SECL Recruitment 2026: 1055 ಹುದ್ದೆಗಳ ಭರ್ಜರಿ ಅವಕಾಶ
South Eastern Coalfields Limited (SECL) 2026 ನೇಮಕಾತಿ ಅಧಿಕೃತವಾಗಿ ಪ್ರಕಟವಾಗಿದೆ. ಈ ಬಾರಿ ಒಟ್ಟು 1055 ಹುದ್ದೆಗಳು ಹೊರಬಂದಿವೆ.
ಇದು ಕೇಂದ್ರ ಸರ್ಕಾರದ PSU ಉದ್ಯೋಗವಾಗಿದ್ದು, ಉತ್ತಮ ವೇತನ ಮತ್ತು ಭದ್ರವಾದ ಕೆಲಸದ ಅವಕಾಶವನ್ನು ನೀಡುತ್ತದೆ.
ಪ್ರಮುಖ ಹುದ್ದೆಗಳು:
| ಮೈನಿಂಗ್ ಸಿರ್ದಾರ್ (Mining Sirdar) | 577 ಹುದ್ದೆಗಳು |
| ಡೆಪ್ಯೂಟಿ ಸರ್ವೇಯರ್ (Deputy Surveyor) | 43 ಹುದ್ದೆಗಳು |
| ಸಹಾಯಕ ಫೋರ್ಮನ್ (Assistant Foreman) | 435 ಹುದ್ದೆಗಳು |
SECL Recruitment 2026
SECL ನೇಮಕಾತಿ 2026ಕ್ಕೆ ಸಂಬಂಧಿಸಿದಂತೆ ಅಧಿಸೂಚನೆಯನ್ನು ಪರೀಕ್ಷಾ ಪ್ರಾಧಿಕಾರವು ಏಪ್ರಿಲ್ 8ರಂದು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಈ ನೇಮಕಾತಿಯ ಮೂಲಕ ವಿವಿಧ ಹುದ್ದೆಗಳಿಗಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಅಭ್ಯರ್ಥಿಗಳು ನೇಮಕಾತಿಗೆ ಸಂಬಂಧಿಸಿದ ಸಂಪೂರ್ಣ ವೇಳಾಪಟ್ಟಿಯನ್ನು (schedule) ತಿಳಿದುಕೊಳ್ಳಲು ಕೆಳಗೆ ನೀಡಿರುವ ಮಾಹಿತಿಯನ್ನು ಪರಿಶೀಲಿಸಬಹುದು. ಇಲ್ಲಿ ಅರ್ಜಿ ಆರಂಭ ದಿನಾಂಕ, ಕೊನೆಯ ದಿನಾಂಕ ಹಾಗೂ ಇತರೆ ಪ್ರಮುಖ ದಿನಾಂಕಗಳ ವಿವರ ನೀಡಲಾಗಿದೆ.ಹಾಗಾಗಿ ಅರ್ಜಿ ಹಾಕುವ ಅಭ್ಯರ್ಥಿಗಳು ಈ ನೇಮಕಾತಿಗೆ ಸಂಬಂಧಪಟ್ಟ ಮುಖ್ಯ ದಿನಾಂಕವನ್ನು ಸರಿಯಾಗಿ ಓದಿಕೊಳ್ಳಿ.
ಮುಖ್ಯ ದಿನಾಂಕಗಳು (Important Dates)
| ಅಧಿಸೂಚನೆ ಪ್ರಕಟ | 08 ಏಪ್ರಿಲ್ 2026 |
| ಆನ್ಲೈನ್ ಅರ್ಜಿ ಆರಂಭ | 15 ಏಪ್ರಿಲ್ 2026 |
| ಕೊನೆಯ ದಿನಾಂಕ | 14 ಮೇ 2026 |
| ಪರೀಕ್ಷೆ ದಿನಾಂಕ | ನಂತರ ತಿಳಿಸಲಾಗುತ್ತದೆ |
ಫಲಿತಾಂಶ: ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟವಾಗುತ್ತದೆ
SECL Vacancy 2026: 1055 ಹುದ್ದೆಗಳ ಹಂಚಿಕೆ
| ಹುದ್ದೆಯ ಹೆಸರು | ಒಟ್ಟು | SC | ST | OBC-NCL | EWS | UR |
| Mining Sirdar | 577 | 110 | 86 | 98 | 58 | 225 |
| Deputy Surveyor | 43 | 8 | 6 | 7 | 4 | 18 |
| Assistant Foreman | 435 | 83 | 61 | 74 | 43 | 174 |
| ಒಟ್ಟು | 1055 | 201 | 153 | 179 | 105 | 417 |
SECL Recruitment 2026 – ಅರ್ಹತಾ ಮಾನದಂಡಗಳು
SECL Recruitment 2026 ಗೆ ಅರ್ಜಿ ಹಾಕಲು ಅಭ್ಯರ್ಥಿಗಳು age limit, age relaxation ಮತ್ತು educational qualification ಸೇರಿದಂತೆ ಎಲ್ಲಾ ಅರ್ಹತಾ ನಿಯಮಗಳನ್ನು ಕಡ್ಡಾಯವಾಗಿ ಪೂರೈಸಿರಬೇಕು. ಯಾವುದೇ ಹಂತದಲ್ಲಿ ಈ ಅರ್ಹತೆಗಳಲ್ಲಿ ಏನಾದರೂ ತಪ್ಪಿದ್ದಲ್ಲಿ ನಿಮ್ಮ ಅರ್ಜಿಯನ್ನು ನೇರವಾಗಿ ರದ್ದು ಮಾಡಲಾಗುತ್ತದೆ ಆದ್ದರಿಂದ ಅರ್ಜಿ ಹಾಕುವ ಮೊದಲು ಈ ಎಲ್ಲ ಮಾಹಿತಿಯನ್ನು ಸರಿಯಾಗಿ ಪರಿಶೀಲಿಸಿ ಅರ್ಜಿ ಹಾಕುವುದು ತುಂಬಾ ಮುಖ್ಯ.
ಅರ್ಹತೆ ವಿವರ (Eligibility)
ಶೈಕ್ಷಣಿಕ ಅರ್ಹತೆ
-
ಮೈನಿಂಗ್ ಸಿರ್ದಾರ್ (Mining Sirdar T&S Grade-C)
- ಅಭ್ಯರ್ಥಿ ಕನಿಷ್ಠ 10ನೇ ತರಗತಿ ಪಾಸಾಗಿರಬೇಕು ಅಥವಾ ಮಾನ್ಯತೆ ಪಡೆದ ಮಂಡಳಿಯಿಂದ ಸಮಾನ ವಿದ್ಯಾರ್ಹತೆ ಹೊಂದಿರಬೇಕು
- ಅಥವಾ 3 ವರ್ಷಗಳ Diploma in Mining Engineering ಇರಬೇಕು
- ಅಥವಾ Mining Engineering Degree ಇರಬೇಕು
- ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ಸಮಾನ ವಿದ್ಯಾರ್ಹತೆ ಇದ್ದರೂ ಅರ್ಜಿ ಹಾಕಬಹುದು
ತಾಂತ್ರಿಕ / ವೃತ್ತಿಪರ ಅರ್ಹತೆ (Technical / Professional Qualification)
ತಾಂತ್ರಿಕ ಪ್ರಮಾಣಪತ್ರಗಳು (Technical Certificates)
- DGMS ನಿಂದ ನೀಡಲ್ಪಟ್ಟ ಮಾನ್ಯವಾದ Mining Sirdarship Certificate of Competency (Un-Restricted) ಇರಬೇಕು. ಇದು Coal Mines Regulation 2017 ಅಡಿಯಲ್ಲಿ ಇರಬೇಕು ಮತ್ತು OC ಹಾಗೂ UG Mines ಎರಡಕ್ಕೂ ಮಾನ್ಯವಾಗಿರಬೇಕು
- ಮಾನ್ಯವಾದ Gas Testing Certificate ಇರಬೇಕು
- ಮಾನ್ಯವಾದ First Aid Certificate ಇರಬೇಕು
2. ಡೆಪ್ಯೂಟಿ ಸರ್ವೇಯರ್ (Deputy Surveyor)
ಶೈಕ್ಷಣಿಕ ಅರ್ಹತೆ
- ಮಾನ್ಯತೆ ಪಡೆದ ಮಂಡಳಿಯಿಂದ ಕನಿಷ್ಠ 10ನೇ ತರಗತಿ ಪಾಸ್ ಆಗಿರಬೇಕು ಅಥವಾ ಸಮಾನ ವಿದ್ಯಾರ್ಹತೆ ಹೊಂದಿರಬೇಕು
- ಅಥವಾ ಮಾನ್ಯತೆ ಪಡೆದ ಸಂಸ್ಥೆಯಿಂದ Mining Engineering / Mine Surveying Engineering ನಲ್ಲಿ Degree ಅಥವಾ Diploma ಹೊಂದಿರಬೇಕು
ಮಾನ್ಯ ಸರ್ವೇಯರ್ ಪ್ರಮಾಣಪತ್ರ (Surveyor Certificate)
- CMR 2017 ಅಡಿಯಲ್ಲಿ ನೀಡಲ್ಪಟ್ಟ Valid Surveyor’s Certificate of Competency (SCC) (Un-Restricted) ಇರಬೇಕು
- ಅಥವಾ Coal Mines Regulation 2017 ಪ್ರಕಾರ ಗಣಿಯಲ್ಲಿ ಸರ್ವೆಯರ್ ಆಗಿ ಕೆಲಸ ಮಾಡಲು ಅರ್ಹತೆ ನೀಡುವ ಯಾವುದೇ ಮಾನ್ಯ ಗಣಿಗಾರಿಕೆ ಪ್ರಮಾಣ ಪತ್ರ ಇರಬೇಕು
3. ಸಹಾಯಕ ಫೋರ್ಮನ್ (Assistant Foreman)
ಶೈಕ್ಷಣಿಕ ಅರ್ಹತೆ
- ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿ ಪಾಸಾಗಿರಬೇಕು ಅಥವಾ ಸಮಾನ ವಿದ್ಯಾರ್ಹತೆ ಹೊಂದಿರಬೇಕು
- ತಾಂತ್ರಿಕ / ವೃತ್ತಿಪರ ಅರ್ಹತೆ (Technical / Professional Qualification)
- ಮಾನ್ಯತೆ ಪಡೆದ ಸಂಸ್ಥೆಯಿಂದ Electrical Engineering ನಲ್ಲಿ Diploma ಅಥವಾ ಸಮಾನ ಉನ್ನತ ವಿದ್ಯಾರ್ಹತೆ ಹೊಂದಿರಬೇಕು
- ಈ ಕೋರ್ಸ್ ಕನಿಷ್ಠ 3 ವರ್ಷಗಳ ಅವಧಿಯದು ಆಗಿರಬೇಕು
ವಯೋಮಿತಿ
- ಕನಿಷ್ಠ ವಯಸ್ಸು: 18 ವರ್ಷ
- ಗರಿಷ್ಠ ವಯಸ್ಸು: 30 ವರ್ಷ
ವಯೋಮಿತಿ ಸಡಿಲಿಕೆ
| SC/ST | 5 ವರ್ಷ |
| OBC | 3 ವರ್ಷ |
| PwBD | 10 ರಿಂದ 15 ವರ್ಷ |
| Ex-servicemen | ಸರ್ಕಾರದ ನಿಯಮಗಳಂತೆ |
ಆಯ್ಕೆ ಪ್ರಕ್ರಿಯೆ (Selection Process)
SECL Recruitment 2026 ನಲ್ಲಿ ಅಭ್ಯರ್ಥಿಗಳ ಆಯ್ಕೆ ಸಂಪೂರ್ಣವಾಗಿ online Computer Based Examination (CBT) ಆಧಾರದ ಮೇಲೆ ನಡೆಯುತ್ತದೆ ಈ ಪರೀಕ್ಷೆಯಲ್ಲಿ ಒಟ್ಟು 100 MCQs ಇರುತ್ತವೆ ಅದರಲ್ಲಿ 80 ಪ್ರಶ್ನೆಗಳು technical knowledge ಮತ್ತು 20 ಪ್ರಶ್ನೆಗಳು general awareness, aptitude ಹಾಗೂ CIL/SECL ಸಂಬಂಧಿಸಿದ ಪ್ರಶ್ನೆಗಳಾಗಿರುತ್ತವೆ ಪ್ರತಿ ಸರಿಯಾದ ಉತ್ತರಕ್ಕೆ 1 mark ನೀಡಲಾಗುತ್ತದೆ ಮತ್ತು ತಪ್ಪು ಉತ್ತರಗಳಿಗೆ ಯಾವುದೇ negative marking ಇರುವುದಿಲ್ಲ.
| Computer Based Test (CBT) | ಆಯ್ಕೆ ಪ್ರಕ್ರಿಯೆ ಸಂಪೂರ್ಣವಾಗಿ CBT ಮೂಲಕ ಮಾತನಾಡುತ್ತದೆ Personal Interview ಅನ್ನು Coal India Limited ನಿಯಮದಂತೆ ರದ್ದು ಮಾಡಲಾಗಿದೆ |
| Section A – Technical Knowledge | Technical Knowledge: ಅಭ್ಯರ್ಥಿಯ ವಿಭಾಗ/ಟ್ರೇಡ್ ಆಧಾರಿತವಾಗಿ 80 Multiple Choice Questions (MCQs) ಇರುತ್ತವೆ. |
| Section B – General Awareness / Aptitude | General Awareness, Aptitude ಮತ್ತು CIL/SECL ಸಂಬಂಧಿತ ವಿಷಯಗಳಿಂದ 20 MCQs ಇರುತ್ತವೆ. |
| ಒಟ್ಟು ಪ್ರಶ್ನೆಗಳು / ಅಂಕಗಳು | 100 ಪ್ರಶ್ನೆಗಳು / 100 ಅಂಕಗಳು (ಪ್ರತಿ ಸರಿಯಾದ ಉತ್ತರಕ್ಕೆ 1 ಅಂಕ) |
| Negative Marking | ತಪ್ಪು ಉತ್ತರಗಳಿಗೆ ಯಾವುದೇ ನೆಗೆಟಿವ್ ಮಾರ್ಕಿಂಗ್ ಇರುವುದಿಲ್ಲ. |
| ಭಾಷೆ | ಪರೀಕ್ಷೆ bilingual ಆಗಿದ್ದು English ಮತ್ತು Hindi ನಲ್ಲಿ ಇರುತ್ತದೆ. ಯಾವುದೇ ವ್ಯತ್ಯಾಸ ಇದ್ದರೆ English version ಅಂತಿಮವಾಗಿ ಪರಿಗಣಿಸಲಾಗುತ್ತದೆ. |
SECL Minimum Qualifying Cut-off Marks (ಕನಿಷ್ಠ ಅರ್ಹತಾ ಅಂಕಗಳು)
| ವರ್ಗ (Category) | ಕನಿಷ್ಠ ಅರ್ಹತಾ ಅಂಕಗಳು |
| General (UR) / EWS | 45 Marks |
| OBC (NCL) / ESM | 40 Marks |
| SC / ST | 35 Marks |
ಅರ್ಜಿ ಶುಲ್ಕ (Application Fee)
| General / OBC / EWS | ₹1180 |
| SC / ST / PwBD / ಮಹಿಳೆಯರು | ಶುಲ್ಕ ಇಲ್ಲ |
ಒಮ್ಮೆ ಪಾವತಿಸಿದ ಶುಲ್ಕ ಮರಳಿ ನೀಡಲಾಗುವುದಿಲ್ಲ.
ಅರ್ಜಿ ಸಲ್ಲಿಸುವ ವಿಧಾನ (How to Apply)
- ಅಧಿಕೃತ SECL ವೆಬ್ಸೈಟ್ ಭೇಟಿ ಮಾಡಿ (https://secl-cil.in/)
- Career ವಿಭಾಗ ತೆರೆಯಿರಿ
- Recruitment Notification ಆಯ್ಕೆ ಮಾಡಿ
- ಹೊಸ ರಿಜಿಸ್ಟ್ರೇಶನ್ ಮಾಡಿ
- Login ಮಾಡಿ ಫಾರ್ಮ್ ಭರ್ತಿ ಮಾಡಿ
- ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ
- ಶುಲ್ಕ ಪಾವತಿಸಿ
- Submit ಮಾಡಿ ಪ್ರಿಂಟ್ ತೆಗೆದುಕೊಳ್ಳಿ
ಅಗತ್ಯ ದಾಖಲೆಗಳು (Required Documents)
- ಇತ್ತೀಚಿನ ಪಾಸ್ಪೋರ್ಟ್ ಸೈಜ್ ಬಣ್ಣದ ಫೋಟೋ (3 ವಾರಗಳಿಗಿಂತ ಹಳೆಯದಾಗಿರಬಾರದು,JPG/JPEG ಫಾರ್ಮಾಟ್)
- ಕಪ್ಪು ಇಂಕ್ ಪೆನ್ನಿನಿಂದ ಮಾಡಿದ ಸಹಿ (Signature – JPG/JPEG ಫಾರ್ಮಾಟ್)
- ಮೈನಿಂಗ್ ಸಿರ್ದಾರ್ ಮತ್ತು ಡೆಪ್ಯೂಟಿ ಸರ್ವೆಯರ್ ಹುದ್ದೆಗಳಿಗೆ Matriculation / Degree / Diploma ಪ್ರಮಾಣಪತ್ರ
- Assistant Foreman (Electrical) ಹುದ್ದೆಗೆ – Matriculation ಜೊತೆಗೆ Electrical Engineering Diploma / Degree ಪ್ರಮಾಣಪತ್ರ
- ಜಾತಿ ಪ್ರಮಾಣ ಪತ್ರ(OBC-NCL / SC / ST – ಅನ್ವಯಿಸಿದರೆ)
- EWS ಅಭ್ಯರ್ಥಿಗಳಿಗೆ – Income & Asset Certificate (FY 2024-25 ಆಧಾರಿತ)
- ಮಾಜಿ ಸೈನಿಕರ Discharge Certificate (ಅನ್ವಯಿಸಿದರೆ)
- PwBD ಪ್ರಮಾಣಪತ್ರ (ಅನ್ವಯಿಸಿದರೆ)
- ಸಂಬಂಧಿತ ಹುದ್ದೆಗೆ ಬೇಕಾದ Competency Certificate (Mining Sirdar / Surveyor)
- ಮೈನಿಂಗ್ ಸಿರ್ದಾರ್ ಹುದ್ದೆಗೆ ಮಾತ್ರ – Gas Testing Certificate ಮತ್ತು First Aid Certificate
ಈ ಎಲ್ಲಾ ದಾಖಲೆಗಳು ಸರಿಯಾಗಿರಬೇಕು, ಇಲ್ಲದಿದ್ದರೆ ಅರ್ಜಿ ತಿರಸ್ಕರವಾಗುವ ಸಾಧ್ಯತೆ ಇದೆ.
SECL ವೇತನ 2026 (Salary Details)
SECL ನಲ್ಲಿ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಸ್ಥಿರ ಮತ್ತು ಉತ್ತಮ ವೇತನ ವ್ಯವಸ್ಥೆ ನೀಡಲಾಗುತ್ತದೆ. ವಿಶೇಷವಾಗಿ Mining Sirdar, Dy. Surveyor ಮತ್ತು Assistant Foreman ಹುದ್ದೆಗಳಿಗೆ ಉತ್ತಮ salary structure ಇದೆ.
ಅಧಿಕೃತ ಅಧಿಸೂಚನೆಯ ಪ್ರಕಾರ ಮೂಲ ವೇತನ (Basic Salary) ಸುಮಾರು ₹47,330 ಪ್ರತಿ ತಿಂಗಳು (T&S Grade-C) ಆಗಿರುತ್ತದೆ.
ಇದರ ಜೊತೆಗೆ ಉದ್ಯೋಗಿಗಳಿಗೆ ಹಲವು ಭತ್ಯೆಗಳು (Allowances) ಕೂಡ ಸಿಗುತ್ತವೆ:
- Dearness Allowance (DA) – ಬೆಲೆ ಏರಿಕೆಯ ಆಧಾರಿತ ಭತ್ಯೆ
- House Rent Allowance (HRA) – ಮನೆ ಬಾಡಿಗೆ ಭತ್ಯೆ
- Medical Benefits – ವೈದ್ಯಕೀಯ ಸೌಲಭ್ಯಗಳು
- Provident Fund (PF) – ನಿವೃತ್ತಿ ಉಳಿತಾಯ
- ಇತರ PSU ಸೌಲಭ್ಯಗಳು ಮತ್ತು ಲಾಭಗಳು
ಈ ಎಲ್ಲಾ ಭತ್ಯೆಗಳು ಸೇರಿ ಒಟ್ಟು ಕೈಗೆ ಸಿಗುವ ವೇತನ (in-hand salary) ಇನ್ನೂ ಹೆಚ್ಚಾಗುತ್ತದೆ ಮತ್ತು ಉತ್ತಮ ಆದಾಯದ ಉದ್ಯೋಗವಾಗಿರುತ್ತದೆ.
ಕೊನೆಯ ಮಾತು
SECL Recruitment 2026 ಒಂದು ಉತ್ತಮ ಸರ್ಕಾರಿ ಉದ್ಯೋಗಾವಕಾಶವಾಗಿದೆ ಅದಕ್ಕಾಗಿ ಸರಿಯಾದ ತಯಾರಿ ಮಾಡಿಕೊಳ್ಳಿ ಇದರಿಂದ ಉತ್ತಮ ಅವಕಾಶವನ್ನು ಪಡೆದುಕೊಳ್ಳಬಹುದು ಈ ನೇಮಕಾತಿಯ ಮೂಲಕ ಉತ್ತಮ ಉದ್ಯೋಗ ಮತ್ತು ಒಳ್ಳೆಯ ವೇತನ ಹಾಗೂ PSU ಮಟ್ಟದ ಉದ್ಯೋಗ ಭದ್ರತೆ ಪಡೆಯುವ ಅವಕಾಶವಿದೆ
ಬೇಗ ಅರ್ಜಿ ಸಲ್ಲಿಸಿ ಮತ್ತು ತಯಾರಿ ಆರಂಭಿಸಿ ಸಮಯವನ್ನು ವ್ಯರ್ಥ ಮಾಡಬೇಡಿ ಇಂದಿನ ಪ್ರಶ್ನೆ ಪತ್ರಿಕೆಗಳ ಮಾದರಿಗಳನ್ನು ಗಮನಿಸಿ ಮತ್ತು ಹೆಚ್ಚಿನ ಅಭ್ಯಾಸವನ್ನು ಈಗಲೇ ಶುರು ಮಾಡಿ ಸರಿಯಾದ ಯೋಜನೆ ಮತ್ತು ಪರಿಶ್ರಮ ಇದ್ದರೆ ಆಯ್ಕೆಯಾಗುವ ಸಾಧ್ಯತೆ ತುಂಬಾ ಹೆಚ್ಚಿರುತ್ತದೆ ಆದ್ದರಿಂದ ಇಂದಿನಿಂದಲೇ ತಯಾರಿಯನ್ನು ಶುರು ಮಾಡಿ.
ಇದನ್ನು ಓದಿ:
BPL ಕಾರ್ಡ್ಗಳಿಗೆ ಶಾಕ್! 14 ಲಕ್ಷ BPL ಕಾರ್ಡ್ APLಗೆ ವರ್ಗಾವಣೆ ಪ್ರಕ್ರಿಯೆ ಆರಂಭ – ನಿಮ್ಮ ಕಾರ್ಡ್ ಸುರಕ್ಷಿತವೇ? ಈಗಲೇ ಚೆಕ್ ಮಾಡಿ |