Canara Bank Recruitment 2026
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸದ ಅನುಭವ ಪಡೆಯಬೇಕು ಎಂದುಕೊಳ್ಳುತ್ತಿರುವ ಪದವೀಧರರಿಗೆ Canara Bank Graduate Apprentice Recruitment 2026 ಒಂದು ಪ್ರಮುಖ ಅವಕಾಶವಾಗಿದೆ. ಕೆನರಾ ಬ್ಯಾಂಕ್ ವತಿಯಿಂದ 2026-27ನೇ ಹಣಕಾಸು ವರ್ಷದ Graduate Apprenticeship ತರಬೇತಿಗಾಗಿ ಒಟ್ಟು 3,500 ಸ್ಥಾನಗಳನ್ನು ಪ್ರಕಟಿಸಲಾಗಿದೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳ ವಯಸ್ಸು 20 ರಿಂದ 28 ವರ್ಷಗಳ ನಡುವೆ ಇರಬೇಕು. ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ Degree (Graduation) ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.ಅಭ್ಯರ್ಥಿಗಳು ತಮ್ಮ ಪದವಿಯನ್ನು 01-01-2023ರ ನಂತರ ಮತ್ತು 01-09-2026ರೊಳಗೆ ಪೂರ್ಣಗೊಳಿಸಿರಬೇಕು. ಅರ್ಹತೆ ಹೊಂದಿರುವ ಅಭ್ಯರ್ಥಿಗಳು Canara Bank Graduate Apprentice Recruitment 2026ಕ್ಕೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಈ ನೇಮಕಾತಿಯ ಆನ್ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ 17-10-2026ರವರೆಗೆ ಮುಂದುವರಿಯಲಿದೆ. ಆದ್ದರಿಂದ ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸುವುದು ಅಗತ್ಯವಾಗಿದೆ.
ಕೆನರಾ ಬ್ಯಾಂಕ್ ನೇಮಕಾತಿ ನೇಮಕಾತಿ 2026 – ಮುಖ್ಯ ಮಾಹಿತಿ
| ವಿವರ |
ಮಾಹಿತಿ |
| ಸಂಸ್ಥೆ |
ಕೆನರಾ ಬ್ಯಾಂಕ್ |
| ಕಾರ್ಯಕ್ರಮ |
Apprentices Act, 1961ರ ಅಡಿಯಲ್ಲಿ ಪದವೀಧರ ಅಪ್ರೆಂಟಿಸ್ಗಳು |
| ಒಟ್ಟು ಹುದ್ದೆಗಳು |
3,500 (ತಾತ್ಕಾಲಿಕ) |
| ಅರ್ಜಿ ದಿನಾಂಕ |
01 ಅಕ್ಟೋಬರ್ ರಿಂದ 17 ಅಕ್ಟೋಬರ್ 2026 |
| ಅರ್ಜಿ ವಿಧಾನ |
ಆನ್ಲೈನ್ |
| ತರಬೇತಿ ಅವಧಿ |
12 ತಿಂಗಳು |
| ಸ್ಟೈಪೆಂಡ್ |
ತಿಂಗಳಿಗೆ ₹16,650 |
| ಅಧಿಕೃತ ವೆಬ್ಸೈಟ್ಗಳು |
nats.education.gov.in, canarabank.bank.in |
ಕೆನರಾ ಬ್ಯಾಂಕ್ ನೇಮಕಾತಿ 2026: ಪ್ರಮುಖ ದಿನಾಂಕಗಳು
| ಅಧಿಸೂಚನೆ ಬಿಡುಗಡೆ |
25 ಸೆಪ್ಟೆಂಬರ್ 2026 |
| ಆನ್ಲೈನ್ ಅರ್ಜಿ ಆರಂಭ |
01 ಅಕ್ಟೋಬರ್ 2026 |
| ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ |
17 ಅಕ್ಟೋಬರ್ 2026 |
| ವಯಸ್ಸು ಮತ್ತು ವಿದ್ಯಾರ್ಹತೆ ಪರಿಗಣಿಸುವ ದಿನಾಂಕ |
01 ಸೆಪ್ಟೆಂಬರ್ 2026 |
ಕೆನರಾ ಬ್ಯಾಂಕ್ ನೇಮಕಾತಿ 2026: ಹುದ್ದೆಗಳ ವಿವರ (Vacancy Details)
ಅಭ್ಯರ್ಥಿಗಳು ಒಂದು ರಾಜ್ಯಕ್ಕೆ ಮಾತ್ರ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿಯಲ್ಲಿ ಕರ್ನಾಟಕದಲ್ಲಿ ಅತಿ ಹೆಚ್ಚು 581 ಹುದ್ದೆಗಳು ಲಭ್ಯವಿದ್ದು, ನಂತರ ಉತ್ತರ ಪ್ರದೇಶದಲ್ಲಿ 409 ಹುದ್ದೆಗಳು ಮತ್ತು ತಮಿಳುನಾಡಿನಲ್ಲಿ 391 ಹುದ್ದೆಗಳು ಇವೆ.
| ವರ್ಗ |
ಹುದ್ದೆಗಳ ಸಂಖ್ಯೆ |
| SC |
553 |
| ST |
226 |
| OBC |
845 |
| EWS |
335 |
| UR |
1541 |
| ಒಟ್ಟು |
3500 |
ಕೆನರಾ ಬ್ಯಾಂಕ್ ನೇಮಕಾತಿ 2026: ರಾಜ್ಯವಾರು ಹುದ್ದೆಗಳ ವಿವರ
| ರಾಜ್ಯ / ಕೇಂದ್ರಾಡಳಿತ ಪ್ರದೇಶ |
ಸ್ಥಳೀಯ ಭಾಷೆ |
ಹುದ್ದೆಗಳ ಸಂಖ್ಯೆ |
| ಕರ್ನಾಟಕ |
ಕನ್ನಡ |
581 |
| ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು (UT) |
ಹಿಂದಿ / ಇಂಗ್ಲಿಷ್ |
4 |
| ಆಂಧ್ರ ಪ್ರದೇಶ |
ತೆಲುಗು / ಉರ್ದು |
247 |
| ಅರುಣಾಚಲ ಪ್ರದೇಶ |
ಇಂಗ್ಲಿಷ್ |
5 |
| ಅಸ್ಸಾಂ |
ಅಸ್ಸಾಮಿ / ಬೆಂಗಾಲಿ / ಬೋಡೋ |
42 |
| ಬಿಹಾರ |
ಹಿಂದಿ / ಉರ್ದು |
122 |
| ಚಂಡೀಗಢ (UT) |
ಹಿಂದಿ / ಪಂಜಾಬಿ |
6 |
| ಛತ್ತೀಸ್ಗಢ |
ಹಿಂದಿ |
39 |
| ದಾದ್ರಾ ಮತ್ತು ನಗರ ಹವೇಲಿ (UT) |
ಗುಜರಾತಿ |
1 |
| ದಮನ್ ಮತ್ತು ದಿಯು (UT) |
ಗುಜರಾತಿ |
1 |
| ದೆಹಲಿ (UT) |
ಹಿಂದಿ |
93 |
| ಗೋವಾ |
ಕೊಂಕಣಿ |
25 |
| ಗುಜರಾತ್ |
ಗುಜರಾತಿ |
89 |
| ಹರಿಯಾಣ |
ಹಿಂದಿ / ಪಂಜಾಬಿ |
114 |
| ಹಿಮಾಚಲ ಪ್ರದೇಶ |
ಹಿಂದಿ |
23 |
| ಜಮ್ಮು ಮತ್ತು ಕಾಶ್ಮೀರ |
ಉರ್ದು / ಹಿಂದಿ |
16 |
| ಜಾರ್ಖಂಡ್ |
ಹಿಂದಿ / ಸಂತಾಲಿ |
74 |
| ಕೇರಳ |
ಮಲಯಾಳಂ |
240 |
| ಲಡಾಖ್ (UT) |
ಉರ್ದು / ಲಡಾಖಿ / ಭೋಟಿ |
1 |
| ಲಕ್ಷದ್ವೀಪ (UT) |
ಮಲಯಾಳಂ |
4 |
| ಮಧ್ಯ ಪ್ರದೇಶ |
ಹಿಂದಿ |
110 |
| ಮಹಾರಾಷ್ಟ್ರ |
ಮರಾಠಿ |
205 |
| ಮಣಿಪುರ |
ಮಣಿಪುರಿ / ಇಂಗ್ಲಿಷ್ |
3 |
| ಮೇಘಾಲಯ |
ಇಂಗ್ಲಿಷ್ / ಗಾರೋ / ಖಾಸಿ |
5 |
| ಮಿಜೋರಾಂ |
ಮಿಜೋ |
2 |
| ನಾಗಾಲ್ಯಾಂಡ್ |
ಇಂಗ್ಲಿಷ್ |
4 |
| ಒಡಿಶಾ |
ಒಡಿಯಾ |
104 |
| ಪುದುಚೇರಿ (UT) |
ತಮಿಳು |
4 |
| ಪಂಜಾಬ್ |
ಪಂಜಾಬಿ / ಹಿಂದಿ |
96 |
| ರಾಜಸ್ಥಾನ |
ಹಿಂದಿ |
96 |
| ಸಿಕ್ಕಿಂ |
ನೇಪಾಳಿ / ಇಂಗ್ಲಿಷ್ |
4 |
| ತಮಿಳುನಾಡು |
ತಮಿಳು |
391 |
| ತೆಲಂಗಾಣ |
ತೆಲುಗು / ಉರ್ದು |
134 |
| ತ್ರಿಪುರಾ |
ಬೆಂಗಾಲಿ / ಕೊಕ್ಬೊರೊಕ್ |
8 |
| ಉತ್ತರ ಪ್ರದೇಶ |
ಹಿಂದಿ / ಉರ್ದು |
409 |
| ಉತ್ತರಾಖಂಡ |
ಹಿಂದಿ |
48 |
| ಪಶ್ಚಿಮ ಬಂಗಾಳ |
ಬೆಂಗಾಲಿ / ನೇಪಾಳಿ |
150 |
| ಒಟ್ಟು ಹುದ್ದೆಗಳು |
|
3500 |
ಇದನ್ನು ಓದಿ: Reliance Scholarship 2026-27: ಪದವಿ ಮತ್ತು PG ವಿದ್ಯಾರ್ಥಿಗಳಿಗೆ ₹2 ರಿಂದ ₹6 ಲಕ್ಷದವರೆಗೆ ವಿದ್ಯಾರ್ಥಿವೇತನ
ಕೆನರಾ ಬ್ಯಾಂಕ್ ನೇಮಕಾತಿ 2026 ಅರ್ಹತಾ ಮಾನದಂಡಗಳು (Eligibility Criteria)
ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ಈ ಲೇಖನದಲ್ಲಿ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಎಚ್ಚರಿಕೆಯಿಂದ ಪರಿಶೀಲಿಸಿ, ವಯಸ್ಸು, ವಿದ್ಯಾರ್ಹತೆ, ಸ್ಥಳೀಯ ಭಾಷೆ ಸೇರಿದಂತೆ ಎಲ್ಲಾ ವಿವರವಾದ ಅರ್ಹತಾ ಷರತ್ತುಗಳನ್ನು ತಿಳಿದುಕೊಳ್ಳುವುದು ಸೂಕ್ತವಾಗಿದೆ.
-
ಶೈಕ್ಷಣಿಕ ಅರ್ಹತೆ (01-09-2026ರಂತೆ)
ಅಭ್ಯರ್ಥಿಗಳು ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಪದವಿ (Graduation Degree) ಪಡೆದಿರಬೇಕು. ಕೇಂದ್ರ ಸರ್ಕಾರದಿಂದ ಸಮಾನವೆಂದು ಮಾನ್ಯತೆ ಪಡೆದಿರುವ ಇತರೆ ವಿದ್ಯಾರ್ಹತೆಗಳನ್ನೂ ಪರಿಗಣಿಸಲಾಗುತ್ತದೆ.
ಅಭ್ಯರ್ಥಿಗಳು ತಮ್ಮ ಪದವಿಯನ್ನು 01-01-2023ರಿಂದ 01-09-2026ರ ನಡುವೆ ಪೂರ್ಣಗೊಳಿಸಿರಬೇಕು. ಈ ಎರಡೂ ದಿನಾಂಕಗಳನ್ನು ಒಳಗೊಂಡಂತೆ ಪದವಿ ಪೂರ್ಣಗೊಂಡಿರಬೇಕು.
-
ಸ್ಥಳೀಯ ಭಾಷಾ ಪರೀಕ್ಷೆ (Local Language Test)
ಅಭ್ಯರ್ಥಿಗಳು ತಾವು ಆಯ್ಕೆ ಮಾಡಿಕೊಂಡಿರುವ ಸ್ಥಳೀಯ ಭಾಷೆಯನ್ನು 10ನೇ ಅಥವಾ 12ನೇ ತರಗತಿಯಲ್ಲಿ ಓದಿರುವುದನ್ನು ತೋರಿಸುವ ಅಂಕಪಟ್ಟಿ ಅಥವಾ ಪ್ರಮಾಣಪತ್ರವನ್ನು ಸಲ್ಲಿಸಿದರೆ, ಅವರಿಗೆ ಸ್ಥಳೀಯ ಭಾಷಾ ಪರೀಕ್ಷೆಯಿಂದ ವಿನಾಯಿತಿ ನೀಡಲಾಗುತ್ತದೆ.
ಉಳಿದ ಎಲ್ಲಾ ಅಭ್ಯರ್ಥಿಗಳು ಆಯ್ಕೆ ಪ್ರಕ್ರಿಯೆಯ ಭಾಗವಾಗಿ ಸ್ಥಳೀಯ ಭಾಷಾ ಪರೀಕ್ಷೆಗೆ ಹಾಜರಾಗಬೇಕು. ಈ ಪರೀಕ್ಷೆಯನ್ನು ದಾಖಲೆ ಪರಿಶೀಲನೆಯ (Document Verification) ಸಮಯದಲ್ಲಿ ನಡೆಸಲಾಗುತ್ತದೆ.ಸ್ಥಳೀಯ ಭಾಷಾ ಪರೀಕ್ಷೆಯಲ್ಲಿ ಅರ್ಹತೆ ಪಡೆಯಲು ವಿಫಲರಾದ ಅಭ್ಯರ್ಥಿಗಳನ್ನು ಅಪ್ರೆಂಟಿಸ್ಗಳಾಗಿ ನೇಮಕ ಮಾಡಲಾಗುವುದಿಲ್ಲ.
ವಯೋಮಿತಿ (01-09-2026ರಂತೆ)(Age Limit)
ಅಭ್ಯರ್ಥಿಗಳು ಕನಿಷ್ಠ 20 ವರ್ಷ ವಯಸ್ಸಿನವರಾಗಿರಬೇಕು ಮತ್ತು ಗರಿಷ್ಠ 28 ವರ್ಷ ವಯಸ್ಸಿನವರಾಗಿರಬೇಕು. ವಯೋಮಿತಿ ಸಡಿಲಿಕೆ ವಿವರಗಳಿಗಾಗಿ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಿ. ಮೀಸಲಾತಿ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಅನ್ವಯಿಸುತ್ತದೆ.
| ವರ್ಗ |
ವಯೋಮಿತಿ ಸಡಿಲಿಕೆ |
| SC/ST |
5 ವರ್ಷ |
| OBC (Non-Creamy Layer) |
3 ವರ್ಷ |
| PwBD |
10 ವರ್ಷ |
| ವಿಧವೆಯರು, ವಿಚ್ಛೇದಿತ ಅಥವಾ ಕಾನೂನುಬದ್ಧವಾಗಿ ಬೇರ್ಪಟ್ಟ ಮಹಿಳೆಯರು (ಮರುವಿವಾಹವಾಗಿರಬಾರದು) |
ಸಾಮಾನ್ಯ/EWS – 35 ವರ್ಷಗಳವರೆಗೆ; OBC – 38 ವರ್ಷಗಳವರೆಗೆ; SC/ST – 40 ವರ್ಷಗಳವರೆಗೆ |
ಅಭ್ಯರ್ಥಿಗಳು ನೋಂದಣಿಗಾಗಿ ಅರ್ಜಿ ಶುಲ್ಕ/ಸೂಚನೆ ಶುಲ್ಕವನ್ನು ಪಾವತಿಸಬೇಕು. ನೋಂದಣಿ ಶುಲ್ಕವಿಲ್ಲದೆ ಸಲ್ಲಿಸಿದ ಅರ್ಜಿಗಳನ್ನು ಆಯ್ಕೆಗೆ ಪರಿಗಣಿಸಲಾಗುವುದಿಲ್ಲ. ಅಭ್ಯರ್ಥಿಗಳು ಕೆಳಗಿನ ಕೋಷ್ಟಕದಿಂದ ವರ್ಗವಾರು ಶುಲ್ಕದ ವಿವರಗಳನ್ನು ಪರಿಶೀಲಿಸಬಹುದು:
| ವರ್ಗ |
ಅರ್ಜಿ ಶುಲ್ಕ |
| SC / ST / PwBD |
ಶುಲ್ಕವಿಲ್ಲ |
| ಇತರೆ ಅಭ್ಯರ್ಥಿಗಳು |
₹500 |
Canara Bank Recruitment 2026
ಕೆನರಾ ಬ್ಯಾಂಕ್ ಅಪ್ರೆಂಟಿಸ್ ಸ್ಟೈಪೆಂಡ್(Stipend)
ಕೆನರಾ ಬ್ಯಾಂಕ್ನಲ್ಲಿ ಅಪ್ರೆಂಟಿಸ್ ಆಗಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ₹16,650 ಸ್ಟೈಪೆಂಡ್ ನೀಡಲಾಗುತ್ತದೆ.
| ಸ್ಟೈಪೆಂಡ್ ವಿವರ |
ಮೊತ್ತ |
| ಕೆನರಾ ಬ್ಯಾಂಕ್ ನೀಡುವ ಮೊತ್ತ |
₹10,500 |
| ಸರ್ಕಾರದ ಪಾಲು (DBT) |
₹6,150 |
| ಒಟ್ಟು ಮಾಸಿಕ ಸ್ಟೈಪೆಂಡ್ |
₹16,650 |
ಕೆನರಾ ಬ್ಯಾಂಕ್ ನೇಮಕಾತಿ 2026 ಆಯ್ಕೆ ಪ್ರಕ್ರಿಯೆ(Selection Process)
ಕೆನರಾ ಬ್ಯಾಂಕ್ ಅಪ್ರೆಂಟಿಸ್ ಆಯ್ಕೆ ಪ್ರಕ್ರಿಯೆಯು ಈ ಕೆಳಗಿನ ಹಂತಗಳನ್ನು ಒಳಗೊಂಡಿದೆ:
- ಮೆರಿಟ್ ಪಟ್ಟಿ: ರಾಜ್ಯವಾರು ಮೆರಿಟ್ ಪಟ್ಟಿಯನ್ನು ಅಭ್ಯರ್ಥಿಗಳ 12ನೇ ತರಗತಿ (HSC/10+2) ಅಥವಾ ಡಿಪ್ಲೊಮಾ ಅಂಕಗಳ ಶೇಕಡಾವಾರು ಆಧಾರದ ಮೇಲೆ ಸಿದ್ಧಪಡಿಸಲಾಗುತ್ತದೆ. ಇಬ್ಬರು ಅಭ್ಯರ್ಥಿಗಳು ಒಂದೇ ಶೇಕಡಾವಾರು ಅಂಕಗಳನ್ನು ಪಡೆದಿದ್ದರೆ, ಹೆಚ್ಚು ವಯಸ್ಸಿನ ಅಭ್ಯರ್ಥಿಗೆ ಹೆಚ್ಚಿನ ಸ್ಥಾನ ನೀಡಲಾಗುತ್ತದೆ.
- ಕನಿಷ್ಠ ಅಂಕಗಳು: 12ನೇ ತರಗತಿ ಅಥವಾ ಡಿಪ್ಲೊಮಾದಲ್ಲಿ ಕನಿಷ್ಠ 60% ಅಂಕಗಳು ಇರಬೇಕು. SC/ST/PwBD ಅಭ್ಯರ್ಥಿಗಳಿಗೆ 55% ಅಂಕಗಳು ಅಗತ್ಯವಿದೆ. 59.99% ಅಂಕಗಳನ್ನು 60% ಎಂದು ಪರಿಗಣಿಸಲಾಗುವುದಿಲ್ಲ.
- ದಾಖಲೆ ಪರಿಶೀಲನೆ ಮತ್ತು ಸ್ಥಳೀಯ ಭಾಷಾ ಪರೀಕ್ಷೆ: ಎರಡನ್ನೂ ಒಟ್ಟಿಗೆ ನಡೆಸಲಾಗುತ್ತದೆ. ಅಭ್ಯರ್ಥಿಯ 10ನೇ ಅಥವಾ 12ನೇ ತರಗತಿಯ ಅಂಕಪಟ್ಟಿಯಲ್ಲಿ ಆಯ್ಕೆ ಮಾಡಿಕೊಂಡಿರುವ ಸ್ಥಳೀಯ ಭಾಷೆಯನ್ನು ಓದಿರುವುದು ನಮೂದಾಗಿದ್ದರೆ, ಸ್ಥಳೀಯ ಭಾಷಾ ಪರೀಕ್ಷೆಯಿಂದ ವಿನಾಯಿತಿ ನೀಡಲಾಗುತ್ತದೆ.
- ವೈದ್ಯಕೀಯ ಅರ್ಹತೆ: ಆಯ್ಕೆಯಾದ ಅಭ್ಯರ್ಥಿಗಳು ಬ್ಯಾಂಕ್ನ ನಿಯಮಾನುಸಾರ ವೈದ್ಯಕೀಯವಾಗಿ ಅರ್ಹರು (Medically Fit) ಎಂದು ಘೋಷಿಸಲ್ಪಟ್ಟಿರಬೇಕು.
ಅರ್ಜಿ ಸಲ್ಲಿಸುವ ವಿಧಾನ(How to Apply)
- ಮೊದಲು NATS ಪೋರ್ಟಲ್ನಲ್ಲಿ ನೋಂದಣಿ ಮಾಡಿಕೊಂಡು ನಿಮ್ಮ ಪ್ರೊಫೈಲ್ ಅನ್ನು 100% ಪೂರ್ಣಗೊಳಿಸಿ. ನೋಂದಣಿ ಪೂರ್ಣಗೊಂಡ ನಂತರ ಸಿಗುವ Enrollment Number ಅನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಿ.
- ನಂತರ Canara Bank ಅಧಿಕೃತ ವೆಬ್ಸೈಟ್ ತೆರಳಿ Careers – Recruitment ವಿಭಾಗಕ್ಕೆ ಹೋಗಿ, “Engagement of Graduate Apprentices in Canara Bank under Apprentices Act, 1961 for FY 2026-27” ಎಂಬ ಲಿಂಕ್ ಆಯ್ಕೆಮಾಡಿ.
- “CLICK HERE FOR NEW REGISTRATION” ಮೇಲೆ ಕ್ಲಿಕ್ ಮಾಡಿ ಅಗತ್ಯವಿರುವ ಮೂಲ ಮಾಹಿತಿಯನ್ನು ನಮೂದಿಸಿ. ನೋಂದಣಿ ಪೂರ್ಣಗೊಂಡ ನಂತರ ತಾತ್ಕಾಲಿಕ ನೋಂದಣಿ ಸಂಖ್ಯೆ ಮತ್ತು ಪಾಸ್ವರ್ಡ್ ರಚನೆಯಾಗುತ್ತದೆ. ಇವುಗಳನ್ನು ಇ-ಮೇಲ್ ಮತ್ತು SMS ಮೂಲಕವೂ ಕಳುಹಿಸಲಾಗುತ್ತದೆ. ಈ ವಿವರಗಳನ್ನು ಬಳಸಿ ಅರ್ಜಿಯನ್ನು ಮತ್ತೆ ತೆರೆಯಬಹುದು.
- ನಿಮ್ಮ NATS Enrollment ID ನಮೂದಿಸಿ, ಅರ್ಜಿಯಲ್ಲಿರುವ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ. ನಂತರ ಒಂದು ರಾಜ್ಯವನ್ನು ಆಯ್ಕೆ ಮಾಡಿಕೊಂಡು, ಅಗತ್ಯವಿರುವ ಜಿಲ್ಲೆಗಳ ಆದ್ಯತೆಯನ್ನು ನಮೂದಿಸಿ.
- ಸೂಚಿಸಿರುವ ನಿಯಮಗಳಂತೆ ಫೋಟೋ, ಸಹಿ, ಎಡಗೈ ಹೆಬ್ಬೆರಳಿನ ಗುರುತು ಮತ್ತು ಕೈಬರಹದ ಘೋಷಣೆಯನ್ನು ಅಪ್ಲೋಡ್ ಮಾಡಿ.
- “SAVE AND NEXT” ಆಯ್ಕೆಮಾಡಿ ಅರ್ಜಿಯಲ್ಲಿರುವ ಎಲ್ಲಾ ವಿವರಗಳನ್ನು ಪರಿಶೀಲಿಸಿ. “FINAL SUBMIT” ಕ್ಲಿಕ್ ಮಾಡಿದ ನಂತರ ಯಾವುದೇ ಮಾಹಿತಿಯನ್ನು ಬದಲಾಯಿಸಲು ಸಾಧ್ಯವಾಗುವುದಿಲ್ಲ.
- ಅನ್ವಯವಾಗುವ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿಸಿ, ನಂತರ ಭರ್ತಿ ಮಾಡಿದ ಅರ್ಜಿ ಮತ್ತು ಇ-ರಸೀದಿಯ ಪ್ರಿಂಟ್ಔಟ್ ತೆಗೆದುಕೊಂಡು ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು.
ಅಗತ್ಯ ದಾಖಲೆಗಳು (Required Documents)
| ದಾಖಲೆ |
ಗಾತ್ರ |
ಫಾರ್ಮ್ಯಾಟ್ |
| ಭಾವಚಿತ್ರ (4.5 ಸೆಂ.ಮೀ × 3.5 ಸೆಂ.ಮೀ) |
20 ರಿಂದ 50 KB |
JPG/JPEG |
| ಸಹಿ (ಕಪ್ಪು ಶಾಯಿಯಲ್ಲಿ, Capital Lettersನಲ್ಲಿ ಇರಬಾರದು) |
10 ರಿಂದ 20 KB |
JPG/JPEG |
| ಎಡಗೈ ಹೆಬ್ಬೆರಳಿನ ಗುರುತು |
20 ರಿಂದ 50 KB |
JPG/JPEG |
| ಕೈಬರಹದ ಘೋಷಣೆ (ಇಂಗ್ಲಿಷ್ನಲ್ಲಿ, Capital Lettersನಲ್ಲಿ ಇರಬಾರದು) |
50 ರಿಂದ 100 KB |
JPG/JPEG |
Canara Bank Recruitment 2026
ಪ್ರಮುಖ ಲಿಂಕ್ಗಳು(Important Links)
ಕೊನೆಯ ಮಾತು
ಒಟ್ಟಿನಲ್ಲಿ Canara Bank Graduate Apprentice Recruitment 2026 ಮೂಲಕ 3,500 ಹುದ್ದೆಗಳಿಗೆ ಅವಕಾಶವಿದ್ದು, ಕರ್ನಾಟಕದಲ್ಲಿ 581 ಹುದ್ದೆಗಳು ಇವೆ. ತರಬೇತಿ ಅವಧಿ 1 ವರ್ಷ ಮತ್ತು ತಿಂಗಳಿಗೆ ₹16,650 ಸ್ಟೈಪೆಂಡ್ ನೀಡಲಾಗುತ್ತದೆ.ಅರ್ಜಿ ಸಲ್ಲಿಕೆ 01-10-2026ರಿಂದ 17-10-2026ರವರೆಗೆ ನಡೆಯಲಿದೆ. ಅರ್ಜಿ ಸಲ್ಲಿಸುವ ಮೊದಲು NATS registration, ವಿದ್ಯಾರ್ಹತೆ, ವಯೋಮಿತಿ ಮತ್ತು ಸ್ಥಳೀಯ ಭಾಷೆಯ ಅರ್ಹತೆ ಪರಿಶೀಲಿಸಿಕೊಳ್ಳಿ.