RCB vs LSG IPL 2026: ಆರ್‌ಸಿಬಿ ಟಾಪ್‌ಗೆ ಎಂಟ್ರಿ!
ಆರ್‌ಸಿಬಿ ಫ್ಯಾನ್ಸ್‌ಗೆ ಸಖತ್ ಖುಷಿ ಸುದ್ದಿ!
ಐಪಿಎಲ್ 2026ನಲ್ಲಿ ಆರ್‌ಸಿಬಿ(RCB) ತಂಡ ಇದೀಗ ಪಾಯಿಂಟ್ಸ್ ಟೇಬಲ್ ಟಾಪ್ ಏರಿದೆ ಅಂದರೆ ಅದು ಸಣ್ಣ ವಿಷಯ ಅಲ್ಲ!
ಈ ಬಾರಿ ತಂಡದ performance ನೋಡಿದ್ರೆ“Ee sala cup namde” ಅನ್ನೋ confidence ಮತ್ತೆ ಹೆಚ್ಚಾಗಿದೆ.
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ RCB vs LSG ಪಂದ್ಯದಲ್ಲಿ, ಆರ್‌ಸಿಬಿ ಸಂಪೂರ್ಣ dominance ತೋರಿಸಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಸುಲಭವಾಗಿ ಮಣಿಸಿದೆ.
- ಇದು ಸತತ ಎರಡನೇ ಗೆಲುವು
- ಒಟ್ಟು 5 ಪಂದ್ಯಗಳಲ್ಲಿ 4 ಗೆಲುವು
- 8 ಪಾಯಿಂಟ್ಸ್ + strong net run rate
ಇದರಿಂದ, ಆರ್‌ಸಿಬಿ ಈಗ ಲೀಗ್‌ನ most dangerous team ಆಗಿ ಕಾಣಿಸುತ್ತಿದೆ
ಪಂದ್ಯದ ಒಂದು ನೋಟ – Match Overview
-
ಪಂದ್ಯ ವಿವರ
| ಸ್ಥಳ | ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು |
| ಪಂದ್ಯ | RCB vs LSG |
2. ಸ್ಕೋರ್ ವಿವರ
| ಲಕ್ನೋ ಸೂಪರ್ ಜೈಂಟ್ಸ್ | 146 ಆಲ್ ಔಟ್ (20 ಓವರ್) |
| ಆರ್‌ಸಿಬಿ | 147/5 (15.1 ಓವರ್) |
3. ಫಲಿತಾಂಶ
- ಆರ್‌ಸಿಬಿ 5 ವಿಕೆಟ್‌ಗಳಿಂದ ಭರ್ಜರಿ ಗೆಲುವು ಸಾಧಿಸಿದೆ!
ಚಿನ್ನಸ್ವಾಮಿ ಮೈದಾನದಲ್ಲಿ ಆರ್ಸಿಬಿ ಹೊಸ ಇತಿಹಾಸ
ಬೆಂಗಳೂರು ಎಂ ಚಿನ್ನಸ್ವಾಮಿ ಕ್ರೀಡಾಂಗಣ ಸಾಮಾನ್ಯವಾಗಿ ಬ್ಯಾಟಿಂಗ್ ಪ್ಯಾರಡೈಸ್ ಎಂದು ಪ್ರಸಿದ್ಧ
ಆದರೆ ಈ ಬಾರಿ ಬೌಲರ್‌ಗಳೇ ಸಂಪೂರ್ಣವಾಗಿ ಮೇಲುಗೈ ಸಾಧಿಸಿದರು!
ಮತ್ತೊಂದು ಆಸಕ್ತಿದಾಯಕ ವಿಚಾರ ಏನೆಂದರೆ
- ಈ ಹಿಂದೆ LSG ತಂಡವು RCB ವಿರುದ್ಧ ಇಲ್ಲಿ ಎರಡು ಪಂದ್ಯಗಳಲ್ಲಿ ಜಯ ಸಾಧಿಸಿತ್ತು
- ಆದರೆ ಈ ಬಾರಿ RCB ಮೊದಲ ಬಾರಿಗೆ LSG ಅನ್ನು ಎಲ್ಲರಿಗೆ ಈ ಮೈದಾನದಲ್ಲಿ ಸೋಲಿಸಿದೆ
ಇದು ಆರ್‌ಸಿಬಿ ಅಭಿಮಾನಿಗಳಿಗೆ ಒಂದು ವಿಶೇಷ ಕ್ಷಣವಾಗಿದೆ.
ಟಾಸ್ ಮತ್ತು ಆರಂಭ: ಪಾಟಿದಾರ್ ಸ್ಮಾರ್ಟ್ ನಿರ್ಧಾರ
ಆರ್‌ಸಿಬಿ ನಾಯಕ ರಜತ್ ಪಾಟಿದಾರ್ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿದರು ಇದು ಪಂದ್ಯದಲ್ಲಿ ಪ್ರಮುಖ ಟರ್ನಿಂಗ್ ಪಾಯಿಂಟ್ ಆಗಿತು ಎಂದು ಹೇಳಬಹುದು
ಯಾಕಂದ್ರೆ:
- ಪಿಚ್ಚಿ ಸಾಮಾನ್ಯವಾಗಿ ಬ್ಯಾಟಿಂಗ್ ಗೆ ಅನುಕೂಲಕರವಾಗಿತ್ತು
- ಆದರೆ ಆರಂಭದಲ್ಲೇ ಒತ್ತಡ ಸೃಷ್ಟಿಸಿದರೆ ಚೇಸಿಂಗ್ ಸುಲಭವಾಗುತ್ತದೆ
ಆರ್ಸಿಬಿ ಬೌಲರ್ಗಳು ತಮ್ಮ ಯೋಜನೆಯನ್ನು ಪೂರ್ತಿಯಾಗಿ ಜಾರಿಗೊಳಿಸಿದರು ಮತ್ತು ಅದ್ಭುತವಾಗಿ ನಿರ್ವಹಿಸಿದ್ದರು.
LSG ಬ್ಯಾಟಿಂಗ್ ಕುಸಿತ: ಆರಂಭದಲ್ಲೇ ಶಾಕ್!
ಲಕ್ನೋ ತಂಡವು ಪಂದ್ಯ ಆರಂಭವಾಗುತ್ತಿದ್ದಂತೆಯೇ ಭಾರೀ ಒತ್ತಡಕ್ಕೆ ಸಿಲುಕಿತು ಮತ್ತು ತಂಡದ ಯೋಜನೆಗಳು ಮೊದಲ ಹಂತದಲ್ಲೇ ಹಾಳಾದವು.
ಟಾಪ್ ಆರ್ಡರ್ ವೈಫಲ್ಯ
- ಐಡೆನ್ ಮಾರ್ಕ್ರಾಮ್ – ಕೇವಲ 12 ರನ್
- ರಿಷಭ್ ಪಂತ್ – ಗಾಯದಿಂದ ಹೊರಗುಳಿದರು
- ಮಿಡಲ್ ಆರ್ಡರ್ ಕೂಡ ಸ್ಥಿರತೆ ತೋರಲಿಲ್ಲ
ಪವರ್‌ಪ್ಲೇ ಒಳಗೇ LSG ಸಂಪೂರ್ಣವಾಗಿ ಒತ್ತಡಕ್ಕೆ ಸಿಲುಕಿತು ಮತ್ತು innings ಆರಂಭದಲ್ಲೇ ಕುಸಿತ ಕಂಡಿತು.
Big Update: ರಿಷಭ್ ಪಂತ್ ಗಾಯ!
ಪಂದ್ಯದ biggest talking point ಅಂದ್ರೆ ರಿಷಭ್ ಪಂತ್ injury.
- ಜೋಶ್ ಹ್ಯಾಜಲ್‌ವುಡ್ ಎಸೆತದಲ್ಲಿ ಚೆಂಡು ಮೊಣಕೈಗೆ ಬಡಿತ
- ತೀವ್ರ ನೋವಿನಿಂದ ತಕ್ಷಣ ಮೈದಾನ ತೊರೆದರು
- Retired hurt ಆಗಿ ಹೊರಹೋದರು
ನಂತರ ಮತ್ತೆ ಬಂದರೂ:
ಕೇವಲ 1 ರನ್ ಮಾಡಿ ಔಟ್
ಇದು LSG ತಂಡಕ್ಕೆ huge setback ಆಗಿತ್ತು
ಮಿಡಲ್ ಆರ್ಡರ್ ಹೋರಾಟ: ಬಡೋನಿ ಮತ್ತು ಚೌಧರಿ ರಕ್ಷಣೆ
ಎಲ್ಲರೂ flop ಆದಾಗ:
- ಆಯುಷ್ ಬಡೋನಿ – 38 runs
- ಮುಕುಲ್ ಚೌಧರಿ – 39 runs
ಇಬ್ಬರೂ ಸೇರಿ ತಂಡ ಸಂಪೂರ್ಣ ಕುಸಿಯದಂತೆ ತಡೆದರು.
ಇವರಿಲ್ಲದಿದ್ದರೆ score 120 ಕೂಡ ಆಗಿರಲಿಲ್ಲ!
RCB Bowling Masterclass
ಆರ್‌ಸಿಬಿ ಬೌಲರ್‌ಗಳು literally match dominate ಮಾಡಿದರು
ಪ್ರಮುಖ ವಿಕೆಟ್ ಟೇಕರ್ಸ್:
- ರಸಿಕ್ ದಾರ್ – 4 ವಿಕೆಟ್
- ಭುವನೇಶ್ವರ್ ಕುಮಾರ್ – 3 ವಿಕೆಟ್
- ಕೃನಾಲ್ ಪಾಂಡ್ಯ – 2 ವಿಕೆಟ್
- ಜೋಶ್ ಹ್ಯಾಜಲ್‌ವುಡ್ – 1 ವಿಕೆಟ್
Line & length + variation = perfect combo
ಈ performance ನೋಡಿದ್ರೆ, RCB bowling ಈಗ top level ಅಂತ ಹೇಳ್ಬೋದು!
ಚೇಸ್ ಸ್ಟೋರಿ: ಕೊಹ್ಲಿ ಕ್ಲಾಸ್!
147 ರನ್ ಟಾರ್ಗೆಟ್ IPL ನಲ್ಲಿ ಸಾಮಾನ್ಯವಾಗಿ ಚಿಕ್ಕದಾಗಿರಬಹುದು ಆದರೆ ಸರಿಯಾದ ಆರಂಭ ಬೇಕು ಅದನ್ನು ವಿರಾಟ್ ಕೊಹ್ಲಿ ಭರ್ಜರಿಯಾಗಿ ನಿರ್ವಹಿಸಿದರು.
ವಿರಾಟ್ ಕೊಹ್ಲಿ ಇನಿಂಗ್ಸ್:
- 34 ಬಾಲ್‌ಗಳು
- 49 ರನ್‌ಗಳು
- 6 ಫೋರ್‌ಗಳು + 1 ಸಿಕ್ಸ್
ಸಂಪೂರ್ಣ ಕ್ಲಾಸ್ + aggressive intent
ಅವರ ಇನಿಂಗ್ಸ್ RCB ಗೆ ಬಲವಾದ foundation ನೀಡಿತು ಮತ್ತು chase ಗೆ perfect ಆರಂಭ ಕೊಟ್ಟಿತು.
ಕೀ ಪಾರ್ಟ್ನರ್‌ಶಿಪ್: ಕೊಹ್ಲಿ – ಪಡಿಕ್ಕಲ್
ಕೊಹ್ಲಿ ಜೊತೆಯ ದೇವದತ್ ಪಡಿಕ್ಕಲ್ ಸೇರಿ ಉತ್ತಮ ಜೊತೆಯಾಟ ಕಟ್ಟಿದರು.
- ಮುಖ್ಯವಾದ ಪಾರ್ಟ್ನರ್‌ಶಿಪ್ ನಿರ್ಮಿಸಿದರು
- ಪಂದ್ಯದಲ್ಲಿದ್ದ ಒತ್ತಡವನ್ನು ಸಂಪೂರ್ಣವಾಗಿ ಕಡಿಮೆ ಮಾಡಿದರು
ಈ ಜೊತೆ ಆಟ ಪಂದ್ಯದ ದಿಕ್ಕನ್ನು RCB ಕಡೆಗೆ ತಿರುಗಿಸಿತು ಮತ್ತು ಫಿನಿಷ್ ಮಾಡಲು ಉತ್ತಮ ಅವಕಾಶ ನೀಡಿತು
ಮಿಡಲ್ ಆರ್ಡರ್ ಫಿನಿಶಿಂಗ್ ಟಚ್ – Middle Order Finishing Touch
ಕೊನೆಯದಾಗಿ:
- ರಜತ್ ಪಾಟಿದಾರ್ – 27 runs (13 balls)
- ಜಿತೇಶ್ ಶರ್ಮಾ – 23 runs (9 balls)
ವೇಗವಾಗಿ ರನ್ ಗಳಿಸಿದ ಕಾರಣ ಪಂದ್ಯ ಬೇಗ ಮುಗಿಯಿತು.
ಅದಾದ್ಮೇಲೆ:
- ಟಿಮ್ ಡೇವಿಡ್
- ರೊಮಾರಿಯೊ ಶೆಫರ್ಡ್
ಪಂದ್ಯವನ್ನು ಅವರು ಸುಲಭವಾಗಿ ಮುಗಿಸಿದರು.
ಈ ಗೆಲುವು ಏಕೆ ವಿಶೇಷ?
ಈ ಗೆಲುವು RCBಗೆ ತುಂಬಾ special ಯಾಕೆ ಅಂದ್ರೆ:
- ಸತತ 2ನೇ ಗೆಲುವು
- ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರ ಸ್ಥಾನ.
- Chinnaswamy ನಲ್ಲಿ ಮೊದಲ ಬಾರಿಗೆ LSG ಮೇಲೆ ಗೆಲುವು
- ತಂಡ ಚೆನ್ನಾಗಿ ಬ್ಯಾಲೆನ್ಸ್ ಆಗಿ ಕಾಣಿಸುತ್ತಿದೆ.
ಇದು ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದ ಗೆಲುವು.
ಪಾಯಿಂಟ್ಸ್ ಟೇಬಲ್
ಈ ಪಂದ್ಯ ನಂತರ:
- RCB – 8 ಪಾಯಿಂಟ್ಸ್ (ಅಗ್ರ ಸ್ಥಾನ)
- ರಾಜಸ್ಥಾನ್ ರಾಯಲ್ಸ್ – 2ನೇ ಸ್ಥಾನ
ನೆಟ್ ರನ್ ರೇಟ್ ಕೂಡ ಬಲವಾಗಿ ಇದೆ.
RCB ಈಗ ಯಾಕೆ strong team? – ವಿಶ್ಲೇಷಣೆ
ಈ seasonನಲ್ಲಿ RCB ಯಶಸ್ಸಿನ ಹಿಂದೆ ಕೆಲವು ಪ್ರಮುಖ ಕಾರಣಗಳಿವೆ:
ಶಕ್ತಿಶಾಲಿ ಬೌಲಿಂಗ್ ಯುನಿಟ್
- ಆರಂಭದಲ್ಲೇ ವಿಕೆಟ್‌ಗಳನ್ನು ಪಡೆಯುತ್ತಿದ್ದಾರೆ
- ಡೆತ್ ಓವರ್‌ಗಳಲ್ಲಿ ಉತ್ತಮ ನಿಯಂತ್ರಣ ಇದೆ
ಅನುಭವಸಂಪನ್ನ ಬ್ಯಾಟಿಂಗ್
- ಕೊಹ್ಲಿಯ ಸ್ಥಿರ ಪ್ರದರ್ಶನ
- ಮಿಡಲ್ ಆರ್ಡರ್‌ನ ಆಕ್ರಮಣಕಾರಿ ಆಟ
ಸ್ಮಾರ್ಟ್ ಕ್ಯಾಪ್ಟನ್‌ಶಿಪ್
- ರಜತ್ ಪಾಟಿದಾರ್ ಅವರ ಚುರುಕು ನಿರ್ಧಾರಗಳು
ಒಟ್ಟಾರೆ ತಂಡದ ಕಾಂಬಿನೇಷನ್ ಬಹಳ ಚೆನ್ನಾಗಿ ಹೊಂದಿಕೊಂಡಿದ್ದು, ಅದೇ RCB ಯಶಸ್ಸಿನ ಮುಖ್ಯ ಕಾರಣವಾಗಿದೆ.
LSG ಸಮಸ್ಯೆಗಳು: ಏನು ತಪ್ಪಾಗಿದೆ?
ಈ ಪಂದ್ಯ LSG ತಂಡಕ್ಕೆ ಒಂದು ಪಾಠವಾಗಿ ಪರಿಣಮಿಸಿದೆ.
- ಟಾಪ್ ಆರ್ಡರ್ ವೈಫಲ್ಯ
- ನಾಯಕನ ಗಾಯ
- ಬೌಲಿಂಗ್‌ನಲ್ಲಿ ಒತ್ತಡವನ್ನು ಸರಿಯಾಗಿ ನಿಭಾಯಿಸಲಾಗಲಿಲ್ಲ
ಮುಂದಿನ ಪಂದ್ಯಗಳಲ್ಲಿ ಈ ಎಲ್ಲಾ ಕಡೆಗಳಲ್ಲಿ ಸುಧಾರಣೆ ಮಾಡಬೇಕು
ಐಪಿಎಲ್ 2026 ಪಾಯಿಂಟ್ಸ್ ಟೇಬಲ್ (ಇತ್ತೀಚಿನ ಅಪ್ಡೇಟ್)
RCB vs LSG ಪಂದ್ಯದ ನಂತರ points tableನಲ್ಲಿ ದೊಡ್ಡ ಬದಲಾವಣೆ ಆಗಿದೆ. ಈಗ ಟಾಪ್ ತಂಡಗಳು ಹೀಗಿವೆ
| ಸ್ಥಾನ | ತಂಡ | ಪಂದ್ಯಗಳು | ಗೆಲುವು | ಸೋಲು | ಅಂಕಗಳು |
| 1 | ಆರ್‌ಸಿಬಿ | 5 | 4 | 1 | 8 |
| 2 | ರಾಜಸ್ಥಾನ್ ರಾಯಲ್ಸ್ | 5 | 4 | 1 | 8 |
| 3 | ಪಂಜಾಬ್ ಕಿಂಗ್ಸ್ | 4 | 3 | 0 | 7 |
| 4 | ಸನ್‌ರೈಸರ್ಸ್ ಹೈದರಾಬಾದ್ | 5 | 2 | 3 | 4 |
| 5 | ಡೆಲ್ಲಿ ಕ್ಯಾಪಿಟಲ್ಸ್ | 4 | 2 | 2 | 4 |
| 6 | ಗುಜರಾತ್ ಟೈಟನ್ಸ್ | 4 | 2 | 2 | 4 |
| 7 | ಲಕ್ನೋ ಸೂಪರ್ ಜೈಂಟ್ಸ್ | 5 | 2 | 3 | 4 |
| 8 | ಚೆನ್ನೈ ಸೂಪರ್ ಕಿಂಗ್ಸ್ | 5 | 2 | 3 | 4 |
| 9 | ಮುಂಬೈ ಇಂಡಿಯನ್ಸ್ | 4 | 1 | 3 | 2 |
| 10 | ಕೋಲ್ಕತಾ ನೈಟ್ ರೈಡರ್ಸ್ | 5 | 0 | 4 | 1 |
ಎರಡೂ ತಂಡಗಳ ಮುಂದಿನ ಪಂದ್ಯಗಳು
- RCB ಮುಂದಿನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಏಪ್ರಿಲ್ 18 ರಂದು ಬೆಂಗಳೂರಿನಲ್ಲಿ ಆಡಲಿದೆ (ಮ್ಯಾಚ್ 26). ಈಗಿನ ಗೆಲುವಿನ ಲಯವನ್ನು ಮುಂದುವರಿಸಿದ್ರೆ, ಟಾಪ್-2 ಸ್ಥಾನವನ್ನು ಭದ್ರಪಡಿಸುವ ಉತ್ತಮ ಅವಕಾಶ ಇದೆ.
- LSG ಮುಂದಿನ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಏಪ್ರಿಲ್ 20 ರಂದು (ಮ್ಯಾಚ್ 29) ಎದುರಾಗಲಿದೆ. ಪಂತ್ ಗಾಯದಿಂದ ತಂಡಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಜೊತೆಗೆ ಟಾಪ್ ಆರ್ಡರ್ ಬ್ಯಾಟಿಂಗ್‌ನಲ್ಲಿ ಇನ್ನಷ್ಟು ಸ್ಥಿರತೆ ಬೇಕಾಗಿದೆ.
ನಾಳೆಯ IPL ಮ್ಯಾಚ್ ಪ್ರಿವ್ಯೂ – Mumbai Indians vs Punjab Kings
ಮ್ಯಾಚ್ 24 ನಲ್ಲಿ Mumbai Indians ಮತ್ತು Punjab Kings ತಂಡಗಳು ಏಪ್ರಿಲ್ 16, 2026 (ಗುರುವಾರ) ಸಂಜೆ 7:30 PM IST ಗೆ ವಾಂಖೆಡೆ ಸ್ಟೇಡಿಯಂ, ಮುಂಬೈನಲ್ಲಿ ಎದುರಾಗಲಿವೆ.
ಹೆಡ್-ಟು-ಹೆಡ್ ನೋಡಿದ್ರೆ ಈ ಎರಡೂ ತಂಡಗಳ ನಡುವೆ ಯಾವಾಗಲೂ ಕಠಿಣ ಸ್ಪರ್ಧೆ ಇರುತ್ತದೆ. ಈ ಸೀಸನ್‌ನಲ್ಲಿ PBKS ಸ್ವಲ್ಪ ಮೇಲುಗೈ ಸಾಧಿಸಿದ್ದು, 3 ಗೆಲುವುಗಳೊಂದಿಗೆ ಮುಂದೆ ಇದೆ, MI 1 ಗೆಲುವು ಪಡೆದಿದೆ.
ಗಮನಿಸಬೇಕಾದ ಆಟಗಾರರು:
- MI ಪರ – ರೋಹಿತ್ ಶರ್ಮಾ (ಅನುಭವ ಮತ್ತು ಕ್ಲಾಸ್ ಇನ್ನೂ ಅದೇ ಲೆವೆಲ್‌ನಲ್ಲಿ ಇದೆ)
- PBKS ಪರ – ಯುವ ಬ್ಯಾಟರ್‌ಗಳ ಆಕ್ರಮಣಕಾರಿ ಆಟ
ಪಂದ್ಯವನ್ನು ನೋಡಲು:
- JioHotstar (ಆಪ್/ವೆಬ್‌ಸೈಟ್) ಮತ್ತು Star Sports Network ನಲ್ಲಿ ಲೈವ್ ವೀಕ್ಷಿಸಬಹುದು.
ಕೊನೆಯ ಮಾತು
ಆರ್‌ಸಿಬಿ ಈಗ ತುಂಬಾ ಬಲವಾದ ಫಾರ್ಮ್‌ನಲ್ಲಿ ಇದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ಚೆನ್ನಾಗಿ ಬ್ಯಾಲೆನ್ಸ್ ಆಗಿ ಕೆಲಸ ಮಾಡ್ತಿವೆ. ಕೊಹ್ಲಿಯ ಸ್ಥಿರ ಆಟ ಮತ್ತು ಬೌಲರ್‌ಗಳ ಉತ್ತಮ ಪ್ರದರ್ಶನ ತಂಡಕ್ಕೆ ದೊಡ್ಡ ಶಕ್ತಿ. ಇದೇ ತರಹ ಮುಂದುವರಿಸಿದ್ರೆ ಟ್ರೋಫಿಗೆ ಪ್ರಮುಖ ಸ್ಪರ್ಧಿಯಾಗೋದು ಖಚಿತ. ಅಭಿಮಾನಿಗಳ ನಿರೀಕ್ಷೆಯೂ ಈಗ ತುಂಬಾ ಹೆಚ್ಚಾಗಿದೆ.
ಇದನ್ನು ಓದಿ:
SSC Selection Posts Recruitment 2026: 3003 ಹುದ್ದೆಗಳ ಭರ್ಜರಿ ನೇಮಕಾತಿ – SSLC/PUC/ಪದವಿ ಇದ್ದರೆ ಸಾಕು! ಈಗಲೇ Apply ಮಾಡಿ. |