BEL Recruitment 2026
ಉತ್ತಮ ಉದ್ಯೋಗಕ್ಕಾಗಿ ಕಾಯುತ್ತಿರುವ ಎಂಜಿನಿಯರಿಂಗ್ ಪದವೀಧರರಿಗೆ ಇಲ್ಲೊಂದು ಉಪಯುಕ್ತ ಮಾಹಿತಿ ಇದೆ. ಬೆಂಗಳೂರಿನಲ್ಲಿ ಉದ್ಯೋಗ ಪಡೆಯಲು ಬಯಸುವ ಮತ್ತು Electronics ಅಥವಾ Computer Science ವಿಭಾಗದಲ್ಲಿ ಎಂಜಿನಿಯರಿಂಗ್ ಪೂರ್ಣಗೊಳಿಸಿರುವ ಅಭ್ಯರ್ಥಿಗಳಿಗೆ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ವತಿಯಿಂದ ಹೊಸ ನೇಮಕಾತಿ ಪ್ರಕಟಿಸಲಾಗಿದೆ.
BEL Project Engineer-I Recruitment 2026ರ ಅಡಿಯಲ್ಲಿ ಒಟ್ಟು 14 ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಮೊದಲ ವರ್ಷದಲ್ಲಿ ತಿಂಗಳಿಗೆ ₹50,000 ವೇತನ ನೀಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ
ಈ ನೇಮಕಾತಿಯಲ್ಲಿ ವಿಶೇಷವಾಗಿ ಗಮನಿಸಬೇಕಾದ ವಿಷಯವೆಂದರೆ, ಕೇವಲ ಎಂಜಿನಿಯರಿಂಗ್ ಪದವಿ ಹೊಂದಿರುವುದು ಮಾತ್ರ ಸಾಕಾಗುವುದಿಲ್ಲ. ಅಭ್ಯರ್ಥಿಗಳು ಸಂಬಂಧಿತ ಕ್ಷೇತ್ರದಲ್ಲಿ ಪದವಿ ಪೂರ್ಣಗೊಳಿಸಿರುವುದರ ಜೊತೆಗೆ, ವಿದ್ಯಾರ್ಹತೆ ಪಡೆದ ನಂತರ ಎರಡು ವರ್ಷಕ್ಕಿಂತ ಹೆಚ್ಚಿನ ಅವಧಿಯ ಸಂಬಂಧಿತ ಉದ್ಯಮದ ಅನುಭವವನ್ನೂ ಹೊಂದಿರಬೇಕು.
BEL Project Engineer ನೇಮಕಾತಿ 2026 ಅಧಿಕೃತ ಅಧಿಸೂಚನೆ PDF
BEL Project Engineer ನೇಮಕಾತಿ 2026 ಪ್ರಮುಖ ವಿವರಗಳು
| ವಿವರಗಳು | ಮಾಹಿತಿ |
| ಸಂಸ್ಥೆಯ ಹೆಸರು | Bharat Electronics Limited (BEL) |
| ನೇಮಕಾತಿ ಹೆಸರು | BEL Project Engineer-I Recruitment 2026 |
| ಅಧಿಸೂಚನೆ ಸಂಖ್ಯೆ | 383/HR/EW&A/2026-27 |
| ಹುದ್ದೆಯ ಹೆಸರು | Project Engineer-I |
| ಒಟ್ಟು ಹುದ್ದೆಗಳು | 14 |
| ಉದ್ಯೋಗ ಸ್ಥಳ | ಬೆಂಗಳೂರು |
| ಅರ್ಜಿ ವಿಧಾನ | ಆನ್ಲೈನ್ |
| ಅಧಿಕೃತ ವೆಬ್ಸೈಟ್ | www.bel-india.in/careers/ |
BEL ನೇಮಕಾತಿ 2026 : ಪ್ರಮುಖ ದಿನಾಂಕಗಳು
| ಅಧಿಸೂಚನೆ ಪ್ರಕಟಣೆ ದಿನಾಂಕ | 09-10-2026 |
| ಆನ್ಲೈನ್ ಅರ್ಜಿ ಪ್ರಾರಂಭದ ದಿನಾಂಕ | 09-10-2026 |
| ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 23-10-2026 |
| ಲಿಖಿತ ಪರೀಕ್ಷೆ / ಸಂದರ್ಶನದ ಸ್ಥಳದ ಮಾಹಿತಿ | ನಂತರ ತಿಳಿಸಲಾಗುತ್ತದೆ |
BEL Project Engineer-I ಹುದ್ದೆಗಳ ವಿವರ (ವಿಭಾಗವಾರು) Vacancy Details
BEL Project Engineer-I ನೇಮಕಾತಿ 2026ರ ಅಡಿಯಲ್ಲಿ ಒಟ್ಟು 14 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ವಿಭಾಗವಾರು ಹುದ್ದೆಗಳ ವಿವರ ಇಲ್ಲಿದೆ.
| ಕ್ರಮ ಸಂಖ್ಯೆ | ಹುದ್ದೆಯ ಹೆಸರು | ವಿಭಾಗ | ಹುದ್ದೆಗಳ ಸಂಖ್ಯೆ |
| 1 | Project Engineer-I | Electronics (ಎಲೆಕ್ಟ್ರಾನಿಕ್ಸ್) | 8 |
| 2 | Project Engineer-I | Computer Science (ಕಂಪ್ಯೂಟರ್ ಸೈನ್ಸ್) | 6 |
| ಒಟ್ಟು | 14 | ||
BEL ನೇಮಕಾತಿ 2026 : ಅರ್ಹತಾ ಮಾನದಂಡಗಳು(Eligibility Criteria)
BEL Project Engineer-I ಶೈಕ್ಷಣಿಕ ಅರ್ಹತೆ
- ಹುದ್ದೆಯ ಹೆಸರು – Project Engineer-I
- ಅಗತ್ಯವಿರುವ ವಿದ್ಯಾರ್ಹತೆ – ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಸಂಬಂಧಿತ ವಿಭಾಗದಲ್ಲಿ ಪೂರ್ಣಾವಧಿಯ 4 ವರ್ಷಗಳ B.E. / B.Tech / B.Sc Engineering ಪದವಿ ಪಡೆದಿರಬೇಕು. ಅಭ್ಯರ್ಥಿಗಳು PASS CLASS ನಲ್ಲಿ ಉತ್ತೀರ್ಣರಾಗಿರಬೇಕು.
ವಿಭಾಗವಾರು ಅರ್ಹ ವಿಷಯಗಳು (Discipline-wise Eligible Subjects)
1. ಕಂಪ್ಯೂಟರ್ ಸೈನ್ಸ್ (Computer Science)
ಈ ಕೆಳಗಿನ ವಿಷಯಗಳಲ್ಲಿ ಪದವಿ ಪಡೆದ ಅಭ್ಯರ್ಥಿಗಳು ಅರ್ಹರಾಗಿರಬಹುದು:
- Computer Science
- Computer Science & Engineering
- Computer Science Engineering
2. ಎಲೆಕ್ಟ್ರಾನಿಕ್ಸ್ (Electronics)
ಈ ಕೆಳಗಿನ ವಿಷಯಗಳಲ್ಲಿ ಪದವಿ ಪಡೆದ ಅಭ್ಯರ್ಥಿಗಳು ಅರ್ಹರಾಗಿರಬಹುದು:
- Electronics
- Electronics & Communication
- Electronics & Telecommunication
- Communication
- Telecommunication
ಮುಖ್ಯ ಸೂಚನೆ: ಇಲ್ಲಿ B.Sc Engineering ಎಂದರೆ ಸಂಬಂಧಿತ ವಿಭಾಗದಲ್ಲಿ ಪೂರ್ಣಾವಧಿಯ 4 ವರ್ಷಗಳ ಎಂಜಿನಿಯರಿಂಗ್ ಪದವಿ. ಸಾಮಾನ್ಯ 3 ವರ್ಷಗಳ B.Sc ಪದವಿಯನ್ನು ಈ ಅರ್ಹತೆಗೆ ಸಮಾನವೆಂದು ಪರಿಗಣಿಸಬಾರದು. ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯಲ್ಲಿರುವ ಅರ್ಹತಾ ಷರತ್ತುಗಳನ್ನು ಪರಿಶೀಲಿಸಿ.
ಅನುಭವದ ಅರ್ಹತೆ (Experience)
ಅಭ್ಯರ್ಥಿಗಳು 01.10.2026ರ ವೇಳೆಗೆ ವಿದ್ಯಾರ್ಹತೆ ಪೂರ್ಣಗೊಳಿಸಿದ ನಂತರ ಸಂಬಂಧಿತ ಉದ್ಯಮ ಕ್ಷೇತ್ರದಲ್ಲಿ 2 ವರ್ಷಕ್ಕಿಂತ ಹೆಚ್ಚಿನ ಕೆಲಸದ ಅನುಭವ ಹೊಂದಿರಬೇಕು. ಬೋಧನಾ, ಶೈಕ್ಷಣಿಕ ಮತ್ತು ಸಂಶೋಧನಾ ಕ್ಷೇತ್ರದ ಅನುಭವ, ಬ್ಯಾಂಕಿಂಗ್ ಮತ್ತು ಹಣಕಾಸು ಸಂಸ್ಥೆಗಳಲ್ಲಿ ಪಡೆದ ಅನುಭವ, ಲಾಭರಹಿತ ಸಂಸ್ಥೆಗಳಲ್ಲಿ ಪಡೆದ ಅನುಭವ ಹಾಗೂ ಶೈಕ್ಷಣಿಕ ಪಠ್ಯಕ್ರಮದ ಭಾಗವಾಗಿರುವ ಇಂಟರ್ನ್ಶಿಪ್ ಅನುಭವಗಳನ್ನು ಕೆಲಸದ ಅನುಭವವೆಂದು ಪರಿಗಣಿಸಲಾಗುವುದಿಲ್ಲ.
BEL ನೇಮಕಾತಿ 2026 : ವಯೋಮಿತಿ (Age Limit)
BEL Project Engineer-I ನೇಮಕಾತಿ 2026ಕ್ಕೆ ಅರ್ಜಿ ಸಲ್ಲಿಸುವ ಸಾಮಾನ್ಯ ವರ್ಗ (General) ಮತ್ತು EWS ಅಭ್ಯರ್ಥಿಗಳಿಗೆ 01-10-2026ರ ವೇಳೆಗೆ ಗರಿಷ್ಠ ವಯೋಮಿತಿ 32 ವರ್ಷಗಳು ಆಗಿರಬೇಕು.
ವಯೋಮಿತಿ ಸಡಿಲಿಕೆ (Age Relaxation)
| ವರ್ಗ | ವಯೋಮಿತಿ ಸಡಿಲಿಕೆ |
| OBC (NCL) | 3 ವರ್ಷಗಳು |
| SC / ST | 5 ವರ್ಷಗಳು |
| PwBD (ವಿಕಲಚೇತನ ಅಭ್ಯರ್ಥಿಗಳು) | 10 ವರ್ಷಗಳು |
BEL ನೇಮಕಾತಿ 2026 : ವೇತನ ಶ್ರೇಣಿ(Pay Scale)
- ಹುದ್ದೆಯ ಹೆಸರು – Project Engineer-I
- ವೇತನದ ವಿವರ – ಮೊದಲ ವರ್ಷದ ಸೇವಾವಧಿಗೆ ತಿಂಗಳಿಗೆ ₹50,000 ಸಮಗ್ರ ನಿಗದಿತ ವೇತನ ನೀಡಲಾಗುತ್ತದೆ. ಒಪ್ಪಂದವನ್ನು ಪ್ರತಿ ಬಾರಿ ವಿಸ್ತರಿಸಿದಾಗ ಮಾಸಿಕ ವೇತನದಲ್ಲಿ ₹5,000 ಹೆಚ್ಚಳವಾಗುತ್ತದೆ.
BEL ನೇಮಕಾತಿ 2026: ಅರ್ಜಿ ಶುಲ್ಕ (Application Fee)
| ವರ್ಗ | ಅರ್ಜಿ ಶುಲ್ಕ |
| General / UR / OBC / EWS | ₹400 + 18% GST = ₹472 |
| PwBD / SC / ST | ಅರ್ಜಿ ಶುಲ್ಕ ಪಾವತಿಯಿಂದ ವಿನಾಯಿತಿ |
ಮುಖ್ಯ ಸೂಚನೆ: ಒಮ್ಮೆ ಪಾವತಿಸಿದ ಅರ್ಜಿ ಶುಲ್ಕವನ್ನು ಯಾವುದೇ ಕಾರಣಕ್ಕೂ ಮರುಪಾವತಿಸಲಾಗುವುದಿಲ್ಲ. ಆದ್ದರಿಂದ, ಶುಲ್ಕ ಪಾವತಿಸುವ ಮೊದಲು ನಿಮ್ಮ ಅರ್ಹತೆ ಮತ್ತು ಅರ್ಜಿ ವಿವರಗಳನ್ನು ಸರಿಯಾಗಿ ಪರಿಶೀಲಿಸಿ.
BEL ನೇಮಕಾತಿ 2026: ಆಯ್ಕೆ ಪ್ರಕ್ರಿಯೆ(Selection Process)
ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತದೆ. ನಂತರ ಲಿಖಿತ ಪರೀಕ್ಷೆಯಲ್ಲಿ ಅರ್ಹತೆ ಪಡೆದವರಿಗೆ ಸಂದರ್ಶನ ನಡೆಸಲಾಗುತ್ತದೆ. ಲಿಖಿತ ಪರೀಕ್ಷೆಗೆ 85% ಅಂಕಗಳನ್ನು ಮತ್ತು ಸಂದರ್ಶನಕ್ಕೆ 15% ಅಂಕಗಳನ್ನು ನೀಡಲಾಗುತ್ತದೆ. ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳನ್ನು ಪ್ರತಿ ವಿಭಾಗದಲ್ಲಿನ ಪ್ರತಿ ಹುದ್ದೆಯಲ್ಲಿನ ಅರ್ಹತೆಯ ಕ್ರಮದಲ್ಲಿ 1:5 ಅನುಪಾತದಲ್ಲಿ ಸಂದರ್ಶನಕ್ಕೆ ಕರೆಯಲಾಗುತ್ತದೆ.
ಕನಿಷ್ಠ ಅರ್ಹತಾ ಅಂಕಗಳು (Minimum Qualifying Marks)
BEL Project Engineer-I ನೇಮಕಾತಿ 2026ರ ಆಯ್ಕೆ ಪ್ರಕ್ರಿಯೆಯಲ್ಲಿ ಅಭ್ಯರ್ಥಿಗಳು ಲಿಖಿತ ಪರೀಕ್ಷೆ ಮತ್ತು ಸಂದರ್ಶನದಲ್ಲಿ ನಿಗದಿಪಡಿಸಿದ ಕನಿಷ್ಠ ಅರ್ಹತಾ ಅಂಕಗಳನ್ನು ಪಡೆಯಬೇಕು.
| ಅಭ್ಯರ್ಥಿಗಳ ವರ್ಗ | ಲಿಖಿತ ಪರೀಕ್ಷೆ | ಸಂದರ್ಶನ |
| UR / OBC-NCL / EWS | 35% | 35% |
| SC / ST / PwBD | 30% | 30% |
ಗಮನಿಸಿ: ಸಾಮಾನ್ಯ, OBC-NCL ಮತ್ತು EWS ವರ್ಗದ ಅಭ್ಯರ್ಥಿಗಳು ಲಿಖಿತ ಪರೀಕ್ಷೆ ಹಾಗೂ ಸಂದರ್ಶನದಲ್ಲಿ ತಲಾ ಕನಿಷ್ಠ 35% ಅಂಕಗಳನ್ನು ಪಡೆಯಬೇಕು. SC, ST ಮತ್ತು PwBD ವರ್ಗದ ಅಭ್ಯರ್ಥಿಗಳಿಗೆ ಎರಡೂ ಹಂತಗಳಲ್ಲಿ ತಲಾ ಕನಿಷ್ಠ 30% ಅಂಕಗಳು ಅಗತ್ಯವಿರುತ್ತವೆ.
ಅರ್ಜಿ ಸಲ್ಲಿಸುವ ವಿಧಾನ(How to Apply)
- ಅಧಿಕೃತ ಅರ್ಜಿ ವೆಬ್ಸೈಟ್ಗೆ ಭೇಟಿ ನೀಡಿ: https://jobapply.in/BEL2026BNGEWAPE
- ಆನ್ಲೈನ್ ಅರ್ಜಿ ನಮೂನೆಯಲ್ಲಿ ಕೇಳಿರುವ ಅಗತ್ಯ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ.
- ಎಲ್ಲಾ ವಿವರಗಳನ್ನು ಪರಿಶೀಲಿಸಿದ ನಂತರ Submit ಬಟನ್ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಿ.
- ಸಂಪೂರ್ಣವಾಗಿ ಭರ್ತಿ ಮಾಡಿದ ಅರ್ಜಿ ನಮೂನೆಯ ಪ್ರಿಂಟ್ಔಟ್ ತೆಗೆದುಕೊಳ್ಳಿ.
- ಅನ್ವಯಿಸುವ ಅಭ್ಯರ್ಥಿಗಳು SBI Collect ಮೂಲಕ ₹400 + 18% GST ಸೇರಿ ಒಟ್ಟು ₹472 ಅರ್ಜಿ ಶುಲ್ಕವನ್ನು ಪಾವತಿಸಬೇಕು. ಪಾವತಿಗೆ ಸಂಬಂಧಿಸಿದ SBI Collect Reference Number ಅನ್ನು ದಾಖಲಿಸಿಕೊಳ್ಳಿ
- ಅರ್ಜಿ ನಮೂನೆಯಲ್ಲಿ ನಿಗದಿಪಡಿಸಿರುವ ಜಾಗದಲ್ಲಿ SBI Collect Reference Number ನಮೂದಿಸಿ.
- ಆಯ್ಕೆ ಪ್ರಕ್ರಿಯೆಯ ದಿನದಂದು ಭರ್ತಿ ಮಾಡಿದ ಅರ್ಜಿ ನಮೂನೆಯ ಪ್ರಿಂಟ್ಔಟ್, ಇತ್ತೀಚಿನ ಎರಡು ಪಾಸ್ಪೋರ್ಟ್ ಅಳತೆಯ ಬಣ್ಣದ ಫೋಟೋಗಳು ಹಾಗೂ ಅಗತ್ಯ ದಾಖಲೆಗಳನ್ನು ಆಯ್ಕೆ ಕೇಂದ್ರಕ್ಕೆ ಕೊಂಡೊಯ್ಯಿರಿ.
ಪ್ರಮುಖ ದಾಖಲೆಗಳು(Important Documents)
- SSLC / SSC / ISC / 10ನೇ ತರಗತಿಯ ಅಂಕಪಟ್ಟಿ: ಜನ್ಮ ದಿನಾಂಕದ ಪುರಾವೆಯಾಗಿ.
- ಶೈಕ್ಷಣಿಕ ಪ್ರಮಾಣಪತ್ರಗಳು: 10ನೇ ತರಗತಿಯಿಂದ ಆರಂಭಿಸಿ, ಪಡೆದಿರುವ ಎಲ್ಲಾ ವಿದ್ಯಾರ್ಹತೆಗಳಿಗೆ ಸಂಬಂಧಿಸಿದ ಪ್ರಮಾಣಪತ್ರಗಳು.
- B.E. / B.Tech / B.Sc Engineering ಪದವಿ ಪ್ರಮಾಣಪತ್ರ: ಅನ್ವಯಿಸುವಂತೆ.
- ಅಂಕಪಟ್ಟಿಗಳು: ಎಲ್ಲಾ ಸೆಮಿಸ್ಟರ್ಗಳ ಅಂಕಪಟ್ಟಿಗಳು ಅಥವಾ ಅಂತಿಮ ಸಂಯೋಜಿತ ಅಂಕಪಟ್ಟಿ.
- ಮೀಸಲಾತಿ ಮತ್ತು ಇತರ ಪ್ರಮಾಣಪತ್ರಗಳು: ಅನ್ವಯಿಸುವ ಅಭ್ಯರ್ಥಿಗಳಿಗೆ ನಿಗದಿತ ನಮೂನೆಯಲ್ಲಿರುವ ಜಾತಿ, ಸಮುದಾಯ, ಅಂಗವೈಕಲ್ಯ ಅಥವಾ ಆದಾಯ ಪ್ರಮಾಣಪತ್ರ.
- ಕೆಲಸದ ಅನುಭವದ ದಾಖಲೆಗಳು: ಹಿಂದಿನ ಉದ್ಯೋಗದಿಂದ ಪ್ರಸ್ತುತ ಉದ್ಯೋಗದವರೆಗಿನ ಅನುಭವ ಪ್ರಮಾಣಪತ್ರಗಳು, ನೇಮಕಾತಿ ಪತ್ರ ಅಥವಾ ಕೆಲಸಕ್ಕೆ ಸೇರಿದ ಪತ್ರ (Joining/Appointment Letter) ಹಾಗೂ ಕೆಲಸದಿಂದ ಬಿಡುಗಡೆಗೊಂಡ ಪತ್ರ (Relieving Letter). ಪ್ರಸ್ತುತ ಉದ್ಯೋಗದ ಅನುಭವ ಪ್ರಮಾಣಪತ್ರ ನೀಡಲು ಸಾಧ್ಯವಾಗದಿದ್ದರೆ, ಮೊದಲ ಮತ್ತು ಇತ್ತೀಚಿನ ವೇತನ ಚೀಟಿಯ ಜೊತೆಗೆ ಉದ್ಯೋಗಿ ಗುರುತಿನ ಚೀಟಿಯ ಪುರಾವೆ ಸಲ್ಲಿಸಬೇಕು.
- (NOC): ಸರ್ಕಾರಿ ಸಂಸ್ಥೆಗಳು ಅಥವಾ ಸಾರ್ವಜನಿಕ ವಲಯದ ಉದ್ಯಮಗಳಲ್ಲಿ (PSUs) ಕೆಲಸ ಮಾಡುತ್ತಿರುವ ಅಭ್ಯರ್ಥಿಗಳಿಗೆ.
- ಮಾಹಿತಿ ನೀಡಿದ ಪತ್ರ (Intimation Letter): ಪ್ರಸ್ತುತ BEL ಸಂಸ್ಥೆಯಲ್ಲಿ Trainee Engineer ಆಗಿ ಕೆಲಸ ಮಾಡುತ್ತಿರುವ ಅಭ್ಯರ್ಥಿಗಳಿಗೆ.
- ಅರ್ಜಿ ಶುಲ್ಕ ಪಾವತಿ ರಸೀದಿ: SBI Collect ಮೂಲಕ ಶುಲ್ಕ ಪಾವತಿಸಿದ ಅಭ್ಯರ್ಥಿಗಳು ಪಾವತಿ ರಸೀದಿಯ ಪ್ರತಿಯನ್ನು ಹೊಂದಿರಬೇಕು.
ಪ್ರಮುಖ ಲಿಂಕ್ಗಳು(Important Links)
| ಆನ್ಲೈನ್ ಅರ್ಜಿ ಸಲ್ಲಿಸಲು | Click-Here |
| ಅಧಿಕೃತ ಅಧಿಸೂಚನೆ PDF | Click-Here |
| ಅಧಿಕೃತ ವೆಬ್ಸೈಟ್ | Click-Here |
ಕೊನೆಯ ಮಾತು
BEL Project Engineer-I ನೇಮಕಾತಿ 2026 ಬೆಂಗಳೂರಿನಲ್ಲಿ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿರುವ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಉತ್ತಮ ಅವಕಾಶವಾಗಿದೆ. ಒಟ್ಟು 14 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಅಭ್ಯರ್ಥಿಗಳಿಗೆ ಮೊದಲ ವರ್ಷದಲ್ಲಿ ತಿಂಗಳಿಗೆ ₹50,000 ವೇತನದ ಜೊತೆಗೆ ವಾರ್ಷಿಕ ₹12,000 ಹೆಚ್ಚುವರಿ ಮೊತ್ತವನ್ನು ನೀಡಲಾಗುತ್ತದೆ. ಆದರೆ ಈ ಹುದ್ದೆಗಳಿಗೆ ಸಂಬಂಧಿತ ವಿಭಾಗದಲ್ಲಿ 4 ವರ್ಷಗಳ ಎಂಜಿನಿಯರಿಂಗ್ ಪದವಿ ಹಾಗೂ 2 ವರ್ಷಕ್ಕಿಂತ ಹೆಚ್ಚಿನ ಉದ್ಯಮ ಕ್ಷೇತ್ರದ ಅನುಭವ ಕಡ್ಡಾಯವಾಗಿದೆ. ಆದ್ದರಿಂದ ಅರ್ಜಿ ಸಲ್ಲಿಸುವ ಮೊದಲು ನಿಮ್ಮ ವಿದ್ಯಾರ್ಹತೆ, ಕೆಲಸದ ಅನುಭವ ಮತ್ತು ವಯೋಮಿತಿಯನ್ನು ಪರಿಶೀಲಿಸಿ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 23 ಅಕ್ಟೋಬರ್ 2026 ಆಗಿದ್ದು, ಆಸಕ್ತ ಅಭ್ಯರ್ಥಿಗಳು ಕೊನೆಯ ಕ್ಷಣದವರೆಗೆ ಕಾಯದೆ ಅಧಿಕೃತ ಅರ್ಜಿ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸುವುದು ಉತ್ತಮ.
ಇದನ್ನು ಓದಿ:
RRB NTPC Recruitment 2026: Degree ಪಾಸಾದವರಿಗೆ 3,548 ರೈಲ್ವೆ ಹುದ್ದೆಗಳು, ಇಲ್ಲಿದೆ ಸಂಪೂರ್ಣ ಮಾಹಿತಿ |