Telegram Join My Telegram WhatsApp Join My WhatsApp

Rajendra Prasad Scholarship 2026: SSLC, PUC ವಿದ್ಯಾರ್ಥಿಗಳಿಗೆ ₹30,000 ವರೆಗೆ ವಿದ್ಯಾರ್ಥಿವೇತನ ಪಡೆಯುವ ಅವಕಾಶ

Rajendra Prasad Scholarship 2026

ಡಾ. ರಾಜೇಂದ್ರ ಪ್ರಸಾದ್ ವಿದ್ಯಾರ್ಥಿವೇತನ 2026-27 ಶಿಕ್ಷಣ ಮುಂದುವರಿಸಬೇಕು ಎನ್ನುವ ಆಸೆ ಇದ್ದರೂ, ಕೆಲವೊಮ್ಮೆ ಹಣಕಾಸಿನ ಸಮಸ್ಯೆ ವಿದ್ಯಾರ್ಥಿಗಳ ಕನಸಿಗೆ ಅಡ್ಡಿಯಾಗುತ್ತದೆ. ವಿಶೇಷವಾಗಿ 10ನೇ ಅಥವಾ 12ನೇ ತರಗತಿ ಮುಗಿಸಿದ ನಂತರ ಮುಂದಿನ ಶಿಕ್ಷಣಕ್ಕಾಗಿ ಶುಲ್ಕ, ಪುಸ್ತಕಗಳು, study materials, accommodation ಸೇರಿದಂತೆ ಹಲವು ಖರ್ಚುಗಳನ್ನು ಭರಿಸುವುದು ಕೆಲವು ಕುಟುಂಬಗಳಿಗೆ ಕಷ್ಟವಾಗಬಹುದು.

ಇಂತಹ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ನೀಡುವ ಉದ್ದೇಶದಿಂದ Dr. Rajendra Prasad Scholarship Program 2026-27 ಅನ್ನು ಪರಿಚಯಿಸಲಾಗಿದೆ. ಭಾರತದ ಮೊದಲ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಅವರ ಹೆಸರಿನಲ್ಲಿ ಈ scholarship program ಅನ್ನು Buddy4Study ಸಂಸ್ಥೆ ನಡೆಸುತ್ತಿದೆ.

ಈ ವಿದ್ಯಾರ್ಥಿವೇತನದ ಪ್ರಮುಖ ಉದ್ದೇಶವೇನೆಂದರೆ, ಓದಿನಲ್ಲಿ ಉತ್ತಮ ಸಾಧನೆ ಮಾಡಿರುವ ಆದರೆ ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ಮುಂದಿನ ಶಿಕ್ಷಣವನ್ನು ಮುಂದುವರಿಸಲು ಅಗತ್ಯವಾದ ಹಣಕಾಸಿನ ನೆರವು ನೀಡುವುದು.

2026-27ನೇ ಶೈಕ್ಷಣಿಕ ವರ್ಷಕ್ಕೆ ಸಂಬಂಧಿಸಿದಂತೆ ಈ scholarshipಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. 2026ರಲ್ಲಿ Class 10 board examination ಪಾಸ್ ಮಾಡಿದ ವಿದ್ಯಾರ್ಥಿಗಳು ಅಥವಾ 2025 ಅಥವಾ 2026ರಲ್ಲಿ Class 12 board examination ಪಾಸ್ ಮಾಡಿದ ವಿದ್ಯಾರ್ಥಿಗಳು ಈ scholarshipಗೆ ಅರ್ಹರಾಗಬಹುದು.

ಅರ್ಹತೆ ಹೊಂದಿರುವ ಹಾಗೂ ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ಅವರ ಶಿಕ್ಷಣದ fee structure ಅನ್ನು ಆಧರಿಸಿ ಒಂದು ಬಾರಿ ಗರಿಷ್ಠ ₹30,000 ವರೆಗೆ scholarship ನೀಡಲಾಗುತ್ತದೆ.

ಇಲ್ಲಿ ಗಮನಿಸಬೇಕಾದ ಮತ್ತೊಂದು ಮುಖ್ಯ ವಿಷಯವೆಂದರೆ, scholarship ಪಡೆಯಲು ಕೇವಲ ಅಂಕಗಳು ಮಾತ್ರ ಮುಖ್ಯವಲ್ಲ. ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಪೋಷಕರ ಆದಾಯ ₹8 ಲಕ್ಷಕ್ಕಿಂತ ಹೆಚ್ಚಿರಬಾರದು ಎಂಬ ಆದಾಯದ ಷರತ್ತೂ ಇದೆ.ಅದರ ಜೊತೆಗೆ, ಸರ್ಕಾರಿ ಶಾಲೆಗಳಲ್ಲಿ ಓದಿದ ವಿದ್ಯಾರ್ಥಿಗಳು, Persons with Disabilities (PwD), North-East region ವಿದ್ಯಾರ್ಥಿಗಳು ಹಾಗೂ aspirational districts‌ಗಳಿಂದ ಬಂದ ವಿದ್ಯಾರ್ಥಿಗಳಿಗೆ preference ನೀಡಲಾಗುತ್ತದೆ.

ಡಾ. ರಾಜೇಂದ್ರ ಪ್ರಸಾದ್ ವಿದ್ಯಾರ್ಥಿವೇತನ 2026-27 ಪ್ರಮುಖ ಮಾಹಿತಿ

ವಿವರ ಮಾಹಿತಿ
ವಿದ್ಯಾರ್ಥಿವೇತನದ ಹೆಸರು ಡಾ. ರಾಜೇಂದ್ರ ಪ್ರಸಾದ್ ವಿದ್ಯಾರ್ಥಿವೇತನ ಕಾರ್ಯಕ್ರಮ 2026-27
ವಿದ್ಯಾರ್ಥಿವೇತನ ನೀಡುವ ಸಂಸ್ಥೆ Buddy4Study
ವಿದ್ಯಾರ್ಥಿವೇತನದ ವಿಧ ಅರ್ಹತೆ ಮತ್ತು ಆರ್ಥಿಕ ಸ್ಥಿತಿಯ ಆಧಾರಿತ ವಿದ್ಯಾರ್ಥಿವೇತನ
ಅರ್ಹ ವಿದ್ಯಾರ್ಥಿಗಳು 2026ರಲ್ಲಿ 10ನೇ ತರಗತಿ ಪಾಸ್ ಮಾಡಿದವರು ಹಾಗೂ 2025 ಅಥವಾ 2026ರಲ್ಲಿ 12ನೇ ತರಗತಿ ಪಾಸ್ ಮಾಡಿದವರು
ಕನಿಷ್ಠ ಅಂಕ 65%
ಕುಟುಂಬದ ವಾರ್ಷಿಕ ಆದಾಯ ಗರಿಷ್ಠ ₹8 ಲಕ್ಷ
ವಿದ್ಯಾರ್ಥಿವೇತನ ಮೊತ್ತ ಒಂದು ಬಾರಿ ಗರಿಷ್ಠ ₹30,000
ಅರ್ಜಿ ಸಲ್ಲಿಸುವ ವಿಧಾನ ಆನ್‌ಲೈನ್
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆಗಸ್ಟ್ 31, 2026

 ರಾಜೇಂದ್ರ ಪ್ರಸಾದ್ ವಿದ್ಯಾರ್ಥಿವೇತನ 2026 ಪ್ರಮುಖ ದಿನಾಂಕಗಳು

ಡಾ. ರಾಜೇಂದ್ರ ಪ್ರಸಾದ್ ವಿದ್ಯಾರ್ಥಿವೇತನ ಕಾರ್ಯಕ್ರಮ 2026-27 ಕ್ಕಾಗಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗ ಪ್ರಾರಂಭವಾಗಿದೆ. ಅರ್ಹ ವಿದ್ಯಾರ್ಥಿಗಳು ಅಧಿಕೃತ ‘Buddy4Study’ ವಿದ್ಯಾರ್ಥಿವೇತನ ಪುಟದ ಮೂಲಕ ಅರ್ಜಿ ಸಲ್ಲಿಸುವಂತೆ ಹಾಗೂ ಕೊನೆಯ ಕ್ಷಣದ ತೊಂದರೆಗಳನ್ನು ತಪ್ಪಿಸಲು ನಿಗದಿತ ಸಮಯದೊಳಗೆ ಅರ್ಜಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಕೋರಲಾಗಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆಗಸ್ಟ್ 31, 2026

ಇದನ್ನು ಓದಿ: Raman Kant Munjal Scholarship 2026: Finance ಪದವಿ ವಿದ್ಯಾರ್ಥಿಗಳಿಗೆ ₹5.5 ಲಕ್ಷವರೆಗೆ ವಿದ್ಯಾರ್ಥಿವೇತನ

ರಾಜೇಂದ್ರ ಪ್ರಸಾದ್ ವಿದ್ಯಾರ್ಥಿವೇತನ 2026: ಅರ್ಹತಾ ಮಾನದಂಡಗಳು(Eligibility Criteria)

ಡಾ. ರಾಜೇಂದ್ರ ಪ್ರಸಾದ್ ವಿದ್ಯಾರ್ಥಿವೇತನ ಕಾರ್ಯಕ್ರಮ 2026-27ಕ್ಕೆ ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು ಈ ಕೆಳಗಿನ ಅರ್ಹತಾ ಷರತ್ತುಗಳನ್ನು ಪೂರೈಸಬೇಕು:

1. ಭಾರತದಲ್ಲಿರುವ ವಿದ್ಯಾರ್ಥಿಗಳು

ಈ scholarshipಗೆ ಭಾರತದಾದ್ಯಂತ ಇರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಅಂದರೆ, ಕರ್ನಾಟಕ ಸೇರಿದಂತೆ ದೇಶದ ಯಾವುದೇ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದ ಅರ್ಹ ವಿದ್ಯಾರ್ಥಿಗಳು ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದು.

2. Class 10 ವಿದ್ಯಾರ್ಥಿಗಳ ಅರ್ಹತೆ
  • ವಿದ್ಯಾರ್ಥಿಗಳು 2026ರಲ್ಲಿ ನಡೆದ 10ನೇ ತರಗತಿ ಮಂಡಳಿ ಪರೀಕ್ಷೆಯಲ್ಲಿ ಪಾಸಾಗಿರಬೇಕು.
  • ತಮ್ಮ ಹಿಂದಿನ ತರಗತಿಯಲ್ಲಿ ಕನಿಷ್ಠ 65% ಅಂಕಗಳನ್ನು ಪಡೆದಿರಬೇಕು.
  • ಅರ್ಜಿದಾರರ ಕುಟುಂಬದ ವಾರ್ಷಿಕ ಒಟ್ಟು ಆದಾಯ ₹8 ಲಕ್ಷಕ್ಕಿಂತ ಹೆಚ್ಚಿರಬಾರದು.
3. Class 12 ವಿದ್ಯಾರ್ಥಿಗಳ ಅರ್ಹತೆ
  • ವಿದ್ಯಾರ್ಥಿಗಳು 2025 ಅಥವಾ 2026ರಲ್ಲಿ 12ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
  • ಹಿಂದಿನ ತರಗತಿಯಲ್ಲಿ ಕನಿಷ್ಠ 65% ಅಂಕಗಳನ್ನು ಗಳಿಸಿರಬೇಕು.
  • ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ ₹8 ಲಕ್ಷಕ್ಕಿಂತ ಹೆಚ್ಚಿರಬಾರದು.
ಗಮನಿಸಿ: ಕೆಳಗಿನ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ:
  • ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ ವಿದ್ಯಾರ್ಥಿಗಳು
  • ವಿಶೇಷಚೇತನ ವಿದ್ಯಾರ್ಥಿಗಳು (PwD)
  • ಈಶಾನ್ಯ ರಾಜ್ಯಗಳ ಹಾಗೂ ಆಕಾಂಕ್ಷಿ ಜಿಲ್ಲೆಗಳ (Aspirational Districts) ವಿದ್ಯಾರ್ಥಿಗಳಿಗೆ.

ರಾಜೇಂದ್ರ ಪ್ರಸಾದ್ ವಿದ್ಯಾರ್ಥಿವೇತನ 2026-27ರ ಸೌಲಭ್ಯಗಳು

ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ಅವರ ಶಿಕ್ಷಣ ಶುಲ್ಕದ ಆಧಾರದ ಮೇಲೆ ಒಂದು ಬಾರಿ ಗರಿಷ್ಠ ₹30,000 ವರೆಗೆ ವಿದ್ಯಾರ್ಥಿವೇತನ ನೀಡಲಾಗುತ್ತದೆ.

ಗಮನಿಸಿ: ವಿದ್ಯಾರ್ಥಿವೇತನದ ಮೊತ್ತವನ್ನು ಶಿಕ್ಷಣಕ್ಕೆ ಸಂಬಂಧಿಸಿದ ಖರ್ಚುಗಳಿಗೆ ಮಾತ್ರ ಬಳಸಬೇಕು. ಇದರಲ್ಲಿ ಟ್ಯೂಷನ್ ಶುಲ್ಕ, ಪುಸ್ತಕಗಳು, ಅಧ್ಯಯನ ಸಾಮಗ್ರಿಗಳು, ವಸತಿ ಮತ್ತು ಇತರ ಶೈಕ್ಷಣಿಕ ವೆಚ್ಚಗಳು ಸೇರಿವೆ.

ಅಗತ್ಯ ದಾಖಲೆಗಳು (Required Documents)

Online application ಸಲ್ಲಿಸುವ ಮೊದಲು ಅಗತ್ಯ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಂಡರೆ application process ಸುಲಭವಾಗುತ್ತದೆ ವಿದ್ಯಾರ್ಥಿಗಳು ಸಾಮಾನ್ಯವಾಗಿ ಕೆಳಗಿನ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು:

  1. ವಿದ್ಯಾರ್ಥಿಯ ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ
  2. ಗುರುತಿನ ಪುರಾವೆ (Proof of Identity)
  3. 10ನೇ ಅಥವಾ 12ನೇ ತರಗತಿಯ ಅಂಕಪಟ್ಟಿ
  4. ಪ್ರವೇಶಾತಿಯ ಪುರಾವೆ, ಉದಾಹರಣೆಗೆ School/College ID Card ಅಥವಾ Admission Letter
  5. ಶಾಲೆ ಅಥವಾ ಕಾಲೇಜಿನ ಶುಲ್ಕ ರಸೀದಿ ಅಥವಾ ಅಧಿಕೃತ Fee Structure
  6. ಸಕ್ಷಮ ಪ್ರಾಧಿಕಾರದಿಂದ ನೀಡಲಾದ ವಾರ್ಷಿಕ ಆದಾಯ ಪ್ರಮಾಣಪತ್ರ (Income Certificate)
  7. ವಿದ್ಯಾರ್ಥಿ ಅಥವಾ ಪೋಷಕರ ಹೆಸರಿನ ಬ್ಯಾಂಕ್ ಖಾತೆ ವಿವರಗಳು, ಉದಾಹರಣೆಗೆ Passbook ಅಥವಾ Cancelled Cheque

ಅರ್ಜಿ ಸಲ್ಲಿಸುವ ವಿಧಾನ(How to Apply)

ಹಂತ 1: ಮೊದಲು Buddy4Studyಯ ಅಧಿಕೃತ scholarship ಪುಟಕ್ಕೆ ಭೇಟಿ ನೀಡಿ ಅರ್ಜಿ ಪ್ರಕ್ರಿಯೆಯನ್ನು ಆರಂಭಿಸಿ.

ನೇರವಾಗಿ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

ಹಂತ 2: ಪುಟದಲ್ಲಿ ಕೆಳಗೆ ಸ್ಕ್ರೋಲ್ ಮಾಡಿ ‘Apply Now’ ಬಟನ್ ಮೇಲೆ ಕ್ಲಿಕ್ ಮಾಡಿ.

ಹಂತ 3: ಈಗಾಗಲೇ Buddy4Study ಖಾತೆ ಇದ್ದರೆ ನಿಮ್ಮ Registered ID ಬಳಸಿ Login ಮಾಡಿ. ಖಾತೆ ಇಲ್ಲದಿದ್ದರೆ ‘Create an Account’ ಆಯ್ಕೆ ಮಾಡಿಕೊಂಡು Email, Mobile Number ಅಥವಾ Gmail Account ಮತ್ತು Password ಬಳಸಿ ಹೊಸ ಖಾತೆ ರಚಿಸಿ.

ಹಂತ 4: Login ಮಾಡಿದ ನಂತರ ನಿಮ್ಮನ್ನು “Dr. Rajendra Prasad Scholarship Program 2026-27” ಅರ್ಜಿ ಪುಟಕ್ಕೆ ಕರೆದೊಯ್ಯಲಾಗುತ್ತದೆ.

ಹಂತ 5: ಅರ್ಜಿ ಪ್ರಕ್ರಿಯೆ ಆರಂಭಿಸಲು ‘Start Application’ ಬಟನ್ ಮೇಲೆ ಕ್ಲಿಕ್ ಮಾಡಿ.

ಹಂತ 6: ಮೊದಲು ‘Check Your Eligibility’ ವಿಭಾಗದಲ್ಲಿ ಕೇಳಲಾಗುವ ಮಾಹಿತಿಯನ್ನು ಭರ್ತಿ ಮಾಡಿ ನಿಮ್ಮ ಅರ್ಹತೆಯನ್ನು ಪರಿಶೀಲಿಸಿ.

ಹಂತ 7: ನಂತರ Online Application Formನಲ್ಲಿ ಅಗತ್ಯವಿರುವ ಎಲ್ಲಾ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ ಮತ್ತು ಕೇಳಿರುವ ದಾಖಲೆಗಳನ್ನು Upload ಮಾಡಿ.

ಹಂತ 8: ‘Terms and Conditions’ ಅನ್ನು ಒಪ್ಪಿಕೊಂಡು ಅಗತ್ಯವಿರುವ ಎಲ್ಲಾ Check Boxes ಆಯ್ಕೆ ಮಾಡಿ. ನಂತರ ‘Preview’ ಮೇಲೆ ಕ್ಲಿಕ್ ಮಾಡಿ.

ಹಂತ 9: ಕೊನೆಯದಾಗಿ ಅರ್ಜಿಯಲ್ಲಿ ನಮೂದಿಸಿರುವ ಎಲ್ಲಾ ಮಾಹಿತಿಯನ್ನು ಮತ್ತೊಮ್ಮೆ ಪರಿಶೀಲಿಸಿ. ಎಲ್ಲವೂ ಸರಿಯಾಗಿದ್ದರೆ ‘Submit’ ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಪೂರ್ಣಗೊಳಿಸಿ.

ಅರ್ಜಿ ಸಲ್ಲಿಸುವಾಗ ಗಮನಿಸಬೇಕಾದ ಪ್ರಮುಖ ವಿಷಯಗಳು

Scholarshipಗೆ ಅರ್ಜಿ ಸಲ್ಲಿಸುವಾಗ ಯಾವುದೇ ತಪ್ಪಾಗದಂತೆ ಎಲ್ಲಾ ವಿವರಗಳನ್ನು ಸರಿಯಾಗಿ ಪರಿಶೀಲಿಸಿ ಅರ್ಜಿಯನ್ನು Submit ಮಾಡುವುದು ಮುಖ್ಯ.

  • ಹೆಸರು: Aadhaar, ಅಂಕಪಟ್ಟಿ ಮತ್ತು ಅರ್ಜಿಯಲ್ಲಿರುವ ಹೆಸರು ಸರಿಯಾಗಿದೆಯೇ ಎಂದು ಪರಿಶೀಲಿಸಿ.
  • ಅಂಕಗಳು: ಹಿಂದಿನ ತರಗತಿಯ ಅಂಕಗಳನ್ನು ಯಾವುದೇ ತಪ್ಪಿಲ್ಲದೆ ನಮೂದಿಸಿ.
  • ಆದಾಯದ ವಿವರ: ಕುಟುಂಬದ ಆದಾಯಕ್ಕೆ ಸಂಬಂಧಿಸಿದ ಮಾಹಿತಿಯನ್ನು ಸರಿಯಾಗಿ ನೀಡಿ.
  • ದಾಖಲೆಗಳು: Upload ಮಾಡುವ ಎಲ್ಲಾ ದಾಖಲೆಗಳು ಸ್ಪಷ್ಟವಾಗಿ ಕಾಣುವಂತಿರಲಿ.
  • ಬ್ಯಾಂಕ್ ವಿವರ: Account Number ಸೇರಿದಂತೆ ಬ್ಯಾಂಕ್ ಮಾಹಿತಿಯನ್ನು ಸರಿಯಾಗಿ ನಮೂದಿಸಿ.
  • ಮೊಬೈಲ್ ಮತ್ತು ಇ-ಮೇಲ್: ಸಕ್ರಿಯ ಮೊಬೈಲ್ ಸಂಖ್ಯೆ ಮತ್ತು Email ID ನೀಡಿ.
  • ಅಂತಿಮ ಸಲ್ಲಿಕೆ: ಅರ್ಜಿಯನ್ನು Preview ಮಾಡಿ ಎಲ್ಲಾ ವಿವರಗಳನ್ನು ಪರಿಶೀಲಿಸಿದ ನಂತರವೇ Submit ಮಾಡಿ.

Application submit ಮಾಡಿದ ನಂತರ details ಬದಲಾಯಿಸಲು ಅವಕಾಶವಿರುತ್ತದೆ ಎಂದು ಊಹಿಸಬೇಡಿ. ಆದ್ದರಿಂದ submit ಮಾಡುವ ಮುನ್ನವೇ ಎಲ್ಲವನ್ನೂ carefully check ಮಾಡುವುದು ಉತ್ತಮ.

Rajendra Prasad Scholarship 2026

ಸಾಮಾನ್ಯ ಪ್ರಶ್ನೆಗಳು (FAQ)

Q1. ಈ ವಿದ್ಯಾರ್ಥಿವೇತನದಲ್ಲಿ ಎಷ್ಟು ಹಣ ಸಿಗುತ್ತದೆ?

ಆಯ್ಕೆಯಾದ ವಿದ್ಯಾರ್ಥಿಗಳಿಗೆ ಅವರ ಶುಲ್ಕದ ವಿವರವನ್ನು ಆಧರಿಸಿ, ಒಂದು ಬಾರಿ ಗರಿಷ್ಠ ₹30,000 ವರೆಗೆ ವಿದ್ಯಾರ್ಥಿವೇತನ ನೀಡಲಾಗುತ್ತದೆ.

Q2. ಈ ವಿದ್ಯಾರ್ಥಿವೇತನದ ₹30,000 ಪ್ರತಿಯೊಬ್ಬರಿಗೂ ಸಿಗುತ್ತದೆಯೇ?

ಇಲ್ಲ. ₹30,000 ಗರಿಷ್ಠ ಮೊತ್ತವಾಗಿದ್ದು, ವಿದ್ಯಾರ್ಥಿಯ ಶಿಕ್ಷಣ ಶುಲ್ಕದ ಆಧಾರದ ಮೇಲೆ ವಿದ್ಯಾರ್ಥಿವೇತನದ ಮೊತ್ತ ನಿರ್ಧಾರವಾಗುತ್ತದೆ.

Q3. ವಿದ್ಯಾರ್ಥಿವೇತನದ ಹಣ ಹೇಗೆ ಸಿಗುತ್ತದೆ?

ಆಯ್ಕೆಯಾದ ವಿದ್ಯಾರ್ಥಿಗಳಿಗೆ ಶಿಕ್ಷಣ ಶುಲ್ಕದ ಆಧಾರದ ಮೇಲೆ ವಿದ್ಯಾರ್ಥಿವೇತನದ ಹಣ ನೀಡಲಾಗುತ್ತದೆ.

Q4. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು?

31 August 2026 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

ಕೊನೆಯ ಮಾತು

Dr. Rajendra Prasad Scholarship 2026-27 ಆರ್ಥಿಕವಾಗಿ ಹಿಂದುಳಿದ ಅರ್ಹ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶವಾಗಿದೆ. 65% ಅಂಕ ಹಾಗೂ ₹8 ಲಕ್ಷದೊಳಗಿನ ಕುಟುಂಬದ ಆದಾಯ ಹೊಂದಿರುವ ಅರ್ಹ ವಿದ್ಯಾರ್ಥಿಗಳಿಗೆ ₹30,000 ವರೆಗೆ ಸಹಾಯಧನ ಸಿಗಬಹುದು.ಆಗಸ್ಟ್ 31, 2026 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದ್ದು, ವಿದ್ಯಾರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಸಮಯಕ್ಕೆ ಸರಿಯಾಗಿ ಅರ್ಜಿ ಸಲ್ಲಿಸುವುದು ಉತ್ತಮ.

ಇದನ್ನು ಓದಿ:  

 

 

Leave a Comment