Telegram Join My Telegram WhatsApp Join My WhatsApp

BSNL Recruitment 2026: B.E, B.Tech ಪಾಸಾದವರಿಗೆ ಕೇಂದ್ರ ಸರ್ಕಾರದ ದೊಡ್ಡ ಉದ್ಯೋಗಾವಕಾಶ!

BSNL Recruitment 2026

BSNL JTO Recruitment 2026: Engineering ವಿದ್ಯಾರ್ಥಿಗಳಿಗೆ ಸರ್ಕಾರಿ ಉದ್ಯೋಗ ಸುವರ್ಣಾವಕಾಶ

ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿರುವ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಇದೀಗ ಭರ್ಜರಿ ಸಿಹಿಸುದ್ದಿ ಬಂದಿದೆ. ಭಾರತ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುವ ಭಾರತ ಸಂಚಾರ ನಿಗಮ ಲಿಮಿಟೆಡ್ ಅಂದರೆ BSNL ಇದೀಗ Junior Telecom Officer (JTO) ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದೆ. ದೇಶದ ವಿವಿಧ ರಾಜ್ಯಗಳಲ್ಲಿ ಒಟ್ಟು 100 ಹುದ್ದೆಗಳನ್ನು ಭರ್ತಿ ಮಾಡಲು BSNL ಮುಂದಾಗಿದೆ.

B.Tech, B.E ಹಾಗೂ M.Sc ಮಾಡಿದ ಅಭ್ಯರ್ಥಿಗಳು ಈ ನೇಮಕಾತಿಗೆ ಅರ್ಜಿ ಸಲ್ಲಿಸಬಹುದಾಗಿದೆ. ವಿಶೇಷವಾಗಿ ಟೆಲಿಕಾಂ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್ ಹಾಗೂ ಐಟಿ ವಿಭಾಗದ ವಿದ್ಯಾರ್ಥಿಗಳಿಗೆ ಇದು ದೊಡ್ಡ ಅವಕಾಶ ಎಂದು ಹೇಳಬಹುದು. ಆನ್‌ಲೈನ್ ಅರ್ಜಿ ಪ್ರಕ್ರಿಯೆ ಜೂನ್ 4, 2026 ರಿಂದ ಆರಂಭವಾಗಲಿದ್ದು, ಜುಲೈ 3, 2026 ಕೊನೆಯ ದಿನಾಂಕವಾಗಿರುತ್ತದೆ.BSNL ವೆಬ್‌ಸೈಟ್, bsnl.co.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು.BSNL Junior Telecom Officer ನೇಮಕಾತಿ 2026 ಸಂಬಂಧಿಸಿದ ಅಧಿಕೃತ ಅಧಿಸೂಚನೆ (Official Notification PDF) ಅನ್ನು ಅಲ್ಲಿ ಡೌನ್‌ಲೋಡ್ ಮಾಡಬಹುದು.

BSNL ನೇಮಕಾತಿ 2026 ಅಧಿಕೃತ ನೋಟಿಫಿಕೇಶನ್ PDF ಇಲ್ಲಿ ಡೌನ್‌ಲೋಡ್ ಮಾಡಿ

BSNL Recruitment 2026 ಮುಖ್ಯ ಮಾಹಿತಿ

ವಿವರ ಮಾಹಿತಿ
ಸಂಸ್ಥೆ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್(BSNL)
ಹುದ್ದೆ ಹೆಸರು ಜೂನಿಯರ್ ಟೆಲಿಕಾಂ ಅಧಿಕಾರಿ(JTO)
ಒಟ್ಟು ಹುದ್ದೆಗಳು 100
ಅರ್ಜಿ ವಿಧಾನ Online
ಪರೀಕ್ಷೆ CBT Exam
ಕೆಲಸದ ಸ್ಥಳ ಭಾರತದೆಲ್ಲೆಡೆ
ಅಧಿಕೃತ ವೆಬ್ಸೈಟ್ bsnl.co.in

BSNL Recruitment 2026

BSNL Recruitment 2026 – ಪ್ರಮುಖ ದಿನಾಂಕಗಳು

ಅಧಿಸೂಚನೆ ಪ್ರಕಟ ದಿನಾಂಕ 26 ಮೇ 2026
ಆನ್‌ಲೈನ್ ನೋಂದಣಿ ಆರಂಭ 04 ಜೂನ್ 2026 (ಬೆಳಗ್ಗೆ 10:00 AM)
ಆನ್‌ಲೈನ್ ನೋಂದಣಿ ಕೊನೆಯ ದಿನಾಂಕ 03 ಜುಲೈ 2026 (ಬೆಳಗ್ಗೆ 10:00 AM)
ಅರ್ಜಿ ತಿದ್ದುಪಡಿ ಆರಂಭ 04 ಜುಲೈ 2026 (ಬೆಳಗ್ಗೆ 10:00 AM)
ಅರ್ಜಿ ತಿದ್ದುಪಡಿ ಕೊನೆಯ ದಿನಾಂಕ 11 ಜುಲೈ 2026 (ಬೆಳಗ್ಗೆ 10:00 AM)
CBT ಪರೀಕ್ಷೆ ದಿನಾಂಕ ಆಗಸ್ಟ್ 2026 (ತಾತ್ಕಾಲಿಕವಾಗಿ)

BSNL JTO ಹುದ್ದೆ ಎಂದರೇನು?

ಬಹಳ ಜನರಿಗೆ JTO ಹುದ್ದೆಯ ಬಗ್ಗೆ ಸಂಪೂರ್ಣ ಮಾಹಿತಿ ಇರುವುದಿಲ್ಲ. Junior Telecom Officer ಅಂದರೆ ಟೆಲಿಕಾಂ ಸೇವೆಗಳನ್ನು ನಿರ್ವಹಿಸುವ ತಾಂತ್ರಿಕ ಹುದ್ದೆ. BSNL ಕಂಪನಿಯ ನೆಟ್‌ವರ್ಕ್, ಇಂಟರ್ನೆಟ್, ಕಮ್ಯುನಿಕೇಶನ್ ವ್ಯವಸ್ಥೆ, ತಾಂತ್ರಿಕ ನಿರ್ವಹಣೆ ಹಾಗೂ ಇತರೆ ಟೆಲಿಕಾಂ ಸೇವೆಗಳನ್ನು ನೋಡಿಕೊಳ್ಳುವ ಜವಾಬ್ದಾರಿ ಇವರ ಮೇಲಿದೆ.

ರಾಜ್ಯವಾರು ಹುದ್ದೆಗಳ ವಿತರಣೆ (State-wise Vacancy Details)

ಭಾರತ್ ಸಂಚಾರ್ ನಿಗಮ್ ಲಿಮಿಟೆಡ್‌ನ ಅಡ್ವಟ್ ಸಂಖ್ಯೆ BSNLCO-11/12(11)/1/2026-RECTT-CO ಅಡಿಯಲ್ಲಿ ಒಟ್ಟು 100 ಹುದ್ದೆಗಳನ್ನು ವಿವಿಧ ವಲಯಗಳಲ್ಲಿ ಪ್ರಕಟಿಸಲಾಗಿದೆ. ಅಭ್ಯರ್ಥಿಗಳು BSNL JTO 2026 ಹುದ್ದೆಗಳ ವಿವರಗಳಿಗಾಗಿ ಕೆಳಗಿನ ಪಟ್ಟಿಯನ್ನು ಉಲ್ಲೇಖಿಸಬಹುದು.

ಕ್ರಮ ಸಂಖ್ಯೆ ರಾಜ್ಯ ಒಟ್ಟು SC/ST OBC (NCL) EWS UR / OBC (CL) PwBD (Hearing) PwBD (Locomotor)
1 ಅಂಡಮಾನ್ & ನಿಕೋಬಾರ್ 0 0 0 0 1 0 0
2  ಆಂಧ್ರ ಪ್ರದೇಶ 1 0 0 0 1 1 0
3 ಅಸ್ಸಾಂ 2 1 0 0 1 0 0
4 ಕೊಲ್ಕತ್ತಾ TD 2 1 0 0 1 0 0
5 ಚೆನ್ನೈ TD 5 1 0 1 3 0 0
6 ಛತ್ತೀಸ್‌ಗಢ 1 0 0 0 1 0 0
7 ಗುಜರಾತ್ 3 2 0 0 1 1 0
8 ಹರಿಯಾಣ 1 0 1 0 0 0 0
9 ಜಮ್ಮು & ಕಾಶ್ಮೀರ 1 0 0 0 1 0 0
10 ಕರ್ನಾಟಕ 26 0 1 0 23 0 0
11 ಕೇರಳ 15 4 3 2 6 0 0
12 ಮಧ್ಯಪ್ರದೇಶ 10 1 2 1 6 0 1
13 ಮಹಾರಾಷ್ಟ್ರ 16 2 1 2 7 1 0
14 ಉತ್ತರ ಪೂರ್ವ-II (NE-II) 3 0 1 0 2 0 0
15 ಒಡಿಶಾ 6 0 1 4 1 0 0
16 ರಾಜಸ್ಥಾನ 1 0 0 0 1 0 0
17 ಸಿಕ್ಕಿಂ 1 0 0 0 1 0 0
18 ತಮಿಳುನಾಡು 1 0 0 0 1 0 0
19 ತೆಲಂಗಾಣ 2 0 0 1 1 0 0
20 ಉತ್ತರಾಖಂಡ 1 0 0 0 1 0 1
21 ಪಶ್ಚಿಮ ಉತ್ತರ ಪ್ರದೇಶ 1 0 0 0 1 0 0
ಒಟ್ಟು 100 12 6 10 61 3 2

ಹುದ್ದೆಗಳು ಮತ್ತು ವೇತನದ ಮುಖ್ಯಾಂಶಗಳು(Vacancy and Salary Highlights)

  • ಹುದ್ದೆಯ ಹೆಸರು – ಜೂನಿಯರ್ ಟೆಲಿಕಾಂ ಆಫೀಸರ್ – ನೇರ ನೇಮಕಾತಿ (ಟೆಲಿಕಾಂ) [JTO(T)-DR]
  • ಒಟ್ಟು ಹುದ್ದೆಗಳು – 100
  • ವೇತನ ಶ್ರೇಣಿ  – IDA ವೇತನ ಶ್ರೇಣಿ [E-1] ₹16,400 – ₹40,500/- (2ನೇ PRC ವೇತನ ಶ್ರೇಣಿ w.e.f. 01.01.2007)
  • ಪ್ರೊಬೇಷನ್ ಅವಧಿ  – 2 ವರ್ಷಗಳು
  • ಬಾಂಡ್ – ನೇಮಕಾತಿ ದಿನಾಂಕದಿಂದ ಕನಿಷ್ಠ 5 ವರ್ಷ BSNL ನಲ್ಲಿ ಸೇವೆ ಸಲ್ಲಿಸಲು ₹6 ಲಕ್ಷ ಬಾಂಡ್

ಅರ್ಹತಾ ಮಾನದಂಡಗಳು ಮತ್ತು ಉದ್ಯೋಗ ಅವಶ್ಯಕತೆಗಳು(Eligibility Criteria)

ಶೈಕ್ಷಣಿಕ ಅರ್ಹತೆ (Educational Qualification)

  • Core ಅರ್ಹತೆ (Telecom Stream): ಕೇಂದ್ರ ಸರ್ಕಾರ / ರಾಜ್ಯ ಸರ್ಕಾರ ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾಲಯದಿಂದ ಬಾಚುಲರ್ ಆಫ್ ಇಂಜಿನಿಯರಿಂಗ್ (B.E) ಪದವಿ ಅಥವಾ ಸಮಾನ ಅರ್ಹತೆ ಹೊಂದಿರಬೇಕು. ಕೆಳಗಿನ ಯಾವುದೇ ವಿಭಾಗಗಳಲ್ಲಿ ಪದವಿ ಪಡೆದ ಅಭ್ಯರ್ಥಿಗಳು ಅರ್ಹರಾಗಿರುತ್ತಾರೆ: ಟೆಲಿಕಮ್ಯುನಿಕೇಶನ್ಸ್, ಎಲೆಕ್ಟ್ರಾನಿಕ್ಸ್, ರೇಡಿಯೋ, ಕಂಪ್ಯೂಟರ್, ಎಲೆಕ್ಟ್ರಿಕಲ್, ಇನ್ಫರ್ಮೇಶನ್ ಟೆಕ್ನಾಲಜಿ (ಐಟಿ) ಅಥವಾ ಇನ್‌ಸ್ಟ್ರುಮೆಂಟೇಶನ್.
  • Alternative ಅರ್ಹತೆ (Alternative Qualification): M.Sc. (Electronics) ಅಥವಾ M.Sc. (Computer Science) ಹೊಂದಿರುವ ಅಭ್ಯರ್ಥಿಗಳು ಕೂಡ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
  • ಹೆಚ್ಚಿನ ಅರ್ಹತೆ (Higher Qualifications): ನಿರ್ದಿಷ್ಟಪಡಿಸಿದ ವಿಭಾಗಗಳಲ್ಲಿ ಸ್ನಾತಕೋತ್ತರ ತಾಂತ್ರಿಕ ಪದವಿ (M.Tech) ಹೊಂದಿರುವ ಅಭ್ಯರ್ಥಿಗಳು ಸಹ ನೇರ ನೇಮಕಾತಿ (Direct Recruitment) ಪರೀಕ್ಷೆಗೆ ಹಾಜರಾಗಲು ಅರ್ಹರಾಗಿರುತ್ತಾರೆ.
  • ದೃಷ್ಟಿ ಅವಶ್ಯಕತೆ (Vision Requirement): ಅರ್ಜಿದಾರರು ಪ್ರಮುಖ ಬಣ್ಣಗಳನ್ನು ಸ್ಪಷ್ಟವಾಗಿ ಗುರುತಿಸಲು ಸಾಮರ್ಥ್ಯ ಹೊಂದಿರಬೇಕು ಮತ್ತು ಎರಡು ಕಣ್ಣುಗಳಿಂದ (ಬೈನಾಕ್ಯುಲರ್ ದೃಷ್ಟಿ) ನೋಡಲು ಸಾಧ್ಯವಾಗಿರಬೇಕು.
  • ರಾಷ್ಟ್ರೀಯತೆ (Nationality): ಕೇವಲ ಭಾರತೀಯ ನಾಗರಿಕರು ಮಾತ್ರ ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ವಯೋಮಿತಿ (Age Limit)

ಸಾಮಾನ್ಯ ವರ್ಗ
  • ಕನಿಷ್ಠ ವಯಸ್ಸು – 20 ವರ್ಷ
  • ಗರಿಷ್ಠ ವಯಸ್ಸು – 30 ವರ್ಷ
ಮೀಸಲಾತಿ ಸಡಿಲಿಕೆ
  • OBC – 33 ವರ್ಷ
  • SC/ST – 35ವರ್ಷ
  • PwBD – 40 ರಿಂದ 45 ವರ್ಷ
  • BSNL ನೌಕರರು ಹೆಚ್ಚುವರಿ ಸಡಿಲಿಕೆ

ಕೇಂದ್ರ ಸರ್ಕಾರದ ನಿಯಮದ ಪ್ರಕಾರ ವಯೋಮಿತಿ ಸಡಿಲಿಕೆ ಅನ್ವಯವಾಗುತ್ತದೆ

ಅರ್ಜಿ ಶುಲ್ಕ (Application Fee)

  • UR / OBC / EWS ಅಭ್ಯರ್ಥಿಗಳು: ₹2,000/-
  • SC / ST / PwBD ಅಭ್ಯರ್ಥಿಗಳು: ₹1,000/-

ಶುಲ್ಕವನ್ನು BSNL ವೆಬ್‌ಸೈಟ್: www.externalexam.bsnl.co.in ನಲ್ಲಿ ಆನ್‌ಲೈನ್ ಮೋಡ್ ಮೂಲಕ ಮಾತ್ರ (ಇಂಟರ್ನೆಟ್ ಬ್ಯಾಂಕಿಂಗ್, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್) ಪಾವತಿಸಬೇಕು. ಒಮ್ಮೆ ಪಾವತಿಸಿದ ಶುಲ್ಕವನ್ನು ಮರುಪಾವತಿಸಲಾಗುವುದಿಲ್ಲ.

ಆಯ್ಕೆ ಪ್ರಕ್ರಿಯೆ(Selection Process)

ಆಯ್ಕೆ ಪ್ರಕ್ರಿಯೆಯನ್ನು ಕಂಪ್ಯೂಟರ್ ಆಧಾರಿತ ಬಹು ಆಯ್ಕೆಯ ವಸ್ತುನಿಷ್ಠ ಪ್ರಕಾರ ಪರೀಕ್ಷೆ (CBT) ಮೂಲಕ ಈ ಕೆಳಗಿನಂತೆ ನಡೆಸಲಾಗುತ್ತದೆ:
  1. ಲಿಖಿತ ಪರೀಕ್ಷೆ (CBT): 3 ಗಂಟೆಗಳ ಅವಧಿ, ಮೂರು ವಿಭಾಗಗಳಲ್ಲಿ ಒಟ್ಟು 480 ಅಂಕಗಳಿಗೆ 120 ಪ್ರಶ್ನೆಗಳನ್ನು ಒಳಗೊಂಡಿದೆ.
ವಿಭಾಗ ವಿವರ ಪ್ರಶ್ನೆಗಳು ಗರಿಷ್ಠ ಅಂಕಗಳು
ವಿಭಾಗ I ಇಂಜಿನಿಯರಿಂಗ್ ಸ್ಟ್ರೀಮ್ ವಿಭಾಗ – I 50 ಪ್ರಶ್ನೆಗಳು 200 ಅಂಕಗಳು
ವಿಭಾಗ II ಇಂಜಿನಿಯರಿಂಗ್ ಸ್ಟ್ರೀಮ್ ವಿಭಾಗ – II 50 ಪ್ರಶ್ನೆಗಳು 200 ಅಂಕಗಳು
ವಿಭಾಗ III ಸಾಮಾನ್ಯ ಸಾಮರ್ಥ್ಯ ಪರೀಕ್ಷೆ (General Ability Test) – ವಿಭಾಗ III 20 ಪ್ರಶ್ನೆಗಳು 80 ಅಂಕಗಳು
ಒಟ್ಟು 120 ಪ್ರಶ್ನೆಗಳು 480 ಅಂಕಗಳು

2. ಅಂಕಗಳ ನೀಡಿಕೆ (Marking Scheme): ಪ್ರತಿ ಸರಿಯಾದ ಉತ್ತರಕ್ಕೆ +4 ಅಂಕಗಳು ನೀಡಲಾಗುತ್ತದೆ ಮತ್ತು ಪ್ರತಿ ತಪ್ಪು ಉತ್ತರಕ್ಕೆ -1 ಅಂಕ ಕಡಿತ ಮಾಡಲಾಗುತ್ತದೆ (ನೆಗಟಿವ್ ಮಾರ್ಕಿಂಗ್ ಅನ್ವಯಿಸುತ್ತದೆ).

3. ಕನಿಷ್ಠ ಅರ್ಹತಾ ಅಂಕಗಳು (Minimum Qualifying Marks): ಪ್ರತಿ ವಿಭಾಗದಲ್ಲಿ ಕನಿಷ್ಠ 40% ಅಂಕಗಳು ಅಗತ್ಯವಾಗಿದ್ದು, ಒಟ್ಟಾರೆ ಮೂರು ವಿಭಾಗಗಳಲ್ಲಿ ಸೇರಿ Unreserved/OBC (CL) ಅಭ್ಯರ್ಥಿಗಳಿಗೆ 50% ಹಾಗೂ SC/ST/OBC (NCL)/PwBD/EWS ಅಭ್ಯರ್ಥಿಗಳಿಗೆ 45% ಅಂಕಗಳು ಅಗತ್ಯವಾಗಿರುತ್ತವೆ.

4. ದಾಖಲೆ ಪರಿಶೀಲನೆ (Document Verification): ಅಂತಿಮ ಮೆರಿಟ್ ಪಟ್ಟಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು ದಾಖಲೆ ಪರಿಶೀಲನೆಗೆ ಕರೆಯಲಾಗುತ್ತದೆ. ದಿನಾಂಕ ಮತ್ತು ಸ್ಥಳವನ್ನು ನಂತರ ತಿಳಿಸಲಾಗುತ್ತದೆ.

5. ವೈದ್ಯಕೀಯ ಪರೀಕ್ಷೆ (Medical Examination): ಆಯ್ಕೆಯಾದ ಅಭ್ಯರ್ಥಿಗಳ ನೇಮಕಾತಿ BSNL ನ ನಿಗದಿತ ವೈದ್ಯಕೀಯ ಮಾನದಂಡಗಳನ್ನು ಪೂರೈಸಿದ ನಂತರ ಮಾತ್ರ ದೃಢಪಡಿಸಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ(How to Apply )

ಬಹಳ ಜನರಿಗೆ ಅರ್ಜಿ ಪ್ರಕ್ರಿಯೆ ಗೊತ್ತಿರುವುದಿಲ್ಲ. ಆದ್ದರಿಂದ ಸುಲಭವಾಗಿ ಅರ್ಥವಾಗುವಂತೆ ಹಂತ ಹಂತವಾಗಿ ಇಲ್ಲಿದೆ ಮಾಹಿತಿ.

  1. ಅಭ್ಯರ್ಥಿಗಳು ಕೇವಲ BSNL ಅಧಿಕೃತ ವೆಬ್‌ಸೈಟ್ www.externalexam.bsnl.co.in ಮೂಲಕ ಮಾತ್ರ ಆನ್‌ಲೈನ್‌ನಲ್ಲಿ ನೋಂದಣಿ ಮಾಡಬೇಕು; ಯಾವುದೇ ಕೈಯಾರೆ (paper/manual) ಅರ್ಜಿಗಳು ಸ್ವೀಕರಿಸಲಾಗುವುದಿಲ್ಲ.
  2. JTO Recruitment 2026 Notification ಮೇಲೆ ಕ್ಲಿಕ್ ಮಾಡಿ
  3. Register ಮಾಡಿ Mobile Number ಮತ್ತು Email Verify ಮಾಡಿ.
  4. Application Form ನಲ್ಲಿ ವಿವರಗಳನ್ನು ಸರಿಯಾಗಿ ನಮೂದಿಸಿ.
  5. ಅಗತ್ಯ ದಾಖಲೆಗಳನ್ನು Upload ಮಾಡಿ.
  6. Application Fee ಪಾವತಿಸಿ.
  7. ಕೊನೆಗೆ ಅರ್ಜಿಯನ್ನು Submit ಮಾಡಿ Print ತೆಗೆದುಕೊಳ್ಳಿ.

ಅಗತ್ಯ ದಾಖಲೆಗಳು (Documents Required)

  • ಮಾನ್ಯ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ID (OTPಗಾಗಿ)
  • ಪಾಸ್‌ಪೋರ್ಟ್ ಸೈಸ್ ಬಣ್ಣದ ಫೋಟೋ (JPG/JPEG, 20–50 KB, white background)
  • ಸಹಿ (Signature) (JPG/JPEG, 10–20 KB)
  • 10ನೇ ತರಗತಿ ಪ್ರಮಾಣಪತ್ರ (ಜನ್ಮ ದಿನಾಂಕದ ಪುರಾವೆ)
  • ಪದವಿ ಪ್ರಮಾಣಪತ್ರ (Degree Certificate)
  • Consolidated Marks Sheet
  • ಗುರುತಿನ ಚೀಟಿ (Aadhaar / Passport / Driving License / Voter ID)
  • ವರ್ಗ/ರಿಸರ್ವೇಶನ್ ಪ್ರಮಾಣಪತ್ರ (ಅನ್ವಯವಾಗುವವರಿಗೆ ಮಾತ್ರ)
  • PwBD ಅಭ್ಯರ್ಥಿಗಳಿಗೆ ವೈದ್ಯಕೀಯ ಪ್ರಮಾಣಪತ್ರ
  • ಸರ್ಕಾರಿ/PSU/Autonomous ಸಂಸ್ಥೆಗಳಲ್ಲಿ ಕೆಲಸ ಮಾಡುವವರಿಗೆ NOC (No Objection Certificate)

BSNL ಉದ್ಯೋಗದ ಲಾಭಗಳು:

BSNL ಸರ್ಕಾರಿ ಸಂಸ್ಥೆಯಾಗಿರುವುದರಿಂದ ಉದ್ಯೋಗದಲ್ಲಿ ಹೆಚ್ಚಿನ ಭದ್ರತೆ ದೊರೆಯುತ್ತದೆ. ಇಲ್ಲಿ ಶಾಶ್ವತ ಉದ್ಯೋಗದ ಜೊತೆಗೆ ಉತ್ತಮ ಸಂಬಳ ಸೌಲಭ್ಯ, ಸರ್ಕಾರದ ಭದ್ರತೆ, ಹಾಗೂ ನಿಯಮಿತ ಪ್ರೋಮೋಷನ್ ಅವಕಾಶಗಳು ಲಭ್ಯವಿರುತ್ತವೆ. ಜೊತೆಗೆ Medical Benefits, Pension Benefits ಮತ್ತು ಉತ್ತಮ Work-Life Balance ಕೂಡ ದೊರೆಯುವುದರಿಂದ ಇದು ಸ್ಥಿರ ಹಾಗೂ ಗೌರವಯುತ ವೃತ್ತಿ ಅವಕಾಶವಾಗಿರುತ್ತದೆ.

ಕೊನೆಯ ಮಾತು

Engineering completed ಮಾಡಿದ ಅಭ್ಯರ್ಥಿಗಳಿಗೆ BSNL JTO Recruitment 2026 ಅತ್ಯುತ್ತಮ ಅವಕಾಶವಾಗಿದೆ. ವಿಶೇಷವಾಗಿ B.Tech, B.E ಹಾಗೂ M.Sc ವಿದ್ಯಾರ್ಥಿಗಳು ಈ ಅವಕಾಶವನ್ನು ತಪ್ಪಿಸಿಕೊಳ್ಳಬಾರದು.

ಸರ್ಕಾರಿ ಉದ್ಯೋಗದ ಕನಸು ಹೊಂದಿರುವವರು ಈಗಲೇ ಅರ್ಜಿ ಪ್ರಕ್ರಿಯೆಗೆ ಸಿದ್ಧತೆ ಆರಂಭಿಸುವುದು ಉತ್ತಮ. ಪರೀಕ್ಷೆಯಲ್ಲಿ ಸ್ಪರ್ಧೆ ಹೆಚ್ಚು ಇರುವುದರಿಂದ ಈಗಿನಿಂದಲೇ Preparation ಶುರು ಮಾಡಿದರೆ ಯಶಸ್ಸಿನ ಸಾಧ್ಯತೆ ಹೆಚ್ಚಿರುತ್ತದೆ.

ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ನಂತರವೇ Apply ಮಾಡುವುದು ಉತ್ತಮ.

 ಇದನ್ನು ಓದಿ:  

Bank of Baroda Recruitment 2026

Bank of Baroda Recruitment 2026: 5000 ಹುದ್ದೆಗಳ ನೇಮಕಾತಿ – ಫ್ರೆಶರ್ಸ್ ಹಾಗೂ ಪದವೀಧರರಿಗೆ ಭಾರಿ ಅವಕಾಶ!

Leave a Comment