Telegram Join My Telegram WhatsApp Join My WhatsApp

Voter ID Address Change Online: ವಿಳಾಸ ಬದಲಾವಣೆ ಮಾಡುವ ಸುಲಭ ವಿಧಾನ – ಸಂಪೂರ್ಣ ಮಾಹಿತಿ

Voter ID Address Change Online

ಮನೆ ಬದಲಿಸಿದ್ದೀರಾ? ಹಾಗಿದ್ರೆ ವೋಟರ್ ಐಡಿ ವಿಳಾಸ ಬದಲಾವಣೆ ತಪ್ಪದೇ ಮಾಡಿ!

ಇತ್ತೀಚಿನ ದಿನಗಳಲ್ಲಿ ಉದ್ಯೋಗ, ಶಿಕ್ಷಣ, ವ್ಯವಹಾರ ಅಥವಾ ಕುಟುಂಬದ ಕಾರಣಗಳಿಂದ ಅನೇಕರು ಒಂದು ಊರಿನಿಂದ ಮತ್ತೊಂದು ಊರಿಗೆ ಸ್ಥಳಾಂತರವಾಗುತ್ತಿದ್ದಾರೆ. ಆದರೆ ಹೊಸ ವಿಳಾಸಕ್ಕೆ ಶಿಫ್ಟ್ ಆದ ನಂತರ ಬಹುತೇಕ ಜನರು ಮಾಡುವ ದೊಡ್ಡ ತಪ್ಪೇನು ಗೊತ್ತಾ? ತಮ್ಮ Voter ID ಕಾರ್ಡ್‌ನಲ್ಲಿ ವಿಳಾಸ ಬದಲಾವಣೆ ಮಾಡಿಸದೇ ಬಿಡುವುದು.

Voter ID ಕೇವಲ ಮತ ಹಾಕಲು ಮಾತ್ರ ಬಳಸುವ ಕಾರ್ಡ್ ಅಲ್ಲ. ಇದು ಸರ್ಕಾರ ಮಾನ್ಯತೆ ನೀಡಿರುವ ಪ್ರಮುಖ ಗುರುತಿನ ಚೀಟಿ ಕೂಡ ಹೌದು. ಬ್ಯಾಂಕ್ ಕೆಲಸಗಳಿಂದ ಹಿಡಿದು ವಿವಿಧ ಸರ್ಕಾರಿ ಯೋಜನೆಗಳವರೆಗೆ ಹಲವೆಡೆ ಇದು ವಿಳಾಸದ ದಾಖಲೆ ಆಗಿಯೂ ಉಪಯೋಗವಾಗುತ್ತದೆ.

ಒಂದು ವೇಳೆ ನಿಮ್ಮ Voter ID ನಲ್ಲಿ ಹಳೆಯ ವಿಳಾಸ ಇದ್ದರೆ, ಮತದಾನದ ಸಮಯದಲ್ಲಿ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ನೀವು ವಾಸಿಸುವ ಸರಿಯಾದ ಕ್ಷೇತ್ರದಲ್ಲಿ ಮತ ಹಾಕಲು ಆಗದೇ ಬೇರೆ ಕ್ಷೇತ್ರಕ್ಕೆ ಹೋಗಬೇಕಾಗುವ ಪರಿಸ್ಥಿತಿಯೂ ಬರಬಹುದು. ಆದ್ದರಿಂದ ಹೊಸ ವಿಳಾಸಕ್ಕೆ ಶಿಫ್ಟ್ ಆದ ತಕ್ಷಣ Voter ID Address Update ಮಾಡುವುದು ಬಹಳ ಮುಖ್ಯ. ಇಂದಿನ ದಿನಗಳಲ್ಲಿ ಈ ಪ್ರಕ್ರಿಯೆ ತುಂಬಾ ಸುಲಭವಾಗಿದೆ. ಮನೆಯಲ್ಲೇ ಕೂತು Online ಮೂಲಕ ಕೆಲವೇ ನಿಮಿಷಗಳಲ್ಲಿ ಅರ್ಜಿ ಸಲ್ಲಿಸಬಹುದು. Online ಮಾಡಲು ಸಾಧ್ಯವಾಗದವರು Offline ಮೂಲಕ ಚುನಾವಣಾ ಕಚೇರಿಗೆ ಭೇಟಿ ನೀಡಿ ಸುಲಭವಾಗಿ ವಿಳಾಸ ಬದಲಾವಣೆ ಮಾಡಿಸಬಹುದು.

ಈ ಲೇಖನದಲ್ಲಿ:

  • ವೋಟರ್ ಐಡಿ ವಿಳಾಸ ಬದಲಾವಣೆ Online ಮೂಲಕ ಮಾಡುವ ವಿಧಾನ
  • Offline ಮೂಲಕ ವೋಟರ್ ಐಡಿ ವಿಳಾಸ ಬದಲಾವಣೆ ಹೇಗೆ ಮಾಡುವುದು
  • ವಿಳಾಸ ಬದಲಾವಣೆಗಾಗಿ ಬೇಕಾಗುವ ಅಗತ್ಯ ದಾಖಲೆಗಳು ಯಾವುವು
  • ಅರ್ಜಿ ಸಲ್ಲಿಸಿದ ನಂತರ Application Status ಅನ್ನು ಹೇಗೆ ಪರಿಶೀಲಿಸಬೇಕು
  • ಮುಖ್ಯ ಮಾಹಿತಿ ಮತ್ತು ಉಪಯುಕ್ತ ಸಲಹೆಗಳು ಸಂಪೂರ್ಣವಾಗಿ ತಿಳಿದುಕೊಳ್ಳಿ

ನೀವು ಹೊಸ ವಿಳಾಸಕ್ಕೆ ಸ್ಥಳಾಂತರಗೊಂಡಿದ್ದೀರಾ? ನಿಮ್ಮ ಮತದಾರರ ಗುರುತಿನ ಚೀಟಿಯನ್ನು ನವೀಕರಿಸಲು ಮರೆಯಬೇಡಿ! ಈ ನಿರ್ಣಾಯಕ ದಾಖಲೆಯು ನಿಮಗೆ ಮತದಾನದ ಹಕ್ಕನ್ನು ನೀಡುವುದಲ್ಲದೆ, ಗುರುತು ಮತ್ತು ನಿವಾಸದ ಮಾನ್ಯ ಪುರಾವೆಯಾಗಿಯೂ ಕಾರ್ಯನಿರ್ವಹಿಸುತ್ತದೆ. ನಿಮ್ಮ ಮತದಾರರ ಗುರುತಿನ ಚೀಟಿಯ ವಿವರಗಳನ್ನು ನವೀಕರಿಸುವುದರಿಂದ ನೀವು ಯಾವುದೇ ತೊಂದರೆಯಿಲ್ಲದೆ ಸರಿಯಾದ ಕ್ಷೇತ್ರದಲ್ಲಿ ನಿಮ್ಮ ಮತವನ್ನು ಚಲಾಯಿಸಬಹುದು ಎಂದು ಖಚಿತಪಡಿಸುತ್ತದೆ.

“Voter ID Address Change ಮಾಡುವುದು ಯಾಕೆ ಮುಖ್ಯ?”

ಬಹಳ ಜನ “ಮನೆ ಬದಲಿಸಿದ್ದೇವೆ, ನಂತರ ಮಾಡೋಣ” ಎಂದು ಮುಂದೂಡುತ್ತಿರುತ್ತಾರೆ. ಆದರೆ Address Update ಮಾಡದೇ ಇದ್ದರೆ ಮುಂದೆ ಹಲವು ಸಮಸ್ಯೆಗಳು ಬರಬಹುದು.

ಮುಖ್ಯ ಕಾರಣಗಳು:

1. ಸರಿಯಾದ ಕ್ಷೇತ್ರದಲ್ಲಿ ಮತದಾನ ಮಾಡಲು

ವಿಳಾಸ ಬದಲಾಗಿದ್ರೆ ನಿಮ್ಮ Constituency ಕೂಡ ಬದಲಾಗಬಹುದು. ಹಳೆಯ ವಿಳಾಸ ಇದ್ದರೆ ನೀವು ತಪ್ಪು ಕ್ಷೇತ್ರದಲ್ಲಿ register ಆಗಿರೋ ಸಾಧ್ಯತೆ ಇರುತ್ತದೆ.

2. ಸರ್ಕಾರದ ದಾಖಲೆಗಳಲ್ಲಿ ಸರಿಯಾದ ಮಾಹಿತಿ ಇರಲು

ಸರ್ಕಾರದ ಅನೇಕ ಸೇವೆಗಳಿಗೆ Voter ID ಒಂದು ಪ್ರಮುಖ ದಾಖಲೆ. ಇದು ಗುರುತು ಮತ್ತು ವಿಳಾಸದ ಪ್ರಮಾಣಪತ್ರವಾಗಿಯೂ ಬಳಸಲಾಗುತ್ತದೆ, ಆದ್ದರಿಂದ ಮಾಹಿತಿ ಸರಿಯಾಗಿರಬೇಕು.

3. Address Proof ಆಗಿ ಬಳಸಲು

Bank Account, SIM Card, Rental Agreement ಸೇರಿದಂತೆ ಹಲವೆಡೆ ಇದು ಉಪಯೋಗವಾಗುತ್ತದೆ.

Voter ID Address Change Online

Online ಮೂಲಕ Voter ID ವಿಳಾಸ ಬದಲಾವಣೆ ಮಾಡುವ ವಿಧಾನ

ಇಂದಿನ ಡಿಜಿಟಲ್ ಯುಗದಲ್ಲಿ ಹೆಚ್ಚಿನ ಜನ Online ವಿಧಾನವನ್ನು ಆಯ್ಕೆ ಮಾಡುತ್ತಿದ್ದಾರೆ. ಏಕೆಂದರೆ ಇದು ತುಂಬಾ ಸುಲಭ ಮತ್ತು ವೇಗವಾದ ಪ್ರಕ್ರಿಯೆ.

ಕೆಳಗಿನ ಹಂತಗಳನ್ನು ಅನುಸರಿಸಿ:

ಹಂತ 1: National Voters’ Services Portal ಗೆ Login ಆಗಿ

ಮೊದಲಿಗೆ National Voters’ Services Portal (NVSP) https://voters.eci.gov.in/ ವೆಬ್‌ಸೈಟ್‌ಗೆ ಹೋಗಿ Login ಆಗಬೇಕು. ಈಗಾಗಲೇ Account ಇದ್ದರೆ Mobile Number ಮತ್ತು Password ಬಳಸಿ Login ಮಾಡಬಹುದು. Account ಇಲ್ಲದಿದ್ದರೆ ಹೊಸ Account Create ಮಾಡಿಕೊಂಡು ನಂತರ ಸುಲಭವಾಗಿ Login ಆಗಬಹುದು.

ಹಂತ 2: ಮತದಾರರ ಪಟ್ಟಿಯಲ್ಲಿನ ಮಾಹಿತಿಯ ತಿದ್ದುಪಡಿ ಆಯ್ಕೆ ಮಾಡಿ

Login ಆದ ನಂತರ Dashboard ನಲ್ಲಿ “Correction of Entries in Electoral Roll” ಆಯ್ಕೆಯನ್ನು ಕ್ಲಿಕ್ ಮಾಡಿ.

ಹಂತ 3: ಫಾರ್ಮ್ 8 ತೆರೆಯಿರಿ

ವೋಟರ್ ಐಡಿ ವಿಳಾಸ ಬದಲಾವಣೆ ಸೇರಿದಂತೆ ಎಲ್ಲಾ Correction ಗಳಿಗಾಗಿ Form 8 ಅನ್ನು ಬಳಸಲಾಗುತ್ತದೆ.

ಈ Form ನಲ್ಲಿ ನಿಮ್ಮ:

  • ಹೆಸರು
  • EPIC Number
  • ಹಳೆಯ ವಿಳಾಸ
  • ಹೊಸ ವಿಳಾಸ
  • Constituency ಮಾಹಿತಿ

ಹೀಗೆ ಕೇಳಲಾಗುವ ಎಲ್ಲಾ ಮಾಹಿತಿಯನ್ನು ಸರಿಯಾಗಿ ನಮೂದಿಸಬೇಕು

ಹಂತ 4: ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ

ಈ ಹಂತದಲ್ಲಿ Address Proof ಮತ್ತು ಇತರ ದಾಖಲೆಗಳನ್ನುಅಪ್‌ಲೋಡ್ ಮಾಡಬೇಕು.

ಸಾಮಾನ್ಯವಾಗಿ ಬೇಕಾಗುವ ದಾಖಲೆಗಳು:

  • ಆಧಾರ್ ಕಾರ್ಡ್
  • ವಿದ್ಯುತ್ ಬಿಲ್
  • ನೀರಿನ ಬಿಲ್
  • ಪಾಸ್‌ಪೋರ್ಟ್
  • ಬಾಡಿಗೆ ಒಪ್ಪಂದ (ರೆಂಟ್ ಅಗ್ರಿಮೆಂಟ್)

ಸ್ಕ್ಯಾನ್ ಮಾಡಿದ ಸ್ಪಷ್ಟ ಪ್ರತಿಗಳನ್ನು Upload ಮಾಡುವುದು ಉತ್ತಮ.

Step 5: “Address” ಆಯ್ಕೆ ಮಾಡಿ

Correction Type ನಲ್ಲಿ ಹಲವು ಆಯ್ಕೆಗಳು ಇರಬಹುದು.

ಅದಲ್ಲಿರುವ: Address Change ಎಂಬ ಆಯ್ಕೆಯನ್ನು Select ಮಾಡಬೇಕು.

ಹಂತ 6: ಪ್ರಸ್ತುತ ಸ್ಥಳ ಮತ್ತು ದಿನಾಂಕ ನಮೂದಿಸಿ

ನಿಮ್ಮ ಪ್ರಸ್ತುತ ಸ್ಥಳ ಮತ್ತು ದಿನಾಂಕವನ್ನು ಸರಿಯಾಗಿ ನಮೂದಿಸಿ. ಇದು Verification ಪ್ರಕ್ರಿಯೆಗೆ ಸಹಾಯ ಮಾಡುತ್ತದೆ.

ಹಂತ 7: ಸಂಪರ್ಕ ವಿವರಗಳನ್ನು ಪರಿಶೀಲಿಸಿ ಮತ್ತು ಅರ್ಜಿ ಸಲ್ಲಿಸಿ
  • ಕೊನೆಯಲ್ಲಿ ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ ಸರಿಯಾಗಿದೆಯೇ ಎಂದು ಪರಿಶೀಲಿಸಿ.
  • ನಂತರ “Submit” Button ಕ್ಲಿಕ್ ಮಾಡಿ.
  • ಅರ್ಜಿಯನ್ನು ಯಶಸ್ವಿಯಾಗಿ ಸಲ್ಲಿಸಿದ ನಂತರ Reference Number ದೊರೆಯುತ್ತದೆ. ಅದನ್ನು Save ಮಾಡಿಕೊಂಡಿರಿ.

Offline ಮೂಲಕ Voter ID ವಿಳಾಸ ಬದಲಾವಣೆ ಮಾಡುವ ವಿಧಾನ

ನಿಮ್ಮ ಮತದಾರರ ಗುರುತಿನ ಚೀಟಿ ವಿಳಾಸವನ್ನು ಆಫ್‌ಲೈನ್‌ನಲ್ಲಿ ಬದಲಾಯಿಸಲು ಈ ಹಂತಗಳನ್ನು ಅನುಸರಿಸಿ:

  1. ಹತ್ತಿರದ ಚುನಾವಣಾ ಕಚೇರಿಗೆ ಭೇಟಿ ನೀಡಿ.
  2. ವಿಳಾಸವನ್ನು ಬದಲಾಯಿಸಲು ‘ಫಾರ್ಮ್ 8’ ಅನ್ನು ಸಂಗ್ರಹಿಸಿ ಮತ್ತು ಅಗತ್ಯವಿರುವ ಎಲ್ಲಾ ವಿವರಗಳನ್ನು ಭರ್ತಿ ಮಾಡಿ. ಎಲ್ಲಾ ವಿವರಗಳು ನಿಖರವಾಗಿವೆಯೇ ಎಂದು ಖಚಿತಪಡಿಸಿಕೊಳ್ಳಿ.
  3. ನಿವಾಸ ಪುರಾವೆ ದಾಖಲೆಗಳನ್ನು ಲಗತ್ತಿಸಿ.
  4. ಮಾಹಿತಿಯನ್ನು ಎಚ್ಚರಿಕೆಯಿಂದ ಪರಿಶೀಲಿಸಿ ನಂತರ ಚುನಾವಣಾ ಕಚೇರಿಗೆ ಸಲ್ಲಿಸಿ.
  5. ಫಾರ್ಮ್ ಅನ್ನು ಸಲ್ಲಿಸಿದ ನಂತರ, ನೀವು ಸ್ವೀಕೃತಿ ರಶೀದಿಯನ್ನು ಸ್ವೀಕರಿಸುತ್ತೀರಿ. ಇದು ನಿಮ್ಮ ಮತದಾರರ ಗುರುತಿನ ಚೀಟಿಯನ್ನು ಟ್ರ್ಯಾಕ್ ಮಾಡಲು ಬಳಸಬಹುದಾದ ಉಲ್ಲೇಖ ಸಂಖ್ಯೆಯನ್ನು ಸಹ ಹೊಂದಿರುತ್ತದೆ.

ವೋಟರ್ ಐಡಿ ವಿಳಾಸ ಬದಲಾವಣೆಗೆ ಬೇಕಾಗುವ ದಾಖಲೆಗಳು

ಮತದಾರರ ಗುರುತಿನ ಚೀಟಿಯಲ್ಲಿ ವಿಳಾಸವನ್ನು ಬದಲಾಯಿಸಲು, ನೀವು ನಿವಾಸದ ಪುರಾವೆಯಾಗಿ ಕೆಳಗಿನ ಯಾವುದೇ ದಾಖಲೆಗಳನ್ನು ಅಪ್‌ಲೋಡ್ ಮಾಡಬಹುದು:

  • ವಿದ್ಯುತ್ ಬಿಲ್ ಅಥವಾ ನೀರಿನ ಬಿಲ್‌ನಂತಹ ಯುಟಿಲಿಟಿ ಬಿಲ್
  • ಆಧಾರ್ ಕಾರ್ಡ್
  • ಭಾರತೀಯ ಪಾಸ್‌ಪೋರ್ಟ್
  • ನೋಂದಾಯಿತ ಬಾಡಿಗೆ ಗುತ್ತಿಗೆ ಪತ್ರ (ಬಾಡಿಗೆದಾರರಾಗಿದ್ದರೆ)
  • ನೋಂದಾಯಿತ ಮಾರಾಟ ಪತ್ರ (ಮನೆಮಾಲೀಕರಾಗಿದ್ದರೆ)

Voter ID Address Change Online

ಫಾರ್ಮ್ 8 ಎಂದರೇನು?

ಬಹಳ ಜನರಿಗೆ ಫಾರ್ಮ್ 8 ಬಗ್ಗೆ ಸ್ಪಷ್ಟ ಮಾಹಿತಿ ಇರುವುದಿಲ್ಲ. ವೋಟರ್ ಐಡಿಯಲ್ಲಿ ಹೆಸರು ತಿದ್ದುಪಡಿ, ವಿಳಾಸ ಬದಲಾವಣೆ, ಜನ್ಮ ದಿನಾಂಕ ತಿದ್ದುಪಡಿ, ಫೋಟೋ ಅಪ್‌ಡೇಟ್ ಹಾಗೂ ಇತರ ವಿವರಗಳನ್ನು ಸರಿಪಡಿಸಲು ಫಾರ್ಮ್ 8 ಅನ್ನು ಬಳಸಲಾಗುತ್ತದೆ. ಅಂದರೆ ವೋಟರ್ ಐಡಿಯಲ್ಲಿ ಯಾವುದೇ ಮಾಹಿತಿ ಬದಲಾಯಿಸಲು ಈ ಫಾರ್ಮ್ ಬಹಳ ಮುಖ್ಯವಾಗಿದೆ.

ಅರ್ಜಿ ಸ್ಥಿತಿ ಪರಿಶೀಲಿಸುವ ವಿಧಾನ (Application Status)

ನಿಮ್ಮ ಮತದಾರರ ಗುರುತಿನ ಚೀಟಿ ಅರ್ಜಿಯ ಸ್ಥಿತಿಯನ್ನು ಟ್ರ್ಯಾಕ್ ಮಾಡಲು ಈ ಹಂತಗಳನ್ನು ಅನುಸರಿಸಿ:

  1. ರಾಷ್ಟ್ರೀಯ ಮತದಾರರ ಸೇವಾ ಪೋರ್ಟಲ್ (NVSP) ಗೆ ಲಾಗಿನ್ ಮಾಡಿ.
  2. ‘ಅಪ್ಲಿಕೇಶನ್ ಸ್ಥಿತಿ ಟ್ರ್ಯಾಕ್ ಮಾಡಿ’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
  3. ಅರ್ಜಿ ಸಲ್ಲಿಸಿದಾಗ ಸಿಕ್ಕ Reference Number ಅನ್ನು ನಮೂದಿಸಿ ಮತ್ತು ನಿಮ್ಮ ರಾಜ್ಯವನ್ನು ಆಯ್ಕೆ ಮಾಡಿ.
  4. ಈಗ ನಿಮ್ಮ Application Status Screen ನಲ್ಲಿ ಕಾಣಿಸುತ್ತದೆ.

ಉದಾಹರಣೆಗೆ:

  • Submitted
  • Under Verification
  • Approved
  • Rejected

ಹೀಗೆ Status ತೋರಿಸುತ್ತದೆ.

ವಿಳಾಸ ಬದಲಾವಣೆ ಆಗಲು ಎಷ್ಟು ಸಮಯ ಬೇಕು?

ಸಾಮಾನ್ಯವಾಗಿ Voter ID ವಿಳಾಸ ಬದಲಾವಣೆ ಪ್ರಕ್ರಿಯೆ ಪೂರ್ಣಗೊಳ್ಳಲು 2 ರಿಂದ 4 ವಾರಗಳವರೆಗೆ ಸಮಯ ಬೇಕಾಗಬಹುದು. ಕೆಲವೊಮ್ಮೆ ಇದು ಸ್ಥಳೀಯ ಪರಿಶೀಲನೆ (Verification) ಪ್ರಕ್ರಿಯೆಯ ಮೇಲೆ ಅವಲಂಬಿತವಾಗಿರುತ್ತದೆ. ಅಗತ್ಯವಿದ್ದರೆ Verification Officer ಮನೆಗೆ ಭೇಟಿ ನೀಡಿ ಮಾಹಿತಿಯನ್ನು ಪರಿಶೀಲಿಸುವ ಸಾಧ್ಯತೆಯೂ ಇರುತ್ತದೆ.

ವಿಳಾಸ ಬದಲಾವಣೆ ಮಾಡುವಾಗ ಗಮನಿಸಬೇಕಾದ ಪ್ರಮುಖ ವಿಷಯಗಳು

  • ಸರಿಯಾದ ಮತ್ತು ಸ್ಪಷ್ಟ ದಾಖಲೆಗಳನ್ನು ಮಾತ್ರ ಅಪ್‌ಲೋಡ್ ಮಾಡಿ.
  •  OTP ಮತ್ತು Updates ಪಡೆಯಲು ನಿಮ್ಮ ಮೊಬೈಲ್ ಸಂಖ್ಯೆ ಚಾಲ್ತಿಯಲ್ಲಿರಲಿ.
  • ಅರ್ಜಿ ಸ್ಥಿತಿ ಪರಿಶೀಲಿಸಲು Reference Number ಅನ್ನು ಉಳಿಸಿಕೊಳ್ಳಿ.
  •  ಅರ್ಜಿಯಲ್ಲಿ ಎಲ್ಲಾ ಮಾಹಿತಿಯನ್ನು ಸರಿಯಾಗಿ ನಮೂದಿಸಿ.

FAQ – ಸಾಮಾನ್ಯ ಪ್ರಶ್ನೆಗಳು

Q1. ವೋಟರ್ ಐಡಿ ವಿಳಾಸ ಬದಲಾವಣೆ Online ನಲ್ಲಿ ಮಾಡಬಹುದೇ?

ಹೌದು, NVSP Portal ಮೂಲಕ Online ನಲ್ಲಿ ಮಾಡಬಹುದು.

Q2. ಯಾವ Form ಬಳಸಬೇಕು?

Form 8 ಬಳಸಬೇಕು.

Q3. ಆಧಾರ್ ಕಾರ್ಡ್ಕಡ್ಡಾಯವೇ?

ಇಲ್ಲ. ಬೇರೆ ವಿಳಾಸದ ದೃಢೀಕರಣ ದಾಖಲೆಗಳನ್ನೂ ಬಳಸಬಹುದು.

Q4. ವಿಳಾಸ ಬದಲಾವಣೆಗೆ ಶುಲ್ಕ ಇದೆಯೇ?

ಸಾಮಾನ್ಯವಾಗಿ ಯಾವುದೇ ಶುಲ್ಕ ಇರುವುದಿಲ್ಲ.

Q5. Application Status ಹೇಗೆ ನೋಡಬೇಕು?

Reference Number ಬಳಸಿ Online ನಲ್ಲಿ Track ಮಾಡಬಹುದು

Voter ID Address Change Online

ಕೊನೆಯ ಮಾತು

ನೀವು ಆನ್‌ಲೈನ್ ಅಥವಾ ಆಫ್‌ಲೈನ್ ವಿಧಾನವನ್ನು ಆರಿಸಿಕೊಂಡರೂ ನಿಮ್ಮ ಮತದಾರರ ಗುರುತಿನ ಚೀಟಿ ವಿಳಾಸವನ್ನು ಬದಲಾಯಿಸುವುದು ಈಗ ಎಂದಿಗಿಂತಲೂ ಸುಲಭವಾಗಿದೆ. ಅಗತ್ಯವಿರುವ ದಾಖಲೆಗಳನ್ನು ಸಲ್ಲಿಸಿ, ಹಂತಗಳನ್ನು ಅನುಸರಿಸಿ ಮತ್ತು ನಿಮ್ಮ ವಿವರಗಳನ್ನು ಯಾವುದೇ ತೊಂದರೆಯಿಲ್ಲದೆ ನವೀಕರಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಿ.
ಈಗಾಗಲೇ ಅರ್ಜಿ ಸಲ್ಲಿಸಿದ್ದೀರಾ? ನಿಮ್ಮ ಮತದಾರರ ಗುರುತಿನ ಚೀಟಿ ಅರ್ಜಿಯ ಸ್ಥಿತಿಯನ್ನು ಆನ್‌ಲೈನ್‌ನಲ್ಲಿ ಟ್ರ್ಯಾಕ್ ಮಾಡಿ ಮತ್ತು ಮಾಹಿತಿ ಪಡೆದುಕೊಳ್ಳಿ. ನಿಮ್ಮ ನವೀಕರಿಸಿದ ಕಾರ್ಡ್ ಇನ್ನೂ ಬಂದಿಲ್ಲದಿದ್ದರೂ ಸಹ, ನಿಮ್ಮ ಅಸ್ತಿತ್ವದಲ್ಲಿರುವ ಕಾರ್ಡ್ ಬಳಸಿ ನೀವು ಇನ್ನೂ ನಿಮ್ಮ ಮತವನ್ನು ಚಲಾಯಿಸಬಹುದು.

Online ಹಾಗೂ Offline ಎರಡೂ ವಿಧಾನಗಳು ಈಗ ತುಂಬಾ ಸುಲಭವಾಗಿವೆ. ಕೆಲವೇ ನಿಮಿಷಗಳಲ್ಲಿ ಅರ್ಜಿ ಸಲ್ಲಿಸಬಹುದು. ಸರಿಯಾದ ದಾಖಲೆಗಳನ್ನು ನೀಡಿ, ಮಾಹಿತಿ ಸರಿಯಾಗಿ ನಮೂದಿಸಿದರೆ ಯಾವುದೇ ತೊಂದರೆ ಇಲ್ಲದೆ ನಿಮ್ಮ Address Change ಆಗುತ್ತದೆ.

ಆದ್ದರಿಂದ ಇನ್ನೂ Update ಮಾಡಿಸದಿದ್ದರೆ ಇಂದುಲೇ ಮಾಡಿ. ಕೊನೆಯ ಕ್ಷಣದ ಗೊಂದಲ ತಪ್ಪಿಸಿ, ಚುನಾವಣೆಗೆ ಸಿದ್ಧರಾಗಿ!

 ಇದನ್ನು ಓದಿ:  

Leave a Comment