಳ ಪರಿಶೀಲನೆ (DV) ಮತ್ತು ವೈದ್ಯಕೀಯ ಪರೀಕ್ಷೆ ನಡೆಯಲಿದೆ.
CBT ಪರೀಕ್ಷೆಯು ಒಟ್ಟು 90 ನಿಮಿಷಗಳ ಅವಧಿಯನ್ನು ಹೊಂದಿರುತ್ತದೆ. ಪರೀಕ್ಷೆಯಲ್ಲಿ 100 ಬಹು ಆಯ್ಕೆ ಪ್ರಶ್ನೆಗಳು ಇರಲಿದ್ದು, ಪ್ರತಿಯೊಂದು ಪ್ರಶ್ನೆಗೆ 4 ಆಯ್ಕೆಗಳಿದ್ದು, ಒಂದು ಸರಿಯಾದ ಉತ್ತರವನ್ನು ಆಯ್ಕೆ ಮಾಡಬೇಕು. PwBD/PWD ಅಭ್ಯರ್ಥಿಗಳಿಗೆ Scribe ಸೌಲಭ್ಯ ಅನ್ವಯಿಸಿದರೆ 120 ನಿಮಿಷಗಳ ಪರೀಕ್ಷಾ ಅವಧಿ ನೀಡಲಾಗುತ್ತದೆ.
| ವಿಭಾಗ (Sections) | ಪ್ರಶ್ನೆಗಳ ಸಂಖ್ಯೆ | ಒಟ್ಟು ಅಂಕಗಳು | ಅವಧಿ |
|---|---|---|---|
| ವೃತ್ತಿಪರ ಸಾಮರ್ಥ್ಯ (Professional Ability) | 70 | 70 | 90 ನಿಮಿಷಗಳು |
| ಸಾಮಾನ್ಯ ಜ್ಞಾನ (General Awareness) | 10 | 10 | – |
| ಸಾಮಾನ್ಯ ಅಂಕಗಣಿತ, ಸಾಮಾನ್ಯ ಬುದ್ಧಿಮತ್ತೆ ಮತ್ತು ತಾರ್ಕಿಕತೆ (General Arithmetic, General Intelligence and Reasoning | 10 | 10 | – |
| ಸಾಮಾನ್ಯ ವಿಜ್ಞಾನ (General Science) | 10 | 10 | – |
| ಒಟ್ಟು (Total) | 100 | 100 | 90 ನಿಮಿಷಗಳು |
ಅರ್ಜಿ ಸಲ್ಲಿಸುವ ವಿಧಾನ(How to Apply)
- ಮೊದಲು RRBಯ ಅಧಿಕೃತ ವೆಬ್‌ಸೈಟ್ https://rrb.indianrailways.gov.in ಗೆ ಭೇಟಿ ನೀಡಿ
- “Create an Account” ಕ್ಲಿಕ್ ಮಾಡಿ, ಮೊಬೈಲ್ ಸಂಖ್ಯೆ ಮತ್ತು Email ID ಬಳಸಿ ಖಾತೆ ರಚಿಸಿ. ಈಗಾಗಲೇ ಖಾತೆ ಇದ್ದರೆ ಅದೇ Login ವಿವರಗಳನ್ನು ಬಳಸಿ.
- Aadhaar ಅಥವಾ DigiLocker ಮೂಲಕ ಗುರುತನ್ನು ಪರಿಶೀಲಿಸಿ. ಇದರಿಂದ ಮುಂದಿನ ಪರಿಶೀಲನೆ ಸುಲಭವಾಗುತ್ತದೆ.
- RRB, Railway Zone ಮತ್ತು ಹುದ್ದೆಗಳ ಆದ್ಯತೆಗಳನ್ನು ಆಯ್ಕೆ ಮಾಡಿ ಅರ್ಜಿ ಭರ್ತಿ ಮಾಡಿ. ಒಂದು RRB ಮಾತ್ರ ಆಯ್ಕೆ ಮಾಡಬಹುದು; ಆಯ್ಕೆ ಮಾಡಿದ ನಂತರ ಬದಲಾಯಿಸಲು ಅವಕಾಶವಿಲ್ಲ.
- Webcam ಅಥವಾ ಮೊಬೈಲ್ Front Camera ಮೂಲಕ Live Photo ತೆಗೆದುಕೊಳ್ಳಬೇಕು. ಮೊದಲೇ ತೆಗೆದ ಫೋಟೋ Upload ಮಾಡಲು ಅವಕಾಶವಿಲ್ಲ; Cap, Mask ಅಥವಾ Glasses ಧರಿಸಬಾರದು.
- ನಂತರ ಸೂಚಿಸಿರುವಂತೆ ನಿಮ್ಮ Scanned Signature ಹಾಗೂ ಅಗತ್ಯವಿರುವ ಇತರೆ ದಾಖಲೆಗಳನ್ನು Upload ಮಾಡಬೇಕು.
- ಲಭ್ಯವಿರುವ ಭಾಷೆಗಳ ಪಟ್ಟಿಯಿಂದ ಪರೀಕ್ಷೆಯ ಮಾಧ್ಯಮವನ್ನು (Exam Medium) ಆಯ್ಕೆ ಮಾಡಬೇಕು.
- ಅರ್ಜಿ Submit ಮಾಡಿ Net Banking, Card ಅಥವಾ UPI ಮೂಲಕ ಶುಲ್ಕ ಪಾವತಿಸಿ.
- ಅರ್ಜಿಯನ್ನು 14.10.2026ರೊಳಗೆ, ಶುಲ್ಕವನ್ನು 16.10.2026ರೊಳಗೆ ಪಾವತಿಸಿ.
ಪ್ರಮುಖ ಲಿಂಕ್‌ಗಳು(Important Links)
| ಆನ್‌ಲೈನ್ ಅರ್ಜಿ ಸಲ್ಲಿಸಲು | Click-Here |
| ಅಧಿಕೃತ ಅಧಿಸೂಚನೆ PDF | Click-Here |
| ಅಧಿಕೃತ ವೆಬ್‌ಸೈಟ್ | Click-Here |
ಕೊನೆಯ ಮಾತು
RRB Paramedical Recruitment 2026 ಅಡಿಯಲ್ಲಿ ಒಟ್ಟು 590 ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು, Nursing Superintendent, Pharmacist ಸೇರಿದಂತೆ 9 ವಿಭಾಗಗಳಲ್ಲಿ ಅವಕಾಶವಿದೆ. ಅರ್ಜಿ ಪ್ರಕ್ರಿಯೆ 15 ಸೆಪ್ಟೆಂಬರ್ 2026ರಿಂದ 14 ಅಕ್ಟೋಬರ್ 2026ರ ರಾತ್ರಿ 11:59ರವರೆಗೆ ನಡೆಯಲಿದೆ. ಅರ್ಹ ಅಭ್ಯರ್ಥಿಗಳು ತಮ್ಮ qualification, ವಯೋಮಿತಿ ಮತ್ತು ಇತರೆ ಅರ್ಹತೆಗಳನ್ನು ಪರಿಶೀಲಿಸಿ, ಕೊನೆಯ ದಿನದವರೆಗೆ ಕಾಯದೆ ಅರ್ಜಿ ಸಲ್ಲಿಸುವುದು ಉತ್ತಮ. ಮುಂದಿನ updatesಗಾಗಿ RRBಯ ಅಧಿಕೃತ website ಅನ್ನು ಮಾತ್ರ ಅನುಸರಿಸಿ.
I’m anusha my age is 22 now I’m completed paramedical dialysis technician course I’m looking for RrN jobs
Thank you
Thank you for your comment. Please check the official notification and apply if you are eligible. Join our WhatsApp or Telegram group for the latest job updates.
Gnm nursing
Thank you! 😊 Please DM us for more information. We’ll send you the link.