AVNL Recruitment 2026
AVNL ನೇಮಕಾತಿ 2026: 1213 ಹುದ್ದೆಗಳ ಭರ್ತಿ, SSLC, ITI, Diploma, B.Tech, Degree ಅಭ್ಯರ್ಥಿಗಳಿಗೆ ಅವಕಾಶ
ಭಾರತದ ರಕ್ಷಣಾ ಕ್ಷೇತ್ರದಲ್ಲಿ ಉದ್ಯೋಗ ಪಡೆಯಲು ಬಯಸುತ್ತಿರುವ ಅಭ್ಯರ್ಥಿಗಳಿಗೆ ಒಂದು ಉತ್ತಮ ಅವಕಾಶ ಬಂದಿದೆ. ಕೇಂದ್ರ ರಕ್ಷಣಾ ಸಚಿವಾಲಯದ ಅಧೀನದಲ್ಲಿರುವ ಪ್ರತಿಷ್ಠಿತ Defence Public Sector Undertaking ಸಂಸ್ಥೆಯಾದ Armoured Vehicles Nigam Limited (AVNL) ಇದೀಗ 2026ನೇ ಸಾಲಿನ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ.
AVNL ವತಿಯಿಂದ ಒಟ್ಟು 1213 Fixed Term Employment ಹುದ್ದೆಗಳಿಗೆ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಇದರಲ್ಲಿ 1005 Junior Technician (Non-Executive) ಹುದ್ದೆಗಳು ಹಾಗೂ 208 Executive Cadre ಹುದ್ದೆಗಳು ಸೇರಿವೆ.
AVNL (Armoured Vehicles Nigam Limited – AVNL) ಭಾರತದ ರಕ್ಷಣಾ ಸಚಿವಾಲಯದ ಅಧೀನದಲ್ಲಿರುವ ಪ್ರಮುಖ ರಕ್ಷಣಾ ಸಾರ್ವಜನಿಕ ವಲಯದ (Defence PSU) ಸಂಸ್ಥೆಯಾಗಿದೆ. ಇದರ ಮುಖ್ಯ ಕಚೇರಿ ತಮಿಳುನಾಡಿನ ಚೆನ್ನೈ ಸಮೀಪದ ಅವಡಿಯಲ್ಲಿ ಇದೆ. ಸಂಸ್ಥೆಯು Heavy Vehicles Factory (HVF), Engine Factory Avadi (EFA), Vehicle Factory Jabalpur (VFJ), Ordnance Factory Medak (OFMK), Machine Tool Prototype Factory Ambernath (MTPF) ಸೇರಿದಂತೆ ಹಲವು ಉತ್ಪಾದನಾ ಘಟಕಗಳನ್ನು ದೇಶದ ವಿವಿಧ ಭಾಗಗಳಲ್ಲಿ ಹೊಂದಿದೆ.
ಈ ನೇಮಕಾತಿಗೆ ಸಂಬಂಧಿಸಿದ ಅಧಿಕೃತ ಅಧಿಸೂಚನೆ ಮತ್ತು ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಎವಿಎನ್‌ಎಲ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಪರಿಶೀಲಿಸಬಹುದು.
AVNL ನೇಮಕಾತಿ 2026: ಪ್ರಮುಖ ವಿವರಗಳು
| ವಿವರ |
ಮಾಹಿತಿ |
| ಸಂಸ್ಥೆಯ ಹೆಸರು |
ಆರ್ಮರ್ಡ್ ವೆಹಿಕಲ್ಸ್ ನಿಗಮ್ ಲಿಮಿಟೆಡ್(AVNL) |
| ಅಧಿಸೂಚನೆ ಸಂಖ್ಯೆ |
AVNL/CO/HR/2026/06 |
| ಉದ್ಯೋಗದ ಪ್ರಕಾರ |
ನಿಗದಿತ ಅವಧಿಯ ಉದ್ಯೋಗ (1 ವರ್ಷದ ಒಪ್ಪಂದ, ಗರಿಷ್ಠ 4 ವರ್ಷಗಳವರೆಗೆ ವಿಸ್ತರಣೆ ಸಾಧ್ಯ) |
| ಒಟ್ಟು ಹುದ್ದೆಗಳು |
1213 (1005 Non-Executive + 208 Executive) |
| ಅರ್ಜಿ ಸಲ್ಲಿಸುವ ವಿಧಾನ |
ಆನ್‌ಲೈನ್ ಮೂಲಕ ಮಾತ್ರ |
| ಅಧಿಕೃತ ವೆಬ್‌ಸೈಟ್ |
avnl.co.in |
ಪ್ರಮುಖ ದಿನಾಂಕಗಳು(Important Dates)
| ಆನ್‌ಲೈನ್ ಅರ್ಜಿ ಆರಂಭ |
11 ಜುಲೈ 2026, ಬೆಳಿಗ್ಗೆ 10:00 ಗಂಟೆಯಿಂದ |
| ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ |
25 ಜುಲೈ 2026, ರಾತ್ರಿ 11:55 ಗಂಟೆಯವರೆಗೆ |
AVNL ನೇಮಕಾತಿ 2026 ಹುದ್ದೆಗಳ ವಿವರ (Vacancy Details)
ಕಾರ್ಯನಿರ್ವಾಹಕೇತರ – ಜೂನಿಯರ್ ಟೆಕ್ನಿಷಿಯನ್ ಹುದ್ದೆಗಳು
1005 ಜೂನಿಯರ್ ಟೆಕ್ನಿಷಿಯನ್ ಹುದ್ದೆಗಳು ನಾಲ್ಕು ಘಟಕಗಳಲ್ಲಿ ಹರಡಿಕೊಂಡಿವೆ, ಖಾಲಿ ಹುದ್ದೆಗಳನ್ನು ವರ್ಗವಾರು ಈ ಕೆಳಗಿನಂತೆ ವಿಂಗಡಿಸಲಾಗಿದೆ:
| ಹುದ್ದೆ ಸಂಖ್ಯೆ |
ಹುದ್ದೆಯ ಹೆಸರು |
ಒಟ್ಟು ಹುದ್ದೆಗಳು |
| 1 |
ಜೂನಿಯರ್ ಟೆಕ್ನಿಷಿಯನ್ (Electrician) |
84 |
| 2 |
ಜೂನಿಯರ್ ಟೆಕ್ನಿಷಿಯನ್ (Electronic Mechanic) |
69 |
| 3 |
ಜೂನಿಯರ್ ಟೆಕ್ನಿಷಿಯನ್ (Electroplater) |
4 |
| 4 |
ಜೂನಿಯರ್ ಟೆಕ್ನಿಷಿಯನ್ [Fitter (General)] |
400 |
| 5 |
ಜೂನಿಯರ್ ಟೆಕ್ನಿಷಿಯನ್ (Foundrymen) |
31 |
| 6 |
ಜೂನಿಯರ್ ಟೆಕ್ನಿಷಿಯನ್ (Forger & Heat Treater) |
2 |
| 7 |
ಜೂನಿಯರ್ ಟೆಕ್ನಿಷಿಯನ್ (Machinist) |
216 |
| 8 |
ಜೂನಿಯರ್ ಟೆಕ್ನಿಷಿಯನ್ (Mechanic Machine Tool Maintenance) |
23 |
| 9 |
ಜೂನಿಯರ್ ಟೆಕ್ನಿಷಿಯನ್ (OMHE – Raw Material Handling Plant) |
66 |
| 10 |
ಜೂನಿಯರ್ ಟೆಕ್ನಿಷಿಯನ್ [Painter (General)] |
10 |
| 11 |
ಜೂನಿಯರ್ ಟೆಕ್ನಿಷಿಯನ್ (Quality Assurance Assistant) |
44 |
| 12 |
ಜೂನಿಯರ್ ಟೆಕ್ನಿಷಿಯನ್ (Rigger) |
1 |
| 13 |
ಜೂನಿಯರ್ ಟೆಕ್ನಿಷಿಯನ್ (Welder) |
55 |
| ಒಟ್ಟು |
1005 |
ಸೂಚನೆ: ಮೇಲಿನ ಹುದ್ದೆಗಳು HVF, OFMK, EFA ಹಾಗೂ MTPF ಘಟಕಗಳಲ್ಲಿ ಭರ್ತಿ ಮಾಡಲಾಗುತ್ತಿವೆ. ಘಟಕವಾರು ಹಾಗೂ ವರ್ಗವಾರು (UR, SC, ST, OBC-NCL ಮತ್ತು EWS) ಹುದ್ದೆಗಳ ಸಂಪೂರ್ಣ ವಿವರಕ್ಕಾಗಿ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಿ
ಕಾರ್ಯನಿರ್ವಾಹಕ (Executive)ಹುದ್ದೆಗಳು
| ಹುದ್ದೆ ಸಂಖ್ಯೆ |
ಹುದ್ದೆಯ ಹೆಸರು |
ಒಟ್ಟು ಹುದ್ದೆಗಳು |
| 14 |
ಕಿರಿಯ ವ್ಯವಸ್ಥಾಪಕ (Junior Manager – Electrical) |
18 |
| 15 |
ಕಿರಿಯ ವ್ಯವಸ್ಥಾಪಕ (Junior Manager – Electronics) |
30 |
| 16 |
ಕಿರಿಯ ವ್ಯವಸ್ಥಾಪಕ (Junior Manager – Human Resources) |
8 |
| 17 |
ಕಿರಿಯ ವ್ಯವಸ್ಥಾಪಕ (Junior Manager – Mechanical) |
92 |
| 18 |
ಕಿರಿಯ ವ್ಯವಸ್ಥಾಪಕ (Junior Manager – Metallurgy) |
8 |
| 19 |
ಕಿರಿಯ ವ್ಯವಸ್ಥಾಪಕ (Junior Manager – Official Language) |
4 |
| 20 |
ಕಿರಿಯ ವ್ಯವಸ್ಥಾಪಕ (Junior Manager – Artificial Intelligence) |
3 |
| 21 |
ಕಿರಿಯ ವ್ಯವಸ್ಥಾಪಕ (Junior Manager – Finance & Accounts) |
2 |
| 22 |
ಸಹಾಯಕ ವ್ಯವಸ್ಥಾಪಕ (Assistant Manager – Finance) |
2 |
| 23 |
ಸಹಾಯಕ ವ್ಯವಸ್ಥಾಪಕ (Assistant Manager – Civil) |
1 |
| 24 |
ಸಹಾಯಕ ವ್ಯವಸ್ಥಾಪಕ (Assistant Manager – Company Secretary) |
1 |
| 25 |
ಉಪ ವ್ಯವಸ್ಥಾಪಕ (Deputy Manager – Mechanical) |
13 |
| 26 |
ಉಪ ವ್ಯವಸ್ಥಾಪಕ (Deputy Manager – Electrical) |
2 |
| 27 |
ಉಪ ವ್ಯವಸ್ಥಾಪಕ (Deputy Manager – Electronics) |
6 |
| 28 |
ಉಪ ವ್ಯವಸ್ಥಾಪಕ (Deputy Manager – Information Technology) |
3 |
| 29 |
ಉಪ ವ್ಯವಸ್ಥಾಪಕ (Deputy Manager – Marketing) |
7 |
| 30 |
ಉಪ ವ್ಯವಸ್ಥಾಪಕ (Deputy Manager – Public Relations & Corporate Communication) |
1 |
| 31 |
ಉಪ ವ್ಯವಸ್ಥಾಪಕ (Deputy Manager – Artificial Intelligence) |
1 |
| 32 |
ಸಲಹೆಗಾರ (Consultant – Finance & Audit) |
1 |
| 33 |
ಹೆಚ್ಚುವರಿ ಮಹಾ ವ್ಯವಸ್ಥಾಪಕ (Additional General Manager – Business Development) |
2 |
| 34 |
ಉಪ ಮಹಾ ವ್ಯವಸ್ಥಾಪಕ (Deputy General Manager – Company Secretary) |
1 |
| 35 |
ಹಿರಿಯ ವ್ಯವಸ್ಥಾಪಕ (Senior Manager – Cyber Security) |
1 |
| 36 |
ಹಿರಿಯ ವ್ಯವಸ್ಥಾಪಕ (Senior Manager – Intellectual Property) |
1 |
| ಒಟ್ಟು |
208 |
ಸೂಚನೆ: ಮೇಲಿನ ಕಾರ್ಯನಿರ್ವಾಹಕ ಹುದ್ದೆಗಳು HVF, D2C-HVF, D2C-OFMK, AVNLCO, VFJ, IOLAV ಹಾಗೂ IOLAM ಘಟಕಗಳಲ್ಲಿ ಭರ್ತಿ ಮಾಡಲಾಗುತ್ತಿವೆ. ಘಟಕವಾರು ಹಾಗೂ ವರ್ಗವಾರು (UR, SC, ST, OBC-NCL ಮತ್ತು EWS) ಹುದ್ದೆಗಳ ಸಂಪೂರ್ಣ ವಿವರಕ್ಕಾಗಿ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಿ.
ಇದನ್ನು ಓದಿ: ISRO ISTRAC Recruitment 2026: SSLC, ITI, ಡಿಪ್ಲೊಮಾ, ಪದವಿ ಪಾಸ್ ಅಭ್ಯರ್ಥಿಗಳಿಗೆ 26 ಹುದ್ದೆಗಳ ಉದ್ಯೋಗ ಅವಕಾಶ
AVNL ನೇಮಕಾತಿ 2026: PwBD ಅಭ್ಯರ್ಥಿಗಳಿಗೆ ಲಭ್ಯವಿರುವ ಹುದ್ದೆಗಳು
PwBD (Benchmark Disabilities) ಅಭ್ಯರ್ಥಿಗಳಿಗೂ AVNL ನೇಮಕಾತಿ 2026ರಲ್ಲಿ ಅವಕಾಶ ಕಲ್ಪಿಸಲಾಗಿದೆ. ಜೂನಿಯರ್ ಟೆಕ್ನಿಷಿಯನ್ (Electrician, Electronic Mechanic, Fitter General, Machinist, Mechanic Machine Tool Maintenance, Quality Assurance Assistant, Welder) ಹಾಗೂ Junior Manager (Electronics, Human Resources, Mechanical) ಸೇರಿದಂತೆ ಹಲವು ಹುದ್ದೆಗಳು PwBD ಅಭ್ಯರ್ಥಿಗಳಿಗೆ ಸೂಕ್ತವೆಂದು ಗುರುತಿಸಲಾಗಿದೆ. ಅರ್ಹ ಅಂಗವೈಕಲ್ಯ ವರ್ಗಗಳ ಸಂಪೂರ್ಣ ವಿವರಕ್ಕಾಗಿ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಿ.
ಅರ್ಹತಾ ಮಾನದಂಡಗಳು(Eligibility Criteria)
ಜೂನಿಯರ್ ಟೆಕ್ನಿಷಿಯನ್ ಟ್ರೇಡ್‌ಗಳು (ಹುದ್ದೆ ಸಂಖ್ಯೆ 01–13)
ಜೂನಿಯರ್ ಟೆಕ್ನಿಷಿಯನ್ (ಹುದ್ದೆ ಸಂಖ್ಯೆ 01–13): ಸಂಬಂಧಿತ ಟ್ರೇಡ್‌ನಲ್ಲಿ NCVT ಮಾನ್ಯತೆ ಪಡೆದ NTC (National Trade Certificate) ಅಥವಾ NAC (National Apprenticeship Certificate) ಹೊಂದಿರಬೇಕು. ಈ ಅರ್ಹತೆ Electrician, Electronic Mechanic, Electroplater, Fitter (General), Forger & Heat Treater, Foundrymen, Machinist, Mechanic Machine Tool Maintenance, OMHE (Raw Material Handling Plant), Painter (General), Quality Assurance Assistant, Rigger ಹಾಗೂ Welder ಸೇರಿದಂತೆ ಎಲ್ಲಾ 13 ಟ್ರೇಡ್‌ಗಳಿಗೆ ಅನ್ವಯಿಸುತ್ತದೆ.
ಕಾರ್ಯನಿರ್ವಾಹಕ (Executive) ಹುದ್ದೆಗಳು (ಹುದ್ದೆ ಸಂಖ್ಯೆ 14–36)
- ಕಿರಿಯ ವ್ಯವಸ್ಥಾಪಕ (Junior Manager – Mechanical) – ಮೆಕ್ಯಾನಿಕಲ್ ಎಂಜಿನಿಯರಿಂಗ್ ಅಥವಾ ತತ್ಸಮಾನ ವಿಭಾಗದಲ್ಲಿ B.E./B.Tech ಪದವಿ ಕಡ್ಡಾಯ.
- ಕಿರಿಯ ವ್ಯವಸ್ಥಾಪಕ (Electronics) – ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ಅಥವಾ ತತ್ಸಮಾನ ವಿಭಾಗದಲ್ಲಿ B.E./B.Tech ಪದವಿ ಕಡ್ಡಾಯ.
- ಕಿರಿಯ ವ್ಯವಸ್ಥಾಪಕ (Electrical) – Electrical Engineering ಅಥವಾ ತತ್ಸಮಾನ ವಿಭಾಗದಲ್ಲಿ B.E./B.Tech
- ಕಿರಿಯ ವ್ಯವಸ್ಥಾಪಕ (Metallurgy) – Metallurgy Engineering ಅಥವಾ ತತ್ಸಮಾನ ವಿಭಾಗದಲ್ಲಿ B.E./B.Tech
- ಕಿರಿಯ ವ್ಯವಸ್ಥಾಪಕ (Human Resources) – ಯಾವುದೇ ವಿಷಯದಲ್ಲಿ ಪದವಿ + MBA (HR) ಅಥವಾ HR/Personnel Management/Industrial Relations ವಿಷಯಗಳಲ್ಲಿ PG Diploma/PG Degree
- ಕಿರಿಯ ವ್ಯವಸ್ಥಾಪಕ (Official Language) – ಪದವಿ + ಹಿಂದಿ/ಹಿಂದಿ ಅನುವಾದದಲ್ಲಿ ಡಿಪ್ಲೊಮಾ ಅಥವಾ M.A. (Hindi/Hindi Translation)
- ಕಿರಿಯ ವ್ಯವಸ್ಥಾಪಕ (Artificial Intelligence) – Computer Science/IT/AI & ML/Electronics & Communication ವಿಭಾಗದಲ್ಲಿ B.E./B.Tech
- ಕಿರಿಯ ವ್ಯವಸ್ಥಾಪಕ (Finance & Accounts) – Commerce ಅಥವಾ Economics ವಿಷಯದಲ್ಲಿ ಪದವಿ
- ಸಹಾಯಕ ವ್ಯವಸ್ಥಾಪಕ (Civil) – Civil Engineering ಅಥವಾ ತತ್ಸಮಾನ ವಿಭಾಗದಲ್ಲಿ B.E./B.Tech
- ಸಹಾಯಕ ವ್ಯವಸ್ಥಾಪಕ (Finance) – ಯಾವುದೇ ವಿಷಯದಲ್ಲಿ ಪದವಿ + MBA (Finance) ಅಥವಾ Finance & Accounts ನಲ್ಲಿ PG Diploma/PG Degree
- ಸಹಾಯಕ ವ್ಯವಸ್ಥಾಪಕ (Company Secretary) – ಯಾವುದೇ ವಿಷಯದಲ್ಲಿ ಪದವಿ + Company Secretary (ICSI) ಅರ್ಹತೆ
- ಉಪ ವ್ಯವಸ್ಥಾಪಕ (Information Technology) – Computer Science/IT/Software Engineering ಅಥವಾ ಸಂಬಂಧಿತ ವಿಭಾಗದಲ್ಲಿ B.E./B.Tech
- ಉಪ ವ್ಯವಸ್ಥಾಪಕ (Public Relations & Corporate Communications) – Journalism & Mass Communication ನಲ್ಲಿ ಸ್ನಾತಕೋತ್ತರ ಪದವಿ
- ಉಪ ವ್ಯವಸ್ಥಾಪಕ (Marketing) – ಯಾವುದೇ ವಿಷಯದಲ್ಲಿ ಪದವಿ + MBA (Marketing Management)
- ಉಪ ವ್ಯವಸ್ಥಾಪಕ (Mechanical) – Mechanical Engineering ಅಥವಾ ತತ್ಸಮಾನ ವಿಭಾಗದಲ್ಲಿ B.E./B.Tech
- ಉಪ ವ್ಯವಸ್ಥಾಪಕ (Electrical) – Electrical Engineering ಅಥವಾ ತತ್ಸಮಾನ ವಿಭಾಗದಲ್ಲಿ B.E./B.Tech
- ಉಪ ವ್ಯವಸ್ಥಾಪಕ (Electronics) – Electronics Engineering ಅಥವಾ ತತ್ಸಮಾನ ವಿಭಾಗದಲ್ಲಿ B.E./B.Tech
- ಉಪ ವ್ಯವಸ್ಥಾಪಕ (Artificial Intelligence) – Computer Science/IT/AI & ML/Electronics & Communication ವಿಭಾಗದಲ್ಲಿ B.E./B.Tech
- ಸಲಹೆಗಾರ (Finance & Audit) – Chartered Accountant (CA) ಹಾಗೂ 10 ವರ್ಷಗಳ ಅನುಭವ
- ಹೆಚ್ಚುವರಿ ಮಹಾ ವ್ಯವಸ್ಥಾಪಕ (Business Development) – ಭಾರತೀಯ ಸೇನೆಯ ನಿವೃತ್ತ Colonel ಅಥವಾ ಸಮಾನ ಹುದ್ದೆಯ ಅಧಿಕಾರಿ, 15 ವರ್ಷಗಳ ಅನುಭವ
- ಉಪ ಮಹಾ ವ್ಯವಸ್ಥಾಪಕ (Company Secretary) – ಪದವಿ + Company Secretary (ICSI) ಅರ್ಹತೆ ಹಾಗೂ 9 ವರ್ಷಗಳ ಅನುಭವ
- ಹಿರಿಯ ವ್ಯವಸ್ಥಾಪಕ (Cyber Security) – Cyber Security/Computer Science/IT ನಲ್ಲಿ B.E./B.Tech ಅಥವಾ MCA, ಸಂಬಂಧಿತ ಅನುಭವ
- ಹಿರಿಯ ವ್ಯವಸ್ಥಾಪಕ (Intellectual Property) – Science/Engineering/Technology ಪದವಿ ಹಾಗೂ Patent Agent ಅರ್ಹತೆಯೊಂದಿಗೆ 6 ವರ್ಷಗಳ ಅನುಭವ
AVNL ಮಾನ್ಯತೆ ಪಡೆದ ಸಮಾನ ಎಂಜಿನಿಯರಿಂಗ್ ವಿಭಾಗಗಳು
| ಸಂಬಂಧಿತ ವಿಭಾಗ |
ಸಮಾನವೆಂದು ಪರಿಗಣಿಸಲಾದ ವಿಭಾಗಗಳು |
| ಎಲೆಕ್ಟ್ರಾನಿಕ್ಸ್ (Electronics) |
ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಎಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್ ಮತ್ತು ಇನ್‌ಸ್ಟ್ರುಮೆಂಟೇಶನ್ ಎಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್ ಡಿಸೈನ್ ಮತ್ತು ಟೆಕ್ನಾಲಜಿ ಎಂಜಿನಿಯರಿಂಗ್, ಅಪ್ಲೈಡ್ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಮ್ಯುನಿಕೇಶನ್ ಎಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್ ಮತ್ತು ಕಂಟ್ರೋಲ್ ಎಂಜಿನಿಯರಿಂಗ್ |
| ಎಲೆಕ್ಟ್ರಾನಿಕ್ಸ್ (Electronics) |
ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಎಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್ ಮತ್ತು ಇನ್‌ಸ್ಟ್ರುಮೆಂಟೇಶನ್ ಎಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್ ಡಿಸೈನ್ ಮತ್ತು ಟೆಕ್ನಾಲಜಿ ಎಂಜಿನಿಯರಿಂಗ್, ಅಪ್ಲೈಡ್ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಮ್ಯುನಿಕೇಶನ್ ಎಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್ ಮತ್ತು ಕಂಟ್ರೋಲ್ ಎಂಜಿನಿಯರಿಂಗ್ |
| ಎಲೆಕ್ಟ್ರಿಕಲ್(Electrical) |
ಎಲೆಕ್ಟ್ರಿಕಲ್ ಎಂಜಿನಿಯರಿಂಗ್, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ |
| ಕಂಪ್ಯೂಟರ್ ಸೈನ್ಸ್ (Computer Science) |
ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್, ಮಾಹಿತಿ ತಂತ್ರಜ್ಞಾನ ಎಂಜಿನಿಯರಿಂಗ್ |
ವಯೋಮಿತಿ (Age Limit)
ಆನ್‌ಲೈನ್ ನೋಂದಣಿಯ ಕೊನೆಯ ದಿನಾಂಕ (ಜುಲೈ 25, 2026) ರಂದು ವಯಸ್ಸನ್ನು ಲೆಕ್ಕಹಾಕಲಾಗುತ್ತದೆ.
- ಜೂನಿಯರ್ ಟೆಕ್ನಿಷಿಯನ್, ಕಿರಿಯ ವ್ಯವಸ್ಥಾಪಕ ಸಹಾಯಕ ವ್ಯವಸ್ಥಾಪಕ , ಉಪ ವ್ಯವಸ್ಥಾಪಕ – ಗರಿಷ್ಠ 30 ವರ್ಷ (ವಯೋಮಿತಿ ಸಡಿಲಿಕೆ ಸೇರಿದಂತೆ ಗರಿಷ್ಠ 55 ವರ್ಷಗಳವರೆಗೆ)
- ಹಿರಿಯ ವ್ಯವಸ್ಥಾಪಕ , ಉಪ ಮಹಾ ವ್ಯವಸ್ಥಾಪಕ , ಹೆಚ್ಚುವರಿ ಮಹಾ ವ್ಯವಸ್ಥಾಪಕ , ಸಲಹೆಗಾರ – 65 ವರ್ಷಕ್ಕಿಂತ ಕಡಿಮೆ (ವಯೋಮಿತಿ ಸಡಿಲಿಕೆ ಸೇರಿದಂತೆ)
ವಯೋಮಿತಿ ಸಡಿಲಿಕೆ: SC/ST ಅಭ್ಯರ್ಥಿಗಳಿಗೆ 5 ವರ್ಷಗಳು, OBC-NCL ಅಭ್ಯರ್ಥಿಗಳಿಗೆ 3 ವರ್ಷಗಳು, PwBD ಅಭ್ಯರ್ಥಿಗಳಿಗೆ 10 ವರ್ಷಗಳು. ಮಾಜಿ ಸೈನಿಕರಿಗೆ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ವಯಸ್ಸಿನ ಸಡಿಲಿಕೆ ಇದೆ. AVNL ನ ಮಾಜಿ ಟ್ರೇಡ್ ಅಪ್ರೆಂಟಿಸ್‌ಗೆ ಗರಿಷ್ಠ ವಯೋಮಿತಿಯಲ್ಲಿ ಅಪ್ರೆಂಟಿಸ್‌ಶಿಪ್ ಕಾಯ್ದೆಯಡಿಯಲ್ಲಿ ಪಡೆದ ಅಪ್ರೆಂಟಿಸ್‌ಶಿಪ್ ತರಬೇತಿಯ ಅವಧಿಯಿಂದ ಸಡಿಲಿಕೆ ನೀಡಲಾಗುತ್ತದೆ.
ವೇತನ ವಿವರ (Salary Details)