Telegram Join My Telegram WhatsApp Join My WhatsApp

India Post GDS Recruitment 2026: 10ನೇ ಪಾಸ್ ಅಭ್ಯರ್ಥಿಗಳಿಗೆ ಅಂಚೆ ಇಲಾಖೆಯಲ್ಲಿ 23,757 ಹುದ್ದೆಗಳಿಗೆ ಅರ್ಜಿ ಆಹ್ವಾನ

India Post GDS Recruitment 2026

10ನೇ ತರಗತಿ ಪಾಸ್ ಅಭ್ಯರ್ಥಿಗಳಿಗೆ ಅಂಚೆ ಇಲಾಖೆಯಲ್ಲಿ 23,757 ಹುದ್ದೆಗಳು: ಬರ್ಜರಿ ಅವಕಾಶ

ದೇಶದಾದ್ಯಂತ ಅಂಚೆ ಇಲಾಖೆಯಲ್ಲಿ ಉದ್ಯೋಗ ಪಡೆಯಲು ಕಾಯುತ್ತಿರುವ 10ನೇ ತರಗತಿ ಪಾಸ್ ಅಭ್ಯರ್ಥಿಗಳಿಗೆ ಇದೀಗ ಉತ್ತಮ ಅವಕಾಶವನ್ನು ಬಂದಿದೆ ಭಾರತೀಯ ಅಂಚೆ ಇಲಾಖೆ (India Post) Gramin Dak Sevak ಅಥವಾ GDS Recruitment 2026ರ ಹೊಸ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ  ಮಾಡಿದೆ  ಈ ನೇಮಕಾತಿಯ ಮೂಲಕ ದೇಶದ ವಿವಿಧ ಅಂಚೆ ವೃತ್ತಗಳು  ಮತ್ತು ವಿಭಾಗಗಳಲ್ಲಿರುವ ಗ್ರಾಮೀಣ ಪ್ರದೇಶದ ಅಂಚೆ ಕಛೇರಿಗಳಿಗೆ ಒಟ್ಟು 23,757 GDS  ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.

ಈ ನೇಮಕಾತಿಯಲ್ಲಿ Branch Postmaster (BPM), Assistant Branch Postmaster (ABPM) ಮತ್ತು Dak Sevak ಹುದ್ದೆಗಳು ಒಳಗೊಂಡಿವೆ. ವಿಶೇಷವಾಗಿ ಗಮನಿಸಬೇಕಾದ ಸಂಗತಿಯೆಂದರೆ, ಈ ನೇಮಕಾತಿಗೆ ಪ್ರತ್ಯೇಕವಾಗಿ ಯಾವುದೇ Written Exam ಇರುವುದಿಲ್ಲ. ಅಭ್ಯರ್ಥಿಗಳ 10ನೇ ತರಗತಿ ಅಂಕಗಳ ಆಧಾರದ ಮೇಲೆ Merit List ಸಿದ್ಧಪಡಿಸಿ ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ.

India Post GDS Online Engagement Schedule-II, July-2026 ಅಧಿಸೂಚನೆಯನ್ನು 20 ಆಗಸ್ಟ್ 2026ರಂದು ಬಿಡುಗಡೆ ಮಾಡಲಾಗಿದೆ. ಅರ್ಹ ಅಭ್ಯರ್ಥಿಗಳು ಅಧಿಕೃತ GDS Online Engagement Portal ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

 ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆ  ವಯೋಮಿತಿ ಸ್ಥಳೀಯ ಭಾಷೆ ಅಗತ್ಯ ದಾಖಲೆಗಳು ಹಾಗೂ ಇತರ ಅರ್ಹತಾ ಷರತ್ತುಗಳನ್ನು  ಸರಿಯಾಗಿ ನೋಡಿಕೊಂಡು ಅರ್ಜಿ ಹಾಕುವುದು ಬಹಳ ಮುಖ್ಯ 

ಅಂಚೆ ಇಲಾಖೆ ನೇಮಕಾತಿ 2026 ಪ್ರಮುಖ ವಿವರಗಳು

ವಿವರಗಳು ಮಾಹಿತಿ
ನೇಮಕಾತಿ ಇಲಾಖೆ ಭಾರತೀಯ ಅಂಚೆ ಇಲಾಖೆ (India Post)
ಹುದ್ದೆಗಳು ಗ್ರಾಮೀಣ ಡಾಕ್ ಸೇವಕ್ (BPM, ABPM, Dak Sevak)
ಒಟ್ಟು ಹುದ್ದೆಗಳು 23,757
ಅರ್ಜಿ ವಿಧಾನ ಆನ್‌ಲೈನ್
ಶೈಕ್ಷಣಿಕ ಅರ್ಹತೆ ಕೇವಲ 10ನೇ ತರಗತಿ (SSLC) ಪಾಸ್.
ನೋಂದಣಿ ಪ್ರಾರಂಭ ದಿನಾಂಕ 31 ಆಗಸ್ಟ್ 2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 21 ಸೆಪ್ಟೆಂಬರ್ 2026.
ಅಧಿಕೃತ ವೆಬ್‌ಸೈಟ್ indiapost.gov.in

ಪ್ರಮುಖ ದಿನಾಂಕಗಳು(Important Dates)

ಅಧಿಸೂಚನೆ ಪ್ರಕಟಣೆ ದಿನಾಂಕ 20 ಆಗಸ್ಟ್ 2026
ಆನ್‌ಲೈನ್ ಒನ್-ಟೈಮ್ ನೋಂದಣಿ (OTR) 31.08.2026 ರಿಂದ 19.09.2026 (ಸಂಜೆ 5:00 ಗಂಟೆಯವರೆಗೆ)
ಆನ್‌ಲೈನ್ ಅರ್ಜಿ ಸಲ್ಲಿಕೆ ಮತ್ತು ಶುಲ್ಕ ಪಾವತಿ 02.09.2026 ರಿಂದ 21.09.2026 (ಸಂಜೆ 5:00 ಗಂಟೆಯವರೆಗೆ)
ತಿದ್ದುಪಡಿ / Correction ಅವಕಾಶ 23.09.2026 ರಿಂದ 24.09.2026 (ಸಂಜೆ 5:00 ಗಂಟೆಯವರೆಗೆ)
ಪೂರಕ Shortlist ಪ್ರಕಟಣೆಯ ಕೊನೆಯ ದಿನಾಂಕ 31 ಡಿಸೆಂಬರ್ 2026 (ಈ ದಿನಾಂಕದ ನಂತರ ನೇಮಕಾತಿ ಪ್ರಕ್ರಿಯೆ ಮುಕ್ತಾಯವಾಗಲಿದೆ)

ಅಂಚೆ ಇಲಾಖೆ ನೇಮಕಾತಿ 2026: ಹುದ್ದೆಗಳ ವಿವರಗಳು

ಈ ಬಾರಿ India Post ಒಟ್ಟು 23,757 tentative vacanciesಗಳನ್ನು ಪ್ರಕಟಿಸಿದೆ. ಹುದ್ದೆಗಳನ್ನು ದೇಶದ ವಿವಿಧ Postal Circles ಮತ್ತು Divisionsಗಳಲ್ಲಿ ಹಂಚಿಕೆ ಮಾಡಲಾಗಿದೆ.

ಅಭ್ಯರ್ಥಿಗಳಿಗೆ ಅನುಕೂಲವಾಗುವಂತೆ Circle-wise ಒಟ್ಟು ಹುದ್ದೆಗಳ ವಿವರವನ್ನು ಕೆಳಗೆ ನೀಡಲಾಗಿದೆ:

ವೃತ್ತದ ಹೆಸರು ಒಟ್ಟು ಹುದ್ದೆಗಳು
ಕರ್ನಾಟಕ 1,116
ಆಂಧ್ರಪ್ರದೇಶ 917
ಅಸ್ಸಾಂ 414
ಬಿಹಾರ 1,098
ಛತ್ತೀಸ್‌ಗಢ 762
ದೆಹಲಿ 16
ಗುಜರಾತ್ 499
ಹರಿಯಾಣ 87
ಹಿಮಾಚಲ ಪ್ರದೇಶ 335
ಜಮ್ಮು ಮತ್ತು ಕಾಶ್ಮೀರ 340
ಜಾರ್ಖಂಡ್ 1,379
ಕೇರಳ 1,373
ಮಧ್ಯಪ್ರದೇಶ 1,450
ಮಹಾರಾಷ್ಟ್ರ 2,431
ಈಶಾನ್ಯ 2,614
ಒಡಿಶಾ 1,353
ಪಂಜಾಬ್ 122
ರಾಜಸ್ಥಾನ 1,009
ತಮಿಳುನಾಡು 2,118
ತೆಲಂಗಾಣ 419
ಉತ್ತರಾಖಂಡ 452
ಉತ್ತರ ಪ್ರದೇಶ 1,691
ಪಶ್ಚಿಮ ಬಂಗಾಳ 1,762
ಒಟ್ಟು 23,757

ವರ್ಗವಾರು GDS ಹುದ್ದೆಗಳ ವಿವರ

UR 10,640
OBC 4,433
SC 3,082
ST 2,773
EWS 2,160
PwD-A 192
PwD-B 227
PwD-C 178
PwD-DE 72

ಅಂಚೆ ಇಲಾಖೆ ನೇಮಕಾತಿ 2026 : ಅರ್ಹತಾ ಮಾನದಂಡಗಳು(Eligibility Criteria)

GDSನ ಎಲ್ಲಾ ಹುದ್ದೆಗಳಿಗೆ (BPM/ABPM/Dak Sevak) ಅರ್ಹತೆಯನ್ನು ಅಧಿಸೂಚನೆ ಪ್ರಕಟವಾದ ದಿನಾಂಕದಂದು ವಿದ್ಯಾರ್ಹತೆ ಹಾಗೂ ಆನ್‌ಲೈನ್ ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕದಂದು ವಯೋಮಿತಿ ಆಧರಿಸಿ ಪರಿಗಣಿಸಲಾಗುತ್ತದೆ.

  • ವಿದ್ಯಾರ್ಹತೆ (Educational Qualification)

ಮಾನ್ಯತೆ ಪಡೆದ ಬೋರ್ಡ್‌ನಿಂದ 10ನೇ ತರಗತಿ (SSLC / Secondary School Examination) ತೇರ್ಗಡೆಯಾಗಿರಬೇಕು. ಇದರಲ್ಲಿ ಗಣಿತ (Mathematics) ಮತ್ತು ಇಂಗ್ಲಿಷ್ (English) ವಿಷಯಗಳಲ್ಲಿ ಕಡ್ಡಾಯವಾಗಿ ಉತ್ತೀರ್ಣರಾಗಿರಬೇಕು

  • ಸ್ಥಳೀಯ ಭಾಷೆ (Local Language)

ಅಭ್ಯರ್ಥಿಯು ಅರ್ಜಿ ಸಲ್ಲಿಸುವ ರಾಜ್ಯದ ಸ್ಥಳೀಯ ಭಾಷೆಯನ್ನು 10ನೇ ತರಗತಿಯವರೆಗೆ ಒಂದು ವಿಷಯವಾಗಿ ಅಧ್ಯಯನ ಮಾಡಿರಬೇಕು. ಉದಾಹರಣೆಗೆ, ಕರ್ನಾಟಕದ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಕನ್ನಡ ಭಾಷೆಯನ್ನು 10ನೇ ತರಗತಿಯವರೆಗೆ ಓದಿರಬೇಕು.

  • ಇತರೆ ಅರ್ಹತೆಗಳು (Other Qualifications)

ಕಂಪ್ಯೂಟರ್‌ಗಳ ಜ್ಞಾನ; ಸೈಕ್ಲಿಂಗ್‌ನ ಜ್ಞಾನ; ಮತ್ತು ಜಿಡಿಎಸ್ ಭತ್ಯೆಗಳ ಜೊತೆಗೆ ಸಾಕಷ್ಟು ಜೀವನೋಪಾಯದ ಮಾರ್ಗಗಳು (ತೊಡಗಿಸಿಕೊಳ್ಳುವ ಸಮಯದಲ್ಲಿ ಅಂಡರ್‌ಟೇಕಿಂಗ್‌ಗಳಾಗಿ ಸಲ್ಲಿಸಬೇಕು)

ಅಂಚೆ ಇಲಾಖೆ ನೇಮಕಾತಿ 2026 :ವೇತನ ಶ್ರೇಣಿ (Salary Details)

GDS ಹುದ್ದೆಗಳು ನಿಯಮಿತ ಕೇಂದ್ರ ಸರ್ಕಾರಿ ನೌಕರರ ಹುದ್ದೆಗಳಲ್ಲ. ಇವರಿಗೆ Time Related Continuity Allowance (TRCA) ರೂಪದಲ್ಲಿ ವೇತನ ನೀಡಲಾಗುತ್ತದೆ. ಅರ್ಹತಾ ಷರತ್ತುಗಳನ್ನು ಪೂರೈಸಿದಲ್ಲಿ TRCA ಮೊತ್ತದ ಮೇಲೆ ವಾರ್ಷಿಕ ಶೇ.3ರಷ್ಟು ಹೆಚ್ಚಳ ದೊರೆಯುತ್ತದೆ.ಇದರ ಜೊತೆಗೆ, ಭಾರತ ಸರ್ಕಾರ ಕಾಲಕಾಲಕ್ಕೆ ಘೋಷಿಸುವ ತುಟ್ಟಿಭತ್ಯೆ (Dearness Allowance) ಕೂಡ TRCA ಮೇಲೆ ಅನ್ವಯಿಸುತ್ತದೆ. GDS ನೌಕರರಿಗೆ GDS Gratuity ಹಾಗೂ Service Discharge Benefit Scheme ಸೌಲಭ್ಯವೂ ದೊರೆಯುತ್ತದೆ.

ಬ್ರಾಂಚ್ ಪೋಸ್ಟ್‌ಮಾಸ್ಟರ್ (BPM) ₹12,000/- to ₹29,380/-
ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್‌ಮಾಸ್ಟರ್ (ABPM) / ಡಾಕ್ ಸೇವಕ್ ₹10,000/- to ₹24,470/-

ಅಂಚೆ ಇಲಾಖೆ ನೇಮಕಾತಿ 2026 ಅರ್ಜಿ ಶುಲ್ಕ(Application Fee)

ಅರ್ಜಿದಾರರು ತಮ್ಮ ಆಯ್ಕೆಯ ವಿಭಾಗದಲ್ಲಿ ಸೂಚಿಸಲಾದ ಎಲ್ಲಾ ಹುದ್ದೆಗಳಿಗೆ ₹100/- (ಒಂದು ನೂರು ರೂಪಾಯಿಗಳು ಮಾತ್ರ) ಶುಲ್ಕವನ್ನು ಪಾವತಿಸಬೇಕು. ಮಾನ್ಯತೆ ಪಡೆದ ಕ್ರೆಡಿಟ್/ಡೆಬಿಟ್ ಕಾರ್ಡ್‌ಗಳು, ನೆಟ್ ಬ್ಯಾಂಕಿಂಗ್ ಅಥವಾ UPI ಮೂಲಕ ಆನ್‌ಲೈನ್‌ನಲ್ಲಿ ಪಾವತಿ ಮಾಡಬಹುದು (ಅನ್ವಯವಾಗುವಂತೆ ಬಳಕೆಯ ಶುಲ್ಕವನ್ನು ವಿಧಿಸಲಾಗುತ್ತದೆ). ಒಮ್ಮೆ ಪಾವತಿಸಿದ ಶುಲ್ಕವನ್ನು ಮರುಪಾವತಿಸಲಾಗುವುದಿಲ್ಲ ಮತ್ತು ಅರ್ಜಿಯ ಅಂತಿಮ ದಿನಾಂಕ ಮತ್ತು ಸಮಯದೊಳಗೆ ಪಾವತಿಯನ್ನು ಕಟ್ಟುನಿಟ್ಟಾಗಿ ಪೂರ್ಣಗೊಳಿಸಬೇಕು.

  • ಸಾಮಾನ್ಯ (UR), OBC ಹಾಗೂ EWS (ಪುರುಷ) ಅಭ್ಯರ್ಥಿಗಳಿಗೆ: ₹ 100/-
  • ಎಲ್ಲಾ ಮಹಿಳಾ ಅಭ್ಯರ್ಥಿಗಳಿಗೆ, SC/ST, PwBD ಮತ್ತು ತೃತೀಯ ಲಿಂಗಿ (Transwomen) ಅಭ್ಯರ್ಥಿಗಳಿಗೆ: ಯಾವುದೇ ಅರ್ಜಿ ಶುಲ್ಕವಿಲ್ಲ

ವಯೋಮಿತಿ (Age Limit)

ಕನಿಷ್ಠ ವಯಸ್ಸು 18 ವರ್ಷಗಳು ಮತ್ತು ಗರಿಷ್ಠ ವಯಸ್ಸು 40 ವರ್ಷಗಳು, ಇದನ್ನು ಅರ್ಜಿಗಳನ್ನು ಸಲ್ಲಿಸುವ ಕೊನೆಯ ದಿನಾಂಕದಂದು ನಿರ್ಧರಿಸಲಾಗುತ್ತದೆ, ಗರಿಷ್ಠ ವಯೋಮಿತಿಯಲ್ಲಿ ಈ ಕೆಳಗಿನ ಸಡಿಲಿಕೆಗಳಿಗೆ ಒಳಪಟ್ಟಿರುತ್ತದೆ.

ವರ್ಗ ಅನುಮತಿಸಲಾದ ವಯೋಮಿತಿ ಸಡಿಲಿಕೆ
ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ (SC/ST) 5 ವರ್ಷ
ಇತರೆ ಹಿಂದುಳಿದ ವರ್ಗ (OBC) 3 ವರ್ಷ
ಆರ್ಥಿಕವಾಗಿ ದುರ್ಬಲ ವರ್ಗ (EWS) ಯಾವುದೇ ಸಡಿಲಿಕೆ ಇಲ್ಲ
ಮಾನದಂಡಿತ ಅಂಗವಿಕಲರು (PwBD 10 ವರ್ಷ
PwBD + OBC 13 ವರ್ಷ
PwBD + SC/ST 15 ವರ್ಷ

India Post GDS Recruitment 2026

ಆಯ್ಕೆ ಪ್ರಕ್ರಿಯೆ(Selection Process)

ಈ ನೇಮಕಾತಿಯಲ್ಲಿ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆ ಇರುವುದಿಲ್ಲ. ಅಭ್ಯರ್ಥಿಗಳ ಆಯ್ಕೆಯನ್ನು ಮುಖ್ಯವಾಗಿ 10ನೇ ತರಗತಿ ಅಂಕಗಳ ಆಧಾರದ ಮೇಲೆ ಮಾಡಲಾಗುತ್ತದೆ.
  1. ಮೆರಿಟ್ ಪಟ್ಟಿ: 10ನೇ ತರಗತಿಯಲ್ಲಿ ಅಭ್ಯರ್ಥಿಗಳು ಪಡೆದ ಅಂಕಗಳ ಆಧಾರದ ಮೇಲೆ ಸಿಸ್ಟಂ ಮೂಲಕ ಮೆರಿಟ್ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ.
  2. ದಾಖಲೆ ಪರಿಶೀಲನೆ: ಮೆರಿಟ್ ಪಟ್ಟಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ SMS ಅಥವಾ ಇ-ಮೇಲ್ ಮೂಲಕ ಮಾಹಿತಿ ನೀಡಲಾಗುತ್ತದೆ. ನಂತರ ಮೂಲ ದಾಖಲೆಗಳನ್ನು ಪರಿಶೀಲಿಸಲಾಗುತ್ತದೆ.
  3. ವೈದ್ಯಕೀಯ ಪರೀಕ್ಷೆ: ದಾಖಲೆ ಪರಿಶೀಲನೆ ಪೂರ್ಣಗೊಂಡ ಬಳಿಕ ಅಭ್ಯರ್ಥಿಗಳು ವೈದ್ಯಕೀಯ ಫಿಟ್‌ನೆಸ್ ಪ್ರಮಾಣಪತ್ರವನ್ನು ಸಲ್ಲಿಸಬೇಕು. ಇದಾದ ನಂತರ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.

ಅರ್ಜಿ ಸಲ್ಲಿಸುವ ವಿಧಾನ(How to Apply)

  1. GDS ಆನ್‌ಲೈನ್ ಎಂಗೇಜ್‌ಮೆಂಟ್ ಪೋರ್ಟಲ್‌ಗೆ ಭೇಟಿ ನೀಡಿ: https://indiapost.gov.in/gdsonlineengagement

  1. One-Time Registration (OTR) ಪೂರ್ಣಗೊಳಿಸಿ: ಮಾನ್ಯವಾದ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಐಡಿ ಬಳಸಿ OTR ಪೂರ್ಣಗೊಳಿಸಿ. OTP ಮೂಲಕ ಪರಿಶೀಲನೆ ನಡೆಸಿ, ವೈಯಕ್ತಿಕ ವಿವರಗಳು ಹಾಗೂ 10ನೇ ತರಗತಿಯ ಬೋರ್ಡ್ ಮತ್ತು ಉತ್ತೀರ್ಣರಾದ ವರ್ಷದ ಮಾಹಿತಿಯನ್ನು ನಮೂದಿಸಿ. ನಂತರ ವಿಶಿಷ್ಟ Registration Number ಪಡೆಯಿರಿ.
  2. ಲಾಗಿನ್ ಮಾಡಿ: SMS ಮೂಲಕ ಸ್ವೀಕರಿಸಿದ Registration Number ಮತ್ತು Password ಬಳಸಿ ಲಾಗಿನ್ ಮಾಡಿ. ನಂತರ “Active Notification” ವಿಭಾಗದಲ್ಲಿರುವ “Apply Online” ಆಯ್ಕೆಯನ್ನು ಕ್ಲಿಕ್ ಮಾಡಿ.
  3. ಅರ್ಜಿ ನಮೂನೆಯನ್ನು ಭರ್ತಿ ಮಾಡಿ: ವೈಯಕ್ತಿಕ ವಿವರಗಳು, ಬೋರ್ಡ್/ಶೈಕ್ಷಣಿಕ ವಿವರಗಳು (ವೃತ್ತ, ಬೋರ್ಡ್ ಹೆಸರು, ಉತ್ತೀರ್ಣರಾದ ವರ್ಷ, ಪಡೆದ ಅಂಕಗಳು) ನಮೂದಿಸಿ. ಅರ್ಹತೆಗೆ ಅನುಗುಣವಾಗಿ Division ಮತ್ತು ಹುದ್ದೆಗಳ ಆದ್ಯತೆಗಳನ್ನು ಆಯ್ಕೆ ಮಾಡಿ.
  4. ಫೋಟೋ ಮತ್ತು ಸಹಿಯನ್ನು ಅಪ್‌ಲೋಡ್ ಮಾಡಿ: ನಿಗದಿತ ನಿಯಮಗಳಂತೆ ಇತ್ತೀಚಿನ ಫೋಟೋ ಮತ್ತು ಸಹಿಯನ್ನು ಅಪ್‌ಲೋಡ್ ಮಾಡಿ.
  5. ಫೋಟೋ: JPG/JPEG, 30–100 KB, 320×400 px, 4:5 ಅನುಪಾತ ಸಹಿ: JPG/JPEG, 20–100 KB, 300×120 px, 5:2 ಅನುಪಾತ
  6. ಅರ್ಜಿಯನ್ನು ಪರಿಶೀಲಿಸಿ: ಅರ್ಜಿಯನ್ನು ಅಂತಿಮವಾಗಿ ಸಲ್ಲಿಸುವ ಮೊದಲು ಎಲ್ಲಾ ವಿವರಗಳನ್ನು ಪರಿಶೀಲಿಸಿ. ತಪ್ಪುಗಳಿದ್ದರೆ ತಿದ್ದುಪಡಿ ಮಾಡಿ.
  7. ಅರ್ಜಿ ಶುಲ್ಕ ಪಾವತಿಸಿ: ಶುಲ್ಕದಿಂದ ವಿನಾಯಿತಿ ಹೊಂದಿರದ ಅಭ್ಯರ್ಥಿಗಳು ಲಭ್ಯವಿರುವ ಆನ್‌ಲೈನ್ ಪಾವತಿ ವಿಧಾನಗಳ ಮೂಲಕ ಶುಲ್ಕ ಪಾವತಿಸಬೇಕು. ಪಾವತಿ ಪ್ರಕ್ರಿಯೆ ಆರಂಭಿಸಿದ ನಂತರ 10 ನಿಮಿಷಗಳೊಳಗೆ ಪಾವತಿಯನ್ನು ಪೂರ್ಣಗೊಳಿಸಬೇಕು.
  8. ಅರ್ಜಿಯನ್ನು ಸಲ್ಲಿಸಿ: ಕೊನೆಯ ದಿನಾಂಕದೊಳಗೆ ಅರ್ಜಿಯನ್ನು ಅಂತಿಮವಾಗಿ ಸಲ್ಲಿಸಿ. ಅಗತ್ಯವಿದ್ದರೆ 23–24 ಸೆಪ್ಟೆಂಬರ್ 2026ರಂದು ನೀಡಲಾಗಿರುವ Edit/Correction Window ಬಳಸಿಕೊಂಡು ಅರ್ಜಿಯಲ್ಲಿ ತಿದ್ದುಪಡಿ ಮಾಡಬಹುದು.

India Post GDS Recruitment 2026

ಪ್ರಮುಖ ಲಿಂಕ್‌ಗಳು(Important Links)

ಆನ್‌ಲೈನ್ ಅರ್ಜಿ ಸಲ್ಲಿಸಲು Click-Here
ಅಧಿಕೃತ ಅಧಿಸೂಚನೆ PDF Click-Here
ಅಧಿಕೃತ ವೆಬ್‌ಸೈಟ್ Click-Here

ಇದನ್ನು ಓದಿ:  

District Court Recruitment 2026

District Court Recruitment 2026: ರಾಮನಗರ ಜಿಲ್ಲಾ ನ್ಯಾಯಾಲಯದಲ್ಲಿ 55 ಹುದ್ದೆಗಳು – SSLC, PUC ಪಾಸಾದವರಿಗೆ ಸರ್ಕಾರಿ ಉದ್ಯೋಗ

11 thoughts on “India Post GDS Recruitment 2026: 10ನೇ ಪಾಸ್ ಅಭ್ಯರ್ಥಿಗಳಿಗೆ ಅಂಚೆ ಇಲಾಖೆಯಲ್ಲಿ 23,757 ಹುದ್ದೆಗಳಿಗೆ ಅರ್ಜಿ ಆಹ್ವಾನ”

Leave a Comment