Telegram Join My Telegram WhatsApp Join My WhatsApp

Education Loan 2026: ಅರಿವು ಸಾಲ ಯೋಜನೆ – ಉನ್ನತ ಶಿಕ್ಷಣಕ್ಕೆ ಭರ್ಜರಿ ಸಾಲ ಸೌಲಭ್ಯ, ಈಗಲೇ ಅರ್ಜಿ ಹಾಕಿ!

Education Loan 2026: ಅರಿವು ಸಾಲ ಯೋಜನೆ – ಉನ್ನತ ಶಿಕ್ಷಣಕ್ಕೆ ಭರ್ಜರಿ ಸಾಲ ಸೌಲಭ್ಯ

ಅರಿವು ಶೈಕ್ಷಣಿಕ ಸಾಲ ಯೋಜನೆ 2026 – ಸಂಪೂರ್ಣ ವಿವರ

ಪರಿಚಯ: ಕನಸುಗಳು ಹಣದ ಮುಂದೆ ನಿಲ್ಲಬಾರದು

ಇಂದಿನ ಕಾಲದಲ್ಲಿ ಒಬ್ಬ ವಿದ್ಯಾರ್ಥಿ ತನ್ನ ಕನಸಿನ course ಓದಬೇಕು ಎಂದರೆ ಅದು ತುಂಬಾ ದೊಡ್ಡ ಸವಾಲಾಗಿದೆ 

ವಿಶೇಷವಾಗಿ ವೈದ್ಯಕೀಯ (MBBS), ಇಂಜಿನಿಯರಿಂಗ್ (BE / B.Tech), ಡೆಂಟಲ್, ಫಾರ್ಮಸಿ,ನರ್ಸಿಂಗ್ ಹೀಗೆ ಉನ್ನತ ಶಿಕ್ಷಣ  ಕೋರ್ಸ್‌ಗಳು ಬಹಳ ಖರ್ಚು ಆಗಿವೆ.

ಖಾಸಗಿ ಕಾಲೇಜುಗಳ  ಪೀಸ್ ಕೇಳಿದ್ರೆ  ಸಾಮಾನ್ಯ ಕುಟುಂಬಗಳು  ಭಯಪಡುವಂತಾಗಿದೆ  ಕೆಲವರು ತಮ್ಮ ಮಕ್ಕಳು ಡಾಕ್ಟರ್ ಆಗಬೇಕು  ಇಂಜಿನಿಯರ್ ಆಗಬೇಕು ಎಂದು ಕನಸು ಕಾಣುತ್ತಾರೆ ಆದರೆ ಹಣದ ಕೊರತೆಯಿಂದ ಆ ಕನಸುಗಳನ್ನು ಅರ್ಥದಲ್ಲಿ ಬಿಟ್ಟುಬಿಡುವ ಪರಿಸ್ಥಿತಿ ಬರುತ್ತದೆ.

ಇಂತಹ ಪರಿಸ್ಥಿತಿಯನ್ನು ಬದಲಾಯಿಸಲು ಕರ್ನಾಟಕ ಸರ್ಕಾರ ತಂದಿರುವ ಒಂದು ಮಹತ್ವದ ಯೋಜನೆ ಎಂದರೆ
 ಅರಿವು ಶೈಕ್ಷಣಿಕ ಸಾಲ ಯೋಜನೆ 2026

ಈ ಯೋಜನೆ ವಿದ್ಯಾರ್ಥಿಗಳಿಗೆ ಯಾವುದೇ ಆಸ್ತಿ ಅಡಮಾನ ಇಡದೆ, ಕಡಿಮೆ ಬಡ್ಡಿದರದಲ್ಲಿ ಶಿಕ್ಷಣ ಸಾಲ ನೀಡುತ್ತದೆ.

ಇದು ಕೇವಲ ಸಾಲವಲ್ಲ…

ಇದು ಸಾವಿರಾರು ವಿದ್ಯಾರ್ಥಿಗಳ ಭವಿಷ್ಯವನ್ನು ಬೆಳಗಿಸುವ ಒಂದು ಅವಕಾಶ

ಏನಿದು ಅರಿವು ಶೈಕ್ಷಣಿಕ ಸಾಲ ಯೋಜನೆ?(What is the Scheme?)

 ಅರಿವು ಶೈಕ್ಷಣಿಕ ಸಾಲ ಯೋಜನೆ ಕರ್ನಾಟಕ ಸರ್ಕಾರದ ಒಂದು ಶಿಕ್ಷಣ ಸಹಾಯ ಯೋಜನೆಯಾಗಿದೆ

 ಈ ಯೋಜನೆಯ ಮುಖ್ಯ ಉದ್ದೇಶ

  •  ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಉನ್ನತ  ಶಿಕ್ಷಣಕ್ಕೆ ಸಹಾಯ ಮಾಡುವುದು
  • ಯಾವುದೇ  ವಿದ್ಯಾರ್ಥಿ  ಅವರ ಕಲಿಯುವ ಕನಸನ್ನು ಹಣದ ಕೊರತೆಯಿಂದ  ಅವರ ಶಿಕ್ಷಣಕ್ಕೆ ಯಾವುದೇ , ಕೊರತೆಯಾಗಬಾರದು  ಓದು ನಿಲ್ಲಬಾರದು ಅನ್ನೋದು ಸರ್ಕಾರದ ಮುಖ್ಯ ಉದ್ದೇಶ

ಈ ಯೋಜನೆಯನ್ನು ಎರಡು ಪ್ರಮುಖ ನಿಗಮಗಳು ನಿರ್ವಹಿಸುತ್ತವೆ:

  • ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ
  • ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ

ಇವುಗಳ ಮೂಲಕ ವಿದ್ಯಾರ್ಥಿಗಳಿಗೆ ಶಿಕ್ಷಣ ಸಾಲ ನೀಡಲಾಗುತ್ತದೆ.

ಈ ಯೋಜನೆ ಯಾಕೆ ವಿಶೇಷ? (Why is this scheme special?)

ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ:

  • MBBS ಓದಲು ಲಕ್ಷಾಂತರ ರೂಪಾಯಿ ಬೇಕು
  • Engineering fees ವರ್ಷಕ್ಕೆ ಲಕ್ಷಗಳಲ್ಲಿ ಇದೆ
  • Private colleges ತುಂಬಾ ಖರ್ಚುಬರಿತವಾಗಿವೆ

ಇದರಿಂದ middle class ಕುಟುಂಬಗಳು ತುಂಬಾ ಒತ್ತಡಕ್ಕೆ ಒಳಗಾಗುತ್ತವೆ

ಆದರೆ ಅರಿವು ಯೋಜನೆ ಇದನ್ನು ಸುಲಭ ಮಾಡುತ್ತದೆ.

ಈ ಯೋಜನೆಯ ವಿಶೇಷತೆಗಳು (Features of this Scheme):

  • ಕಡಿಮೆ ಬಡ್ಡಿದರ –ವಿದ್ಯಾರ್ಥಿಗಳಿಗೆ ಆರ್ಥಿಕ ಬಾರ ಕಡಿಮೆಯಾಗಲು ಸಹಾಯ ಮಾಡುತ್ತದೆ EMI ಕೂಡ ಸುಲಭವಾಗಿ ತೀರಿಸಲು ಅವಕಾಶ ನೀಡುತ್ತದೆ
  • ಸರಳ ಅರ್ಜಿ ಪ್ರಕ್ರಿಯೆ –ಯಾವುದೇ ತೊಂದರೆ ಇಲ್ಲದೆ ಆನ್‌ಲೈನ್ ಅಥವಾ ಆಫ್‌ಲೈನ್ ಮೂಲಕ ಸುಲಭವಾಗಿ ಅರ್ಜಿ ಹಾಕಬಹುದು ಸಮಯ ಉಳಿಸಿ ವೇಗವಾಗಿ ನಿಮ್ಮ ಹಣವನ್ನು  ಪಡೆಯಲು ಸಹಾಯ ಮಾಡುತ್ತದೆ.
  • ಸರ್ಕಾರದ ಭರವಸೆ –ವಿದ್ಯಾರ್ಥಿಗಳಿಗೆ ಸುರಕ್ಷಿತ ಸಾಲ ಸೌಲಭ್ಯ ನೀಡಲಾಗುತ್ತದೆ  ಯಾವುದೇ ತೊಂದರೆಗಳಾಗದಂತೆ ನಂಬಿಕೆ ಹೆಚ್ಚಿಸಿ ಶಿಕ್ಷಣ ಮುಂದುವರೆಸಲು ಧೈರ್ಯ ಮತ್ತು ಆರ್ಥಿಕ ಬೆಂಬಲ ಒದಗಿಸುತ್ತದೆ.
  • ಯಾವುದೇ ಆಸ್ತಿ ಗಿರವಿ ಅಗತ್ಯವಿಲ್ಲ –
    ವಿದ್ಯಾರ್ಥಿಗಳು ತಮ್ಮ ಅಥವಾ ಕುಟುಂಬದ ಆಸ್ತಿಯನ್ನು ಗಿರವಿಗೆ ಇಡುವ ಅವಶ್ಯಕತೆ ಇಲ್ಲದೆ, ಸುಲಭವಾಗಿ ಶಿಕ್ಷಣ ಸಾಲ ಪಡೆಯಬಹುದು ಇದು ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಒಂದು ದೊಡ್ಡ ಬೆಂಬಲವಾಗಿದೆ ಇದರಿಂದ ವಿದ್ಯಾರ್ಥಿಗಳಿಗೆ ಯಾವುದೇ ಹಣದ ಕೊರತೆ ಕೊರತೆಯಾಗದೆ ತಮ್ಮ ವಿದ್ಯಾಭ್ಯಾಸವನ್ನು  ಮುಂದುವರಿಸಬಹುದು.

ಅರಿವು ಶೈಕ್ಷಣಿಕ ಸಾಲ ಯೋಜನೆಯ ಪ್ರಮುಖ ಪ್ರಯೋಜನಗಳು(Key Benefits)

ಈ ಯೋಜನೆಯ ಲಾಭಗಳು ಬಹಳ ಪ್ರಮುಖವಾಗಿವೆ. ಅವುಗಳನ್ನು ವಿವರವಾಗಿ ನೋಡೋಣ

1 ಸಾಲದ ಮೊತ್ತ

ವಿದ್ಯಾರ್ಥಿಗಳಿಗೆ ಪ್ರತಿ ವರ್ಷ:

₹50,000 ರಿಂದ ₹5,00,000 ವರೆಗೆ ಸಾಲ ಸಿಗುತ್ತದೆ

ಕೋರ್ಸ್ ಆಧಾರವಾಗಿ ಮೊತ್ತ ಬದಲಾಗುತ್ತದೆ.

2. ನೇರವಾಗಿ ಕಾಲೇಜಿಗೆ ಹಣ

ಈ ಯೋಜನೆಯಲ್ಲಿ ಹಣವನ್ನು ವಿದ್ಯಾರ್ಥಿಗೆ ಕೊಡಲ್ಲ.

ನೇರವಾಗಿ ಕಾಲೇಜಿನ ಬ್ಯಾಂಕ್ ಖಾತೆಗೆ ಹಣ transfer ಆಗುತ್ತದೆ

ಇದರಿಂದ ಪಾರದರ್ಶಕತೆ ಹೆಚ್ಚುತ್ತದೆ.

3. ಕಡಿಮೆ ಬಡ್ಡಿದರ

ಸಾಮಾನ್ಯ ಬ್ಯಾಂಕ್ ಸಾಲಗಳಂತೆ ಹೆಚ್ಚಿನ ಬಡ್ಡಿ ಇಲ್ಲ.

ಕೇವಲ 2% ರಿಂದ 3% ಸೇವಾ ಶುಲ್ಕ ಮಾತ್ರ

4. ಮರುಪಾವತಿ ಸೌಲಭ್ಯ
  • course ಮುಗಿದ ನಂತರ 6 ತಿಂಗಳ ನಂತರ ಮರುಪಾವತಿ ಆರಂಭ
  • 3 ರಿಂದ 4 ವರ್ಷಗಳಲ್ಲಿ ಕಂತುಗಳಲ್ಲಿ ಪಾವತಿ
5. ಆಸ್ತಿ ಬೇಕಾಗಿಲ್ಲ

ಯಾವುದೇ property, gold, guarantee ಅಗತ್ಯವಿಲ್ಲ

6. ಸರ್ಕಾರಿ ಕೋಟಾ ವಿದ್ಯಾರ್ಥಿಗಳಿಗೆ ಆದ್ಯತೆ

CET / NEET ಮೂಲಕ ಸರ್ಕಾರಿ ಕೋಟಾದಲ್ಲಿ ಸೀಟ್ ಪಡೆದವರಿಗೆ ಮೊದಲ ಆದ್ಯತೆ

ಕೋರ್ಸ್ ಪ್ರಕಾರ ಸಾಲದ ವಿವರ (Loan Amount & Courses)

ಕೋರ್ಸ್‌ಗಳು ಗರಿಷ್ಠ ಸಾಲದ ಮೊತ್ತ (ವರ್ಷಕ್ಕೆ)
MBBS, MD, MS (ಮೆಡಿಕಲ್) ವರ್ಷಕ್ಕೆ ₹5,00,000 ವರೆಗೆ
BDS, MDS (ಡೆಂಟಲ್) ವರ್ಷಕ್ಕೆ ₹1,00,000 ವರೆಗೆ
BE, B.Tech, B.Arch, M.Tech, MBA, MCA, LLB ವರ್ಷಕ್ಕೆ ₹50,000 ವರೆಗೆ
ಆಯುಷ್ ಕೋರ್ಸ್‌ಗಳು (BAMS, BHMS ಇತ್ಯಾದಿ) ವರ್ಷಕ್ಕೆ ₹50,000 ವರೆಗೆ
ಕೃಷಿ / ಪಶುವೈದ್ಯಕೀಯ ವರ್ಷಕ್ಕೆ ₹50,000 ವರೆಗೆ

ಯಾರು ಈ ಯೋಜನೆಗೆ ಅರ್ಹರು?(Eligibility)

ಈ ಯೋಜನೆ ಎಲ್ಲರಿಗೂ ಅಲ್ಲ. ಕೆಲವು ನಿಯಮಗಳಿವೆ

1.  ಕರ್ನಾಟಕ ನಿವಾಸಿ

ಅಭ್ಯರ್ಥಿಗೆ ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು ರಾಜ್ಯದ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ ಸರ್ಕಾರದ ನಿಯಮಾನುಸಾರ  ಸ್ಥಳೀಯ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯವಾಗಿರುತ್ತದೆ.

2. ಸಮುದಾಯ
  • ಹಿಂದುಳಿದ ವರ್ಗಗಳು (1A, 2A, 3A, 3B)
  • ಅಲ್ಪಸಂಖ್ಯಾತ ಸಮುದಾಯಗಳು (ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಜೈನ್, ಬೌದ್ಧ, ಪಾರ್ಸಿ)
  • ವಿಶ್ವಕರ್ಮ, ಉಪ್ಪಾರ, ಅಂಬಿಗ, ಸವಿತಾ, ಮಡಿವಾಳ, ಅಲೆಮಾರಿ ಸಮುದಾಯಗಳು ಹಾಗೂ ಒಕ್ಕಲಿಗ, ಲಿಂಗಾಯತ, ಮರಾಠ ಸೇರಿದಂತೆ ಸಂಬಂಧಿತ ಉಪಜಾತಿಗಳಿಗೂ ಈ ಯೋಜನೆ ಅನ್ವಯಿಸುತ್ತದೆ.
3. ಆದಾಯ ಮಿತಿ

ಸರ್ಕಾರ ನಿಗದಿಪಡಿಸಿದ ಗರಿಷ್ಠ ಆದಾಯದೊಳಗೆ ಇರಬೇಕು  ಪರಿಶೀಲನೆಗೆ ಆದಾಯ ಪ್ರಮಾಣ ಪತ್ರ ಕಡ್ಡಾಯವಾಗಿರುತ್ತದೆ

  • ಸಾಮಾನ್ಯ: ವಾರ್ಷಿಕ ₹3.5 ಲಕ್ಷ ಒಳಗೆ
  • ಅಲ್ಪಸಂಖ್ಯಾತರಿಗೆ ಕೆಲ ಸಂದರ್ಭಗಳಲ್ಲಿ ₹8 ಲಕ್ಷವರೆಗೆ ಅವಕಾಶ
4. ಪ್ರವೇಶ ಮಾನದಂಡ

ಕೆಇಎ (KEA) ನಡೆಸುವ CET ಅಥವಾ NEET ಪರೀಕ್ಷೆಯ ಮೂಲಕ ಸರ್ಕಾರಿ ಕೋಟಾದಲ್ಲಿ ಸೀಟು ಪಡೆದಿರಬೇಕು, ಮಾನ್ಯತೆ ಪಡೆದ ಕಾಲೇಜಿನಲ್ಲಿ ಪ್ರವೇಶ ಹೊಂದಿರುವುದು ಕಡ್ಡಾಯವಾಗಿದೆ.

ಮರುಪಾವತಿ ಹೇಗೆ? ಸುಲಭ ನಿಯಮಗಳು (Repayment Terms)

ಈ ಯೋಜನೆಯಲ್ಲಿ ಸಾಮಾನ್ಯ ಬ್ಯಾಂಕ್ ಸಾಲಗಳಂತೆ ಓದುವಾಗಲೇ EMI ಕಟ್ಟಬೇಕಾಗಿಲ್ಲ .ವಿದ್ಯಾರ್ಥಿಗಳಿಗೆ ಸಂಪೂರ್ಣ ಗಮನ ಶಿಕ್ಷಣದ ಮೇಲೆ ಇರಲಿ ಸಾಕಷ್ಟು ಸಡಿಲಿಕೆ ನೀಡಲಾಗಿದೆ.

  • ಗ್ರೇಸ್ ಪಿರಿಯಡ್: ಕೋರ್ಸ್ ಮುಗಿದ ಬಳಿಕ ಕೆಲಸ  ಕುಡುಕಲು ಸುಮಾರು 6  ಆರು ತಿಂಗಳ ಸಮಯ ಸಿಗುತ್ತದೆ.  ಈ ಅವಧಿಯಲ್ಲಿ ಯಾವುದೇ ಕಂತು ಕಟ್ಟುವ ಒತ್ತಡ ಇರುವುದಿಲ್ಲ.
  • ಮರುಪಾವತಿ ಅವಧಿ: ಆ 6 ತಿಂಗಳು ನಂತರ ಸಾಲವನ್ನು ಮುಂದಿನ 4 ವರ್ಷಗಳಲ್ಲಿ (48 ಸಮಾನ ಕಂತುಗಳಲ್ಲಿ) ಹಂತ ಹಂತವಾಗಿ ತೀರಿಸಬಹುದು.
  • ಬಡ್ಡಿದರ: ಬಹಳ ಕಡಿಮೆ ಬಡ್ಡಿ ದರದ ಸಾಲವಾಗಿದ್ದು ಸುಮಾರು 2% ರಿಂದ 3% ಸೇವಾ ಶುಲ್ಕ ಮಾತ್ರ ಇರಬಹುದು ನಿಖರ ವಿವರಗಳಿಗೆ ಸಂಬಂಧಿಸಿದ ಜಿಲ್ಲಾ ಕಚೇರಿಯನ್ನು ಸಂಪರ್ಕಿಸುವುದು ಉತ್ತಮ .

ಅಗತ್ಯ ದಾಖಲೆಗಳು (Documents Needed)

ಅರ್ಜಿ ಹಾಕುವ ಮೊದಲು ಈ ದಾಖಲೆಗಳು ಬೇಕು:

  1. ಆಧಾರ್ ಕಾರ್ಡ್
  2. ಜಾತಿ ಪ್ರಮಾಣ ಪತ್ರ
  3. ಆದಾಯ ಪ್ರಮಾಣ ಪತ್ರ
  4. SSLC ಅಂಕಪಟ್ಟಿ
  5. PUC ಅಂಕಪಟ್ಟಿ
  6. CET / NEET ಹಾಲ್ ಟಿಕೆಟ್
  7. ಕಾಲೇಜು ಪ್ರವೇಶ ಪತ್ರ
  8. ಪಾಸ್‌ಪೋರ್ಟ್ ಫೋಟೋ
  9. ವಿದ್ಯಾರ್ಥಿ ಮತ್ತು ಪೋಷಕರ ಸ್ವಯಂ ಘೋಷಣೆ ಪತ್ರ
  10. ಭರವಸೆ ಪತ್ರ

ಅರ್ಜಿ ಸಲ್ಲಿಸುವ ವಿಧಾನ (How to Apply)

ಹೊಸ ವಿದ್ಯಾರ್ಥಿಗಳಿಗೆ:

  1. ಅಧಿಕೃತ ವೆಬ್‌ಸೈಟ್‌ಗೆ ಹೋಗಿ (https://kmdconline.karnataka.gov.in/Portal/home)
  2. “Online Application” ಕ್ಲಿಕ್ ಮಾಡಿ
  3. ಮೊಬೈಲ್ ಸಂಖ್ಯೆ ಮತ್ತು ಆಧಾರ್ OTP ಮೂಲಕ ಲಾಗಿನ್ ಆಗಿ
  4. “Arivu Scheme” ಆಯ್ಕೆ ಮಾಡಿ
  5. ವೈಯಕ್ತಿಕ ಮತ್ತು ಶೈಕ್ಷಣಿಕ ವಿವರಗಳನ್ನು ಭರ್ತಿ ಮಾಡಿ
  6. ಅಗತ್ಯ ದಾಖಲೆಗಳನ್ನು upload ಮಾಡಿ
  7. Submit ಮಾಡಿ Application ID save ಮಾಡಿ

ಹಳೆಯ ವಿದ್ಯಾರ್ಥಿಗಳಿಗೆ (ಸಾಲ ನವೀಕರಣ – Renewal):

ಈಗಾಗಲೇ ಸಾಲ ಪಡೆದ ವಿದ್ಯಾರ್ಥಿಗಳು:

  • ಹಿಂದಿನ ಸಾಲದ 12% ಪಾವತಿಸಬೇಕು
  • ನಂತರ ಮುಂದಿನ ವರ್ಷಕ್ಕೆ renewal ಮಾಡಬಹುದು
  • ಜಿಲ್ಲಾ ಕಚೇರಿಯಿಂದ ಅನುಮೋದನೆ ಅಗತ್ಯ

ಸಾಮಾನ್ಯ ತಪ್ಪುಗಳು (Common Mistakes)

ಅರ್ಜಿ ಹಾಕುವಾಗ ಈ ತಪ್ಪುಗಳನ್ನು ಮಾಡಬೇಡಿ:

  • ತಪ್ಪಾದ ದಾಖಲೆಗಳನ್ನು ಅಪ್‌ಲೋಡ್ ಮಾಡುವುದು
  • CET/NEET ದಾಖಲೆಗಳ ಪ್ರಮಾಣ ಇಲ್ಲದಿರುವುದು
  • ಆದಾಯ ಪ್ರಮಾಣ ಪತ್ರದಲ್ಲಿ ತಪ್ಪು ಮಾಹಿತಿ
  • ಫಾರ್ಮ್ ಪೂರ್ಣವಾಗಿಲ್ಲ
  • ಅರ್ಜಿಯ ಕೊನೆಯ ದಿನಾಂಕ ತಪ್ಪಿಸಿಕೊಳ್ಳುವುದು

ಸಾಮಾನ್ಯ ಪ್ರಶ್ನೆಗಳು (FAQ)

1. ಇದು scholarshipನಾ?

ಇಲ್ಲ, ಇದು ಶಿಕ್ಷಣ ಸಾಲ (loan) ಆದರೆ ಕಡಿಮೆ ಬಡ್ಡಿದರ ಇದೆ.

2. MBBSಗೆ full fees cover ಆಗುತ್ತಾ?

ಪೂರ್ಣವಾಗಿ ಅಲ್ಲ, ಆದರೆ ಭಾಗಶಃ ಸಹಾಯ ಸಿಗುತ್ತದೆ.

3. ಮರುಪಾವತಿ ಯಾವಾಗ?

course ಮುಗಿದ 6 ತಿಂಗಳ ನಂತರ.

4. guarantee ಬೇಕಾ?

ಇಲ್ಲ, ಯಾವುದೇ guarantee ಅಥವಾ property ಬೇಕಾಗಿಲ್ಲ.

ಅಂತಿಮ ಮಾತು

ಅರಿವು ಶೈಕ್ಷಣಿಕ ಸಾಲ ಯೋಜನೆ 2026 ಕರ್ನಾಟಕದ ಸಾವಿರಾರು ವಿದ್ಯಾರ್ಥಿಗಳಿಗೆ ಒಂದು ದೊಡ್ಡ ಅವಕಾಶವಾಗಿದೆ.

ಒಬ್ಬ middle class student ಗೆ ಇದು:

  • ಕನಸುಗಳನ್ನು ಸಾಕಾರಗೊಳಿಸುವ ದಾರಿ
  • ಹಣದ ಭಾರ ಕಡಿಮೆ ಮಾಡುವ ಸಹಾಯ
  • future secure ಮಾಡುವ ಯೋಜನೆ

ಹಣ ಇಲ್ಲದ ಕಾರಣದಿಂದ ಓದು ನಿಲ್ಲಿಸುವ ಕಾಲ ಈಗ ಮುಗಿದಿದೆ.

ಸರ್ಕಾರ ಸಹಾಯ ಮಾಡುತ್ತಿದೆ… ಅದನ್ನು ಬಳಸಿಕೊಳ್ಳುವುದು ನಮ್ಮ ಜವಾಬ್ದಾರಿ.

ಎಷ್ಟು ವಿದ್ಯಾರ್ಥಿಗಳು ಹಣದ ಕೊರತೆಯಿಂದ ತಮ್ಮ ಉತ್ತಮ ಶಿಕ್ಷಣದ ಕನಸನ್ನು ಮೂಲೆ ಮಾಡಿರುತ್ತಾರೆ ಅಂತವರಿಗೆ ಸರ್ಕಾರ ಈ ಯೋಜನೆಯನ್ನು ಜಾರಿ ಮಾಡಿದೆ ವಿದ್ಯಾರ್ಥಿಗಳು ಈ ಯೋಜನೆ ಲಾಭ ಪಡೆದುಕೊಂಡು ತಮ್ಮ ಶಿಕ್ಷಣ ಹಾಗೂ ಉತ್ತಮ ಭವಿಷ್ಯದ ಕನಸನ್ನು ಮುಂದುವರೆಸಿ ಹಾಗೆ ಎಷ್ಟೋ ಜನರಿಗೆ ಈ ಯೋಜನೆ ಬಗ್ಗೆ ತಿಳಿಯದೆ ಇರಬಹುದು ಅಂತವರಿಗೆ ಈ ಮಾಹಿತಿಯನ್ನು Share ಮಾಡಿ ಮತ್ತು ಅವರು ಉತ್ತಮ ಭವಿಷ್ಯಕ್ಕೆ ಸಹಕಾರ ನೀಡಿ.

ಇದನ್ನು ಓದಿ:      

SSC Selection Posts Recruitment 2026: 3003 ಹುದ್ದೆಗಳ ಭರ್ಜರಿ ನೇಮಕಾತಿ – SSLC/PUC/ಪದವಿ ಇದ್ದರೆ ಸಾಕು! ಈಗಲೇ Apply ಮಾಡಿ.

Leave a Comment