Telegram Join My Telegram WhatsApp Join My WhatsApp

IGICH Recruitment 2026: ₹2.5 ಲಕ್ಷವರೆಗೆ ವೇತನ! ವೈದ್ಯಕೀಯ & ನರ್ಸಿಂಗ್ ಹುದ್ದೆಗಳ ಭರ್ಜರಿ ಅವಕಾಶ – ಮೇ 8 ಕೊನೆಯ ದಿನ

IGICH Recruitment 2026: ₹2.5 ಲಕ್ಷವರೆಗೆ ವೇತನ!

ಆರಂಭದಲ್ಲೇ ಮುಖ್ಯ ವಿಷಯ ಹೇಳ್ತೀನಿ

ನೀವು ವೈದ್ಯಕೀಯ ಕ್ಷೇತ್ರದಲ್ಲಿ career ಮಾಡ್ಬೇಕು ಅಂತ ಯೋಚಿಸ್ತಿದ್ರಾ? ಅಥವಾ ಈಗಾಗಲೇ Nursing / Medical qualification ಇದ್ದು ಒಳ್ಳೆಯ ಅವಕಾಶ ಹುಡುಕ್ತಿದ್ರಾ?

ಹಾಗಿದ್ದರೆ, IGICH Recruitment 2026 ನಿಮಗೆ miss ಮಾಡ್ಕೊಳ್ಬಾರ್ದಂತಹ ಒಂದು golden chance

ಬೆಂಗಳೂರುದಲ್ಲಿರುವ ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ (IGICH) ಇದೀಗ ದೊಡ್ಡ ಮಟ್ಟದಲ್ಲಿ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಈ recruitment ನಲ್ಲಿ Group-A (Doctors & Specialists) ಹಾಗೂ Group-C (Nursing Officers) ಹುದ್ದೆಗಳು ಸೇರಿವೆ.

ವಿಶೇಷ ಅಂಶ ಏನಂದ್ರೆ –

  • ವೇತನ ₹33,350 ರಿಂದ ₹2.5 ಲಕ್ಷವರೆಗೆ
  • ಒಟ್ಟು 75 ಹುದ್ದೆಗಳು
  • Direct application (offline)
  • Experience ಇದ್ದವರಿಗೆ ಉತ್ತಮ ಅವಕಾಶ

ಇದನ್ನು ಸ್ವಲ್ಪ detail ಆಗಿ easy language ನಲ್ಲಿ ನೋಡೋಣ

IGICH Recruitment 2026 – ಸಂಸ್ಥೆಯ ಬಗ್ಗೆ ಚಿಕ್ಕ ಪರಿಚಯ

ಬೆಂಗಳೂರಿನಲ್ಲಿರುವ ಇಂದಿರಾ ಗಾಂಧಿ ಇನ್‌ಸ್ಟಿಟ್ಯೂಟ್ ಆಫ್ ಚೈಲ್ಡ್ ಹೆಲ್ತ್ (IGICH) ಕರ್ನಾಟಕದ ಪ್ರಮುಖ ಮಕ್ಕಳ ಆರೋಗ್ಯ ಸಂಸ್ಥೆಗಳಲ್ಲಿ ಒಂದಾಗಿದೆ. ಇಲ್ಲಿ ಮಕ್ಕಳಿಗೆ ಅತ್ಯಾಧುನಿಕ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತದೆ.ಇಲ್ಲಿ ನಿಪುಣ ವೈದ್ಯರು, ಆಧುನಿಕ ಸಾಧನೆಗಳು, ಗುಣಮಟ್ಟದ ಹಾರೈಕೆ ಸಂಶೋಧನಾ ಸೌಲಭ್ಯಗಳು ಹಾಗೂ ತರಬೇತಿ ಅವಕಾಶಗಳು ಲಭ್ಯವಿದ್ದು ಮಕ್ಕಳ ಆರೋಗ್ಯ ಕ್ಷೇತ್ರದಲ್ಲಿ ಅತ್ಯುತ್ತಮ ಸೇವ ಒದಗಿಸಲಾಗುತ್ತದೆ.

 ಇಲ್ಲಿ ಕೆಲಸ ಮಾಡುವುದರಿಂದ ಸಿಗುವ ಲಾಭಗಳು : 

  • ಸರ್ಕಾರಿ ವ್ಯವಸ್ಥೆಯಲ್ಲಿ (Government setup) ಕೆಲಸ ಮಾಡಿದ ಅನುಭವ
  • ಮಕ್ಕಳ ಚಿಕಿತ್ಸೆಯಲ್ಲಿ ವಿಶೇಷ ಅನುಭವ (Specialized pediatric exposure)
  • ಉತ್ತಮ career growth ಜೊತೆಗೆ job stability

ಈ ಸಂಸ್ಥೆಯಲ್ಲಿ ಕೆಲಸ ಮಾಡೋದು ನಿಮ್ಮ career ಗೆ strong foundation ಕೊಡುತ್ತದೆ.

ನೇಮಕಾತಿ ಸಂಕ್ಷಿಪ್ತ ವಿವರ (Recruitment Overview)

  • ಸಂಸ್ಥೆ ಹೆಸರು: ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ (IGICH)
  • ಸ್ಥಳ: ಬೆಂಗಳೂರು
  • ಹುದ್ದೆಗಳ ಸಂಖ್ಯೆ: 75
  • Group-A: 25
  • Group-C: 50
  • ವೇತನ: ₹33,350 – ₹2,50,000
  • ಉದ್ಯೋಗದ ಪ್ರಕಾರ: 11 ತಿಂಗಳ ಅವಧಿಗೆ ಒಪ್ಪಂದ ಆಧಾರಿತ ನೇಮಕಾತಿ ಅಥವಾ ಶಾಶ್ವತ ನೇಮಕಾತಿ ಆಗುವವರೆಗೆ ಕೆಲಸ ಮಾಡುವ ಅವಕಾಶ ನೀಡಲಾಗುತ್ತದೆ.

ಇದು ತಾತ್ಕಾಲಿಕ ಒಪ್ಪಂದದ ಉದ್ಯೋಗವಾದರೂ, ಅನುಭವದ ದೃಷ್ಟಿಯಿಂದ ಬಹಳ ಮೌಲ್ಯಯುತವಾಗಿರುತ್ತದೆ.

ಹುದ್ದೆಗಳ ಸಂಪೂರ್ಣ ವಿವರ (Post Details)

Group-A (ವೈದ್ಯಕೀಯ ಹುದ್ದೆಗಳು) – ಒಟ್ಟು 25 ಹುದ್ದೆಗಳು

ಈ ವಿಭಾಗದಲ್ಲಿ ಮುಖ್ಯವಾಗಿ ವೈದ್ಯರು ಹಾಗೂ ಸ್ಪೆಷಲಿಸ್ಟ್‌ಗಳಿಗೆ ಅವಕಾಶ ಇದೆ. ವಿವಿಧ ಭಾಗಗಳಲ್ಲಿ ಕೆಲಸ ಮಾಡುವ ಅನುಭವ ಹೊಂದಿರುವವರಿಗೆ  ಇಲ್ಲಿ ಉತ್ತಮ ಅವಕಾಶ ಸಿಗುತ್ತದೆ. ಜೊತೆಗೆ career growth ಕೂಡ ಚೆನ್ನಾಗಿರುತ್ತದೆ

ಹುದ್ದೆಯ ಹೆಸರು ಹುದ್ದೆಗಳ ಸಂಖ್ಯೆ
ಸಹ ಪ್ರಾಧ್ಯಾಪಕರು 01
ಸಹಾಯಕ ಪ್ರಾಧ್ಯಾಪಕರು 17
ಬ್ಲಡ್ ಸೆಂಟರ್ ಆಫೀಸರ್ 01
ಸಮಾಲೋಚಕರು (Consultants) 02
ಸ್ಪೆಷಲಿಸ್ಟ್ 01
ಸೀನಿಯರ್ ರೆಸಿಡೆಂಟ್ 03

ನೀವು MD/MS ಅಥವಾ equivalent qualification ಇದ್ದರೆ ಇದು strong opportunity.

Group-C (ನರ್ಸಿಂಗ್ ಅಧಿಕಾರಿಗಳು) – ಒಟ್ಟು 50 ಹುದ್ದೆಗಳು
  • ನರ್ಸಿಂಗ್ ಅಧಿಕಾರಿ – 50 ಹುದ್ದೆಗಳು

ನರ್ಸಿಂಗ್ ಕ್ಷೇತ್ರದಲ್ಲಿರುವವರಿಗೆ ಇದು ಸ್ಥಿರ ಮತ್ತು ಗೌರವಯುತ ಕೆಲಸದ ಉತ್ತಮ ಅವಕಾಶ. 

ಶೈಕ್ಷಣಿಕ ಅರ್ಹತೆ (Educational Qualification)

Group-A (ವೈದ್ಯಕೀಯ)
  • NMC (ನ್ಯಾಷನಲ್ ಮೆಡಿಕಲ್ ಕಮಿಷನ್) ನಿಯಮಗಳ ಪ್ರಕಾರ ಅಗತ್ಯ ವೈದ್ಯಕೀಯ ಅರ್ಹತೆ ಇರಬೇಕು
  • ಹುದ್ದೆಯ ಆಧಾರದ ಮೇಲೆ MD / MS / DNB ಅಥವಾ ಸಮಾನವಾದ ಪದವಿ ಇರಬೇಕು

 ಪ್ರತಿ ಹುದ್ದೆಗೆ ಬೇಕಾಗುವ ಅರ್ಹತೆ ಸ್ವಲ್ಪ ವಿಭಿನ್ನವಾಗಿರುತ್ತದೆ ಆದ್ದರಿಂದ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸುವುದು ಮುಖ್ಯ. ಈ ರಾಜ್ಯ ಹೊಂದಿರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಹೊಂದಿರುತ್ತಾರೆ ಮತ್ತು ಅನುಭವ ಹೊಂದಿದವರಿಗೆ ಆದ್ಯತೆ ನೀಡಲಾಗುತ್ತದೆ.

Group-C (ನರ್ಸಿಂಗ್)

ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ  ಪದವಿ ಹೊಂದಿರಬೇಕು 

ನರ್ಸಿಂಗ್ ಕೌನ್ಸಿಲ್‌ನಲ್ಲಿ ಮಾನ್ಯ ನೋಂದಣಿ (Registration) ಕಡ್ಡಾಯ

ಹೆಚ್ಚುವರಿ ಲಾಭ : 

ಮಕ್ಕಳ ನರ್ಸಿಂಗ್ (Paediatric Nursing) ಅನುಭವ ಇರುವವರಿಗೆ ಮೊದಲ ಆದ್ಯತೆ ಸಿಗುತ್ತದೆ

 ಈ ಹುದ್ದೆಗೆ ಅರ್ಜಿ ಹಾಕುವ ಅಭ್ಯರ್ಥಿಗಳು ಉತ್ತಮ clinical knowledge ಹೊಂದಿರಬೇಕು ಮತ್ತು hospital experience ಇದ್ದರೆ ಆಯ್ಕೆ ಸಾಧ್ಯತೆ ಹೆಚ್ಚು ಇರುತ್ತದೆ.

ವೇತನ ವಿವರ (Salary Details)

ವೈದ್ಯಕೀಯ ಹುದ್ದೆಗಳು:
  • ತಿಂಗಳಿಗೆ ₹75,000 ರಿಂದ ₹2,50,000 ವರೆಗೆ

 ವೇತನವು ಹುದ್ದೆ ಮತ್ತು ಅನುಭವದ ಆಧಾರದ ಮೇಲೆ ಬದಲಾಗುತ್ತದೆ

 ನರ್ಸಿಂಗ್ ಅಧಿಕಾರಿಗಳು:
  • ತಿಂಗಳಿಗೆ ₹33,350

 ಹೊಸದಾಗಿ ಸೇರಿದವರಿಗೂ ಹಾಗೂ ಅನುಭವ ಹೊಂದಿದವರಿಗೂ ಉತ್ತಮ ವೇತನ ಪ್ಯಾಕೇಜ್ ಸಿಗುತ್ತದೆ

ವಯೋಮಿತಿ (Age Limit)

Group-A:

ಸಹ ಪ್ರಾಧ್ಯಾಪಕರು 46 ರಿಂದ 53 ವರ್ಷ
ಸಹಾಯಕ ಪ್ರಾಧ್ಯಾಪಕರು / ಸೀನಿಯರ್ ರೆಸಿಡೆಂಟ್ 43 ರಿಂದ 48 ವರ್ಷ
ಸಮಾಲೋಚಕರು (Consultant) ಗರಿಷ್ಠ 60 ವರ್ಷ ವಯೋಮಿತಿ

Group-C:

ಸಾಮಾನ್ಯ (General) 40 ವರ್ಷ
ಇತರೆ ಹಿಂದುಳಿದ ವರ್ಗ (OBC) 43 ವರ್ಷ
SC/ST 45 ವರ್ಷ

ಸರ್ಕಾರಿ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಈಗಾಗಲೇ ಒಳಗೊಂಡಿದೆ.

ಅರ್ಜಿ ಸಲ್ಲಿಸುವ ವಿಧಾನ (Application Process)

ಈ ನೇಮಕಾತಿ ಆನ್‌ಲೈನ್ ಅಲ್ಲ !
 ನೀವು ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು

ಹಂತ 1: ಅರ್ಜಿ ಡೌನ್‌ಲೋಡ್ 
  • ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ (http://igich.karnataka.gov.in)
  • ಅರ್ಜಿ ನಮೂನೆಯನ್ನು (Application Form) ಡೌನ್‌ಲೋಡ್ ಮಾಡಿ

 ಫಾರ್ಮ್ ಸರಿಯಾಗಿ ಪೂರ್ತಿ ತುಂಬುವುದು ಬಹಳ ಮುಖ್ಯ

ಹಂತ 2: ಅರ್ಜಿ ನಮೂನೆ ಭರ್ತಿ 
  • ಅರ್ಜಿಯ ಪ್ರಿಂಟ್ ತೆಗೆದುಕೊಳ್ಳಿ
  • ಎಲ್ಲಾ ವಿವರಗಳನ್ನು ಸರಿಯಾಗಿ ಪೂರ್ತಿ ಭರ್ತಿ ಮಾಡಿ
  • ಯಾವುದೇ spelling mistake ಆಗದಂತೆ ಗಮನ ಕೊಡಿ

ಸಣ್ಣ ತಪ್ಪು ಕೂಡ ಅರ್ಜಿ ತಿರಸ್ಕಾರವಾಗುವ ಸಾಧ್ಯತೆ ಇದೆ, ಆದ್ದರಿಂದ ತುಂಬಾ ಎಚ್ಚರಿಕೆಯಿಂದ ಭರ್ತಿ ಮಾಡಬೇಕು.

ಹಂತ 3: ಅಗತ್ಯ ದಾಖಲೆಗಳನ್ನು ಸೇರಿಸುವುದು

ಈ ಕೆಳಗಿನ ದಾಖಲೆಗಳನ್ನು ಅರ್ಜಿಗೆ ಸೇರಿಸಬೇಕು:

  • ವಿದ್ಯಾರ್ಹತಾ ಪ್ರಮಾಣಪತ್ರಗಳು
  • ವಯಸ್ಸಿನ ಪ್ರಮಾಣಪತ್ರ
  • ಅನುಭವ ಪ್ರಮಾಣಪತ್ರಗಳು
  • ಗುರುತಿನ ಪುರಾವೆ (ID Proof)

ಎಲ್ಲಾ ದಾಖಲೆಗಳ ಮೇಲೂ ಸ್ವಹಸ್ತಾಕ್ಷರ (Self-attested) ಇರಬೇಕು

ಹಂತ 4: ಅರ್ಜಿ ಸಲ್ಲಿಕೆ
  • ಭರ್ತಿ ಮಾಡಿದ ಅರ್ಜಿ ಫಾರ್ಮ್ + ಅಗತ್ಯ ದಾಖಲೆಗಳು + ಶುಲ್ಕ (ಅಗತ್ಯವಿದ್ದರೆ) ಎಲ್ಲವನ್ನು ಸೇರಿಸಿ
  • ನೀವು ಅರ್ಜಿಯನ್ನು ನೇರವಾಗಿ ಕಚೇರಿಗೆ ಹೋಗಿ ಕೊಡಬಹುದು ಅಥವಾ ಪೋಸ್ಟ್ ಮೂಲಕ ಕಳುಹಿಸಬಹುದು.

 ಕೊನೆಯ ದಿನಾಂಕ: 08 ಮೇ 2026 – ಸಂಜೆ 5:30 ಒಳಗೆ ಸಲ್ಲಿಸಬೇಕು

ಸಮಯ ಮೀರಿದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

ಗಮನಿಸಿ:  ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಕಚೇರಿ ಸಮಯದಲ್ಲಿ (ಬೆಳಗ್ಗೆ 10:30 ರಿಂದ ಸಂಜೆ 5:30 ರವರೆಗೆ) ಸಂಪರ್ಕಿಸಬಹುದು ಅಥವಾ ಸಂಸ್ಥೆಯ ಇ-ಮೇಲ್ ವಿಳಾಸ (ihealthchild@yahoo.in )ಗೆ ಇಮೇಲ್ ಮೂಲಕ ಸಂಪರ್ಕಿಸಬಹುದು.

ಅರ್ಜಿ ಶುಲ್ಕ (Application Fee)

  • ಸಾಮಾನ್ಯ ವರ್ಗದ (GM) ಅಭ್ಯರ್ಥಿಗಳಿಗೆ : ₹2,000
  • ಒಬಿಸಿ (OBC) ವರ್ಗದ ಅಭ್ಯರ್ಥಿಗಳಿಗೆ : ₹1,500
  • ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ-1 ರ ಅಭ್ಯರ್ಥಿಗಳಿಗೆ  : ₹500

ಶುಲ್ಕ ಪಾವತಿ ಕಡ್ಡಾಯ (ವಿನಾಯಿತಿ ಪಡೆದ ವರ್ಗವನ್ನು ಹೊರತುಪಡಿಸಿ)

ಪ್ರಮುಖ ಸಲಹೆಗಳು (Very Important) 

ಅರ್ಜಿ ಸಲ್ಲಿಸುವ ಮೊದಲು:

  • ಎಲ್ಲಾ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸಿ
  • ಸಹಿ ಮತ್ತು ಫೋಟೋಗಳನ್ನು ಸರಿಯಾಗಿ ಅಂಟಿಸಿ
  • ಲಕೋಟೆಯ ಮೇಲೆ ಸರಿಯಾದ ವಿವರಗಳನ್ನು ಸ್ಪಷ್ಟವಾಗಿ ಬರೆಯಿರಿ

ಈ ಹಂತಗಳನ್ನು ಸರಿಯಾಗಿ ಪಾಲಿಸಿದರೆ ಅರ್ಜಿ reject ಆಗುವ ಸಾಧ್ಯತೆ ಕಡಿಮೆ

ಪ್ರಮುಖ ಲಿಂಕ್‌ಗಳು (Important Links)

ಅಧಿಸೂಚನೆ Click Here
ಅಧಿಕೃತ ವೆಬ್‌ಸೈಟ್ Click Here

ಕೊನೆಯ ಮಾತು

IGICH Recruitment 2026 ಒಂದು ಸಾಮಾನ್ಯ ಉದ್ಯೋಗ ಅವಕಾಶವಲ್ಲ, ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವರಿಗೆ ತಮ್ಮcareer ಅನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗುವ ಒಂದು ವಿಶೇಷ ಅವಕಾಶವಾಗಿದೆ. ಇಲ್ಲಿ ಕೆಲಸ ಮಾಡುವುದರಿಂದ ಉತ್ತಮ ಅನುಭವ, ವೃತ್ತಿ ಸ್ಥಿರತೆ ಮತ್ತು ಬೆಳವಣಿಗೆ ಸಿಗುತ್ತದೆ.

ಅರ್ಹರಾಗಿರುವ ವಿದ್ಯಾರ್ಥಿಗಳು ಯಾವುದೇ ವಿಳಂಬ ಮಾಡದೆ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿ ಕೊನೆಯ ದಿನಾಂಕಕ್ಕೂ ಮುಂಚಿತವಾಗಿ ಅರ್ಜಿ ಸಲ್ಲಿಸುವುದು ಬಹಳ ಮುಖ್ಯ ಇಂತಹ ಅವಕಾಶಗಳು ಪದೇಪದೇ ಸಿಗುವುದಿಲ್ಲ ಆದ್ದರಿಂದ ಇದನ್ನು ಸರಿಯಾಗಿ ಬಳಸಿಕೊಂಡು ನಿಮ್ಮ ಭವಿಷ್ಯವನ್ನು ಇನ್ನಷ್ಟು ಬಲಪಡಿಸಿಕೊಳ್ಳಬಹುದು ಆದ್ದರಿಂದ ಈಗಿನಿಂದಲೇ ಅರ್ಜಿ ಸಲ್ಲಿಸಲು ಬೇಕಾದ ಎಲ್ಲ ತಯಾರಿಯನ್ನು ಮತ್ತು ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಿ.

ಇದನ್ನು ಓದಿ:      

BEL Recruitment 2026: ₹17,500 ಸ್ಟೈಫಂಡ್ – Degree & Diploma ಅಭ್ಯರ್ಥಿಗಳಿಗೆ ಅವಕಾಶ, ಏಪ್ರಿಲ್ 28 ರಂದು ನೇರ ಸಂದರ್ಶನ, ಈ ಅವಕಾಶವನ್ನು Miss ಮಾಡ್ಬೇಡಿ!

Leave a Comment