Telegram Join My Telegram WhatsApp Join My WhatsApp

SSC Selection Posts Recruitment 2026: 3003 ಹುದ್ದೆಗಳ ಭರ್ಜರಿ ನೇಮಕಾತಿ – SSLC/PUC/ಪದವಿ ಇದ್ದರೆ ಸಾಕು! ಈಗಲೇ Apply ಮಾಡಿ.

SSC Selection Posts Recruitment 2026: 3003 ಹುದ್ದೆಗಳ ಭರ್ಜರಿ ನೇಮಕಾತಿ

SSC Selection Posts Recruitment 2026 – ಸಂಪೂರ್ಣ ಮಾಹಿತಿ

ನೀವು ಒಂದು ಸ್ಥಿರ ಸರ್ಕಾರಿ ಉದ್ಯೋಗವನ್ನು ಹುಡುಕುತ್ತಿದ್ದೀರಾ?

 ಹಾಗಾದ್ರೆ ನಿಮಗಾಗಿ ಇದು golden opportunity ಅಂತಲೇ ಹೇಳ್ಬೇಕು!

SSC Selection Posts Recruitment 2026 ಮೂಲಕ ಈಗ ದೊಡ್ಡ ಮಟ್ಟದ ನೇಮಕಾತಿ ಪ್ರಕಟವಾಗಿದೆ. ಒಟ್ಟು 3003 ಹುದ್ದೆಗಳು ಇದ್ದು, 10th, 12th ಅಥವಾ Graduation ಮಾಡಿದವರು ಕೂಡ apply ಮಾಡಬಹುದು ಇದು ಕೇವಲ job ಅಲ್ಲ… future secure ಆಗೋ chance
Union Government departments ನಲ್ಲಿ ಕೆಲಸ ಮಾಡುವ ಅವಕಾಶ ಸಿಗೋದು ಅಂದ್ರೆ salary, job security, growth ಎಲ್ಲವೂ strong ಆಗಿರುತ್ತೆ 

 ಆದ್ರೆ ಒಂದು ಮುಖ್ಯ ವಿಷಯ:
ಅರ್ಜಿ ಹಾಕೋದಕ್ಕೆ  ಮುಂಚೆ ಅರ್ಹತೆ, ಪ್ರಮುಖ ದಿನಾಂಕಗಳು, ಆಯ್ಕೆ ಪ್ರಕ್ರಿಯೆ ಎಲ್ಲವನ್ನು ಸ್ಪಷ್ಟವಾಗಿ ತಿಳಿದುಕೊಳ್ಳಿ ಇಲ್ಲವಾದರೆ ಉತ್ತಮ ಅವಕಾಶ ಕಾಯಿತುವ ಸಾಧ್ಯತೆ ಇರುತ್ತದೆ. ಅದರಲ್ಲೂ ಮುಖ್ಯವಾಗಿ ಪ್ರಮುಖ ದಿನಾಂಕಗಳನ್ನು ಸರಿಯಾಗಿ ನೋಡಿಕೊಳ್ಳಿ. ಅದಕ್ಕಾಗಿ ಈ ಹುದ್ದೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವು ಇಲ್ಲಿ ನೀಡಿದ್ದೇವೆ ಸರಿಯಾಗಿ  ಓದಿ ಅರ್ಜಿಯನ್ನು ಹಾಕಿ.

ಅದರಿಗಾಗಿ ಇಲ್ಲಿ complete ಮಾಹಿತಿ easy ಆಗಿ ಕೊಡ್ತೀವಿ

ಸಂಸ್ಥೆ ಮಾಹಿತಿ (Overview)

ವಿವರಗಳು:

ಸಂಸ್ಥೆ ಹೆಸರು Staff Selection Commission (SSC)
ಹುದ್ದೆ ಹೆಸರು Selection Posts (Phase XIV)
ಒಟ್ಟು ಹುದ್ದೆಗಳು 3003
ಕೆಲಸದ ಸ್ಥಳ ಭಾರತದಲ್ಲಿ ಎಲ್ಲೆಡೆ
ಶೈಕ್ಷಣಿಕ ಅರ್ಹತೆ 10ನೇ / 12ನೇ / ಪದವಿ (Degree)
ವರ್ಗ ಕೇಂದ್ರ ಸರ್ಕಾರದ ಉದ್ಯೋಗ
ಅಧಿಕೃತ ವೆಬ್‌ಸೈಟ್ ssc.gov.in

ಸರಳವಾಗಿ ಹೇಳ್ಬೇಕಾದ್ರೆ – ಇದು ಭಾರತ ಮಟ್ಟದ ಸರ್ಕಾರಿ ಉದ್ಯೋಗಗಳ ನೇಮಕಾತಿ ಸಂಸ್ಥೆ

ಇಲ್ಲಿ dates miss ಮಾಡಿದ್ರೆ… ಅವಕಾಶವೇ ಹೋಗುತ್ತೆ 

ನಾವು ಅರ್ಜಿ ಹಾಕುವ ಮುಂಚೆ ಈ ದಿನಾಂಕಗಳು  ತುಂಬಾ important  ಏಕೆಂದರೆ ನಾವು ಈ ನೇಮಕಾತಿಗೆ ಎಲ್ಲಾ ತಯಾರಿ ಮಾಡಿಕೊಂಡು ಅರ್ಜಿ ಹಾಕುವ  ದಿನಾಂಕವನ್ನು  ಮಿಸ್ ಮಾಡಿದರೆ  ನಾವು ಇಷ್ಟು ದಿನ  ಮಾಡಿದ ಪ್ರಯತ್ನ ಎಲ್ಲ ವಿಫಲವಾಗುತ್ತದೆ ಆದ್ದರಿಂದ ಪ್ರತಿಯೊಬ್ಬರಿಗೂ ಅರ್ಜಿ ಹಾಕುವ ಮುಂಚೆ ಈ ದಿನಾಂಕವನ್ನು ಸರಿಯಾಗಿ  ಓದಿಕೊಳ್ಳಿ.

ಅರ್ಜಿ ಆರಂಭ ದಿನಾಂಕ: 13 ಏಪ್ರಿಲ್ 2026

ಅರ್ಜಿ ಆರಂಭ ದಿನಾಂಕ 13 ಏಪ್ರಿಲ್ 2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 04 ಮೇ 2026 (ರಾತ್ರಿ 11:00 ವರೆಗೆ)
ಫೀ ಪಾವತಿಗೆ ಕೊನೆಯ ದಿನಾಂ 05 ಮೇ 2026
ತಿದ್ದುಪಡಿ ಅವಕಾಶ 11 ಮೇ – 13 ಮೇ 2026
ಪರೀಕ್ಷೆ ದಿನಾಂಕ ಜೂನ್ 2026 (ತಾತ್ಕಾಲಿಕ)

Imp Tip: Last dateಗೆ wait ಮಾಡ್ಬೇಡಿ… server slow ಆಗೋ chance ಇದೆ

ಖಾಲಿ ಹುದ್ದೆಗಳ ವಿವರ (Vacancy Details)

ಈ ನೇಮಕಾತಿನಲ್ಲಿ total 3003 posts ಇದೆ

ವರ್ಗವಾರು ಹುದ್ದೆಗಳ ವಿವರ (SSC Recruitment 2026)

ಸಾಮಾನ್ಯ ವರ್ಗ (UR) 1,534 ಹುದ್ದೆಗಳು
OBC 667 ಹುದ್ದೆಗಳು
SC 346 ಹುದ್ದೆಗಳು
EWS 271 ಹುದ್ದೆಗಳು
ST 185 ಹುದ್ದೆಗಳು
ಒಟ್ಟು ಹುದ್ದೆಗಳು 3,003

 

ವಿದ್ಯಾರ್ಹತೆ (Educational Qualification)

ಈ ನೇಮಕಾತಿಯ ಅತಿ ದೊಡ್ಡ advantage ಏನು ಗೊತ್ತಾ?
ಇಲ್ಲಿ ವಿಭಿನ್ನ ಶಿಕ್ಷಣ ಮಟ್ಟದ ಅಭ್ಯರ್ಥಿಗಳಿಗೆ ಅವಕಾಶ ಇದೆ!

ಆದ್ದರಿಂದ ಈ ಶಿಕ್ಷಣ ಪಡೆದ ವಿದ್ಯಾರ್ಥಿಗಳಿಗೆ ಒಂದು ಉತ್ತಮ ಅವಕಾಶವಾಗಿದೆ.

  • ಮ್ಯಾಟ್ರಿಕ್ಯುಲೇಷನ್ ಲೆವಲ್ → SSLC (10th pass)
  •  ಹೈಯರ್ ಸೆಕೆಂಡರಿ ಲೆವಲ್ → PUC (12th pass)
  • ಗ್ರ್ಯಾಜುಯೇಷನ್ ಲೆವಲ್ ಪದವಿ (Degree)

 ನೀವು ಯಾವ ಹುದ್ದೆಗೆ ಅರ್ಜಿ ಹಾಕುತ್ತೀರೋ, ಆ ಹುದ್ದೆಗೆ ಅನುಗುಣವಾದ ಅರ್ಹತೆ ಇರಬೇಕು.

ವಯೋಮಿತಿ (Age Limit)

  • ಕನಿಷ್ಠ ವಯಸ್ಸು:18  ವರ್ಷ
  • ಗರಿಷ್ಠ ವಯಸ್ಸು:25 ರಿಂದ 42  ವರ್ಷ ( ಇದು ಪೋಸ್ಟ್ ಗೆ ಅನುಗುಣವಾಗಿ ಬದಲಾಗುತ್ತದೆ)

 ವಯಸ್ಸು ಲೆಕ್ಕ ಹಾಕುವುದು: 01  ಜನವರಿ 2026  ಆಧಾರದ ಮೇಲೆ ಮಾಡಲಾಗುತ್ತದೆ.

 ವಯೋಮಿತಿ ಸಡಿಲಿಕೆ ಮಾಹಿತಿ – Age Relaxation 

Government rules ಪ್ರಕಾರ extra relaxation ಸಿಗುತ್ತೆ

  • SC/ST → 5 ವರ್ಷಗಳ ಸಡಿಲಿಕೆ
  • OBC → 3 ವರ್ಷಗಳ ಸಡಿಲಿಕೆ
  • PwBD → 10 ವರ್ಷಗಳ ಸಡಿಲಿಕೆ
  • Ex-Servicemen → 3 ವರ್ಷಗಳ ಸಡಿಲಿಕೆ (ಸೇವೆಯ ನಂತರ)

ಇದು reserved category ಅಭ್ಯರ್ಥಿಗಳಿಗೆ ದೊಡ್ಡ ಅವಕಾಶ

ವೇತನ (Salary Details)

  • SSC jobs ಅಂದ್ರೆ salary + benefits super ಇರುತ್ತೆ
  • ವೇತನ ಮಟ್ಟ (Pay Level): Level 1 ರಿಂದ Level 7 (7ನೇ CPC ಪ್ರಕಾರ)
  • ಇದರಲ್ಲಿ ಮೂಲ ವೇತನದ ಜೊತೆಗೆ DA (ಮಹಂಗಾಯಿ ಭತ್ಯೆ), HRA (ಮನೆ ಬಾಡಿಗೆ ಭತ್ಯೆ) ಮತ್ತು ಇತರ ಎಲ್ಲ ಭತ್ಯೆಗಳು ಸೇರಿ ಒಳ್ಳೆಯ ಹಾಗೂ ಸ್ಥಿರ ಆದಾಯ ಸಿಗುತ್ತದೆ.

ಅರ್ಜಿ ಶುಲ್ಕ (Application Fee):

  • ಸಾಮಾನ್ಯ / OBC / EWS (ಪುರುಷರು): ₹100
  • ಮಹಿಳೆಯರು / SC / ST / PwBD / Ex-Servicemen: ಉಚಿತ ಯಾವುದೇ ಅರ್ಜಿ ಶುಲ್ಕ ಪಾವತಿಸುವಂತಿಲ್ಲ
  • ಪಾವತಿ ಕೇವಲ ಆನ್‌ಲೈನ್ ಮೂಲಕ ಮಾತ್ರ ಸ್ವೀಕರಿಸಲಾಗುತ್ತದೆ

ಪರೀಕ್ಷಾ ವಿಧಾನ & ಆಯ್ಕೆ ಪ್ರಕ್ರಿಯೆ (Exam Pattern & Selection Process)

ಈ ನೇಮಕಾತಿ ಪ್ರಕ್ರಿಯೆ ಕೆಲವು ಹಂತಗಳಲ್ಲಿ ನಡೆಯುತ್ತದೆ. ಸುಲಭವಾಗಿ ಅರ್ಥವಾಗುವಂತೆ ನಾವು ಇಲ್ಲಿ ವಿವರಿಸಿದ್ದೇವೆ

 ಆಯ್ಕೆ ಹಂತಗಳು
1 ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT)

ಒಟ್ಟು 200  ಅಂಕಗಳಿಗೆ ಪರೀಕ್ಷೆ ನಡೆಯುತ್ತದೆ ಮತ್ತು ಪ್ರತಿ ತಪ್ಪು ಉತ್ತರಕ್ಕೆ ಅಂಕ ಕಡಿತ ಇರುತ್ತದೆ ಇದು ಸ್ಪರ್ಧಾತ್ಮಕ  ಪರೀಕ್ಷೆಯಲ್ಲಿ ಬಹಳ ಮುಖ್ಯವಾದ  ಅಭ್ಯರ್ಥಿಗಳು ಜಾಗರೂಕತೆಯಿಂದ   ಉತ್ತರಿಸಬೇಕು ಮತ್ತು ಇದರಲ್ಲಿ ಸಮಯ ನಿರ್ವಹಣೆ ಕೂಡ ಸರಿಯಾಗಿ ಮಾಡಬೇಕು

2 ಸ್ಕಿಲ್ ಪರೀಕ್ಷೆ (Skill Test)

ಹುದ್ದೆಯ ಅವಶ್ಯಕತೆಗೆ ಅನುಗುಣವಾಗಿ ನಡೆಯುತ್ತದೆ Typing, data entry  ಅಥವಾ ಬೇರೆ practical skills ಇರಬಹುದು ಇಲ್ಲಿ ಅಭ್ಯರ್ಥಿಯ  ಕೌಶಲ್ಯವನ್ನು ಪರೀಕ್ಷಿಸಲಾಗುತ್ತದೆ.

3 ದಾಖಲೆ ಪರಿಶೀಲನೆ (Document Verification)

ನಿಮ್ಮ ಎಲ್ಲ ಮೂಲ ದಾಖಲೆಗಳನ್ನು ಪರಿಶೀಲಾಗುತ್ತದೆ ಈ ಹಂತದಲ್ಲಿ ಅಭ್ಯರ್ಥಿಯ ವಿದ್ಯಾರ್ಹತೆ, ಗುರುತಿನ ಚೀಟಿ, ಮತ್ತು ಇತರೆ ಅಗತ್ಯ ದಾಖಲೆಗಳನ್ನು ಸೂಕ್ಷ್ಮವಾಗಿ ಪರಿಶೀಸಲಾಗುತ್ತದೆ ಆದ್ದರಿಂದ ನಿಮ್ಮಎಲ್ಲ ಮಾಹಿತಿ ದಾಖಲೆಗಳು ನಿಖರವಾಗಿರಬೇಕು  ಮತ್ತು ಈ ಎಲ್ಲ ದಾಖಲೆಗಳು  ಸರಿಯಾಗಿದ್ದರೆ ಮಾತ್ರ ಮುಂದಿನ ಆಯ್ಕೆ ಹಂತಕ್ಕೆ ಅವಕಾಶ ನೀಡಲಾಗುತ್ತದೆ

4 ವೈದ್ಯಕೀಯ ಪರೀಕ್ಷೆ (Medical Test)

ಆರೋಗ್ಯದ ಸ್ಥಿತಿ ಪರಿಶೀಲನೆ ಮಾಡಲಾಗುತ್ತದೆ  ಈ ವೈದ್ಯಕೀಯ ಪರೀಕ್ಷೆಯಲ್ಲಿ ಅಭ್ಯರ್ಥಿಯ ದೈಹಿಕ ಆರೋಗ್ಯ  ದೃಷ್ಟಿ ಹಾಗೂ ಫಿಟ್ನೆಸ್ ಅನ್ನು ಪರಿಶೀಲಿಸಲಾಗುತ್ತದೆ.

ಪರೀಕ್ಷಾ ಪಠ್ಯಕ್ರಮ (Exam Syllabus)

CBT ಪರೀಕ್ಷೆಯಲ್ಲಿ ಮುಖ್ಯವಾಗಿ 4 ವಿಭಾಗಗಳು ಇರುತ್ತವೆ:

  • ಜನರಲ್ ಇಂಟೆಲಿಜೆನ್ಸ್ (General Intelligence) – 25 ಪ್ರಶ್ನೆಗಳು (50 ಅಂಕ)
  • ಸಾಮಾನ್ಯ ಜ್ಞಾನ (General Knowledge) – 25 ಪ್ರಶ್ನೆಗಳು (50 ಅಂಕ)
  • ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್ (Quantitative Aptitude) – 25 ಪ್ರಶ್ನೆಗಳು (50 ಅಂಕ)
  • ಇಂಗ್ಲಿಷ್ ಭಾಷೆ (English Language) – 25 ಪ್ರಶ್ನೆಗಳು (50 ಅಂಕ)

ಒಟ್ಟಾರೆ ಸರಳವಾಗಿ ಹೇಳ್ಬೇಕಂದ್ರೆ, ಲಾಜಿಕ್, ಜ್ಞಾನ, ಗಣಿತ ಮತ್ತು ಇಂಗ್ಲಿಷ್ ಈ ನಾಲ್ಕು ವಿಭಾಗಗಳಲ್ಲಿ ನಿಮ್ಮ ಸಾಮರ್ಥ್ಯವನ್ನು ಪರೀಕ್ಷಿಸಲಾಗುತ್ತದೆ.

ಬೇಕಾಗುವ ದಾಖಲೆಗಳು (Required Documents)

  1. ಆಧಾರ್ ಕಾರ್ಡ್
  2. ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ – ಜನ್ಮ ದಿನಾಂಕ (DOB proof)ಗಾಗಿ
  3. 12ನೇ / ಪದವಿ ಪ್ರಮಾಣಪತ್ರಗಳು
  4. ಜಾತಿ ಪ್ರಮಾಣಪತ್ರ – ಅನ್ವಯಿಸಿದರೆ ಮಾತ್ರ
  5. ವಿಕಲಚೇತನ ಪ್ರಮಾಣಪತ್ರ
  6. NOC (No Objection Certificate) – ಸರ್ಕಾರಿ ನೌಕರರಿಗೆ ಮಾತ್ರ
  7. ಸಹಿ – JPEG ಫಾರ್ಮಾಟ್‌ನಲ್ಲಿ

 ಸಣ್ಣ ತಪ್ಪು ಕೂಡ ಇದ್ದರೆ ಅರ್ಜಿ ತಿರಸ್ಕಾರವಾಗುವ ಸಾಧ್ಯತೆ ಇದೆ.

ಅರ್ಜಿ ಸಲ್ಲಿಸುವ ವಿಧಾನ (How to Apply)

ಅರ್ಹ ಅಭ್ಯರ್ಥಿಗಳು ಕೆಳಗಿನ ಹಂತಗಳನ್ನು ಅನುಸರಿಸಿ ಸುಲಭವಾಗಿ ಅರ್ಜಿ ಹಾಕಬಹುದು 

  • ಮೊದಲು ಅಧಿಕೃತ ವೆಬ್‌ಸೈಟ್ ssc.gov.in ಗೆ ಭೇಟಿ ನೀಡಿ.
  • ನಂತರ ಇತ್ತೀಚಿನ ಅಧಿಸೂಚನೆಯನ್ನು ಸರಿಯಾಗಿ ಓದಿ, ನೀವು ಅರ್ಹರಾಗಿದ್ದೀರಾ ಎಂದು ಖಚಿತಪಡಿಸಿಕೊಳ್ಳಿ.
  • ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ ಬಳಸಿ ನೋಂದಣಿ (Registration) ಮಾಡಿ.
  • ಆನ್‌ಲೈನ್ ಅರ್ಜಿ ಫಾರ್ಮ್‌ನಲ್ಲಿ ಕೇಳಿರುವ ಎಲ್ಲಾ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ.
  • ಇತ್ತೀಚಿನ ಫೋಟೋ ಮತ್ತು ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
  • ನಿಗದಿತ ಅರ್ಜಿ ಶುಲ್ಕವನ್ನು ಪಾವತಿಸಿ, ನಂತರ ಫಾರ್ಮ್ ಅನ್ನು Submit ಮಾಡಿ.
  • ಕೊನೆಯಲ್ಲಿ ಅರ್ಜಿ ಫಾರ್ಮ್‌ನ ಒಂದು ಪ್ರತಿಯನ್ನು ಪ್ರಿಂಟ್ ತೆಗೆದು ಇಟ್ಟುಕೊಳ್ಳಿ.ಇದು ತುಂಬಾ ಅವಶ್ಯಕ

 ಸರಿಯಾಗಿ ಎಲ್ಲ ಹಂತಗಳನ್ನು ಪೂರ್ಣಗೊಳಿಸಿದರೆ ಮಾತ್ರ ಅರ್ಜಿ ಮಾನ್ಯವಾಗುತ್ತದೆ, ಆದ್ದರಿಂದ ಜಾಗರೂಕತೆಯಿಂದ ಭರ್ತಿ ಮಾಡುವುದು ಉತ್ತಮ

ತಯಾರಿ ಸಲಹೆಗಳು (Best Strategy)

ಪರೀಕ್ಷೆ ಪಾಸ್ ಮಾಡ್ಬೇಕಾ? ಇದನ್ನು ಫಾಲೋ ಮಾಡಿ 

  • Reasoning ಅನ್ನು ಪ್ರತಿದಿನ ಅಭ್ಯಾಸ ಮಾಡಿ
  •  ಪ್ರಚಲಿತ ಘಟನೆಗಳು (Current Affairs) ಓದಿ ಅಪ್‌ಡೇಟ್ ಆಗಿರಿ
  •  ಗಣಿತ ಸಮಸ್ಯೆಗಳನ್ನು ನಿಯಮಿತವಾಗಿ ಅಭ್ಯಾಸ ಮಾಡಿ
  • ಇಂಗ್ಲಿಷ್ ವ್ಯಾಕರಣವನ್ನು ಉತ್ತಮಗೊಳಿಸಿ
  •  ಹಿಂದಿನ ವರ್ಷದ ಪ್ರಶ್ನೆಪತ್ರಿಕೆಗಳನ್ನು ಅಭ್ಯಾಸ ಮಾಡಿ

 ನಿಯಮಿತ ಅಭ್ಯಾಸ ಮಾಡಿದರೆ ಆಯ್ಕೆ ಆಗುವ ಅವಕಾಶ ಖಂಡಿತ ಹೆಚ್ಚಾಗುತ್ತದೆ

ಪ್ರಮುಖ ದಿನಾಂಕಗಳು (Important Dates)

ಅರ್ಜಿ ಆರಂಭ ದಿನಾಂಕ 13 ಏಪ್ರಿಲ್ 2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 04 ಮೇ 2026 (ರಾತ್ರಿ 11:00 ವರೆಗೆ)
ಅಧಿಕೃತ ವೆಬ್‌ಸೈಟ್ ssc.gov.in

 

ಕೊನೆಯ ಮಾತು

ಇದು ಸರ್ಕಾರಿ  ಉದ್ಯೋಗಕ್ಕಾಗಿ ಒಳ್ಳೆಯ ಮತ್ತು ಒಂದು ಅದ್ಭುತಾವಕಾಶ ಅದಕ್ಕಾಗಿ ಸರಿಯಾದ ತಯಾರಿ ಮಾಡಿಕೊಂಡು ಅರ್ಜಿ ಹಾಕಿ ಭವಿಷ್ಯವನ್ನು ಸುರಕ್ಷಿತವಾಗಿ ನಿರ್ಮಿಸಿಕೊಳ್ಳಿ ಮತ್ತು ಉತ್ತಮ career ಗೆ ಒಂದು ಹೆಜ್ಜೆ ಮುಂದಾಗಿರಿ ಮತ್ತು  ಮತ್ತು ಮುಖ್ಯ ವಿಷಯ ಏನಂದರೆ  ಅರ್ಜಿಯ ಕೊನೆಯ ದಿನಾಂಕ ತನಕ ಕಾಯಬೇಡಿ ಆದಷ್ಟು ಬೇಗ ಅರ್ಜಿಯನ್ನು ಹಾಕಿ ಕೊನೆಯ ಸಮಯದಲ್ಲಿ ಸರ್ವರ್ ಪ್ರಾಬ್ಲಮ್ ಬರಬಹುದು.

ಇದನ್ನು ಓದಿ:      

Vikas Bank Recruitment 2026 – 46 ಹುದ್ದೆಗಳು Freshersಗೂ ಅವಕಾಶ! ಈಗಲೇ ಅರ್ಜಿ ಹಾಕಿ

Leave a Comment