Telegram Join My Telegram WhatsApp Join My WhatsApp

Zilla Panchayat Recruitment 2026: ಬೆಳಗಾವಿ ಜಿಲ್ಲಾ ಪಂಚಾಯತ್‌ನಲ್ಲಿ ನೇರ ನೇಮಕಾತಿ, ಪದವೀಧರರಿಗೆ ಉತ್ತಮ ಉದ್ಯೋಗ ಅವಕಾಶ

Zilla Panchayat Recruitment 2026

ಬೆಳಗಾವಿ ಜಿಲ್ಲಾ ಪಂಚಾಯತ್‌ನಲ್ಲಿ 17 ಹುದ್ದೆಗಳ ನೇಮಕಾತಿ ಪದವಿ ಹಾಗೂ ಸ್ನಾತಕೋತ್ತರ ಅಭ್ಯರ್ಥಿಗಳಿಗೆ ಭರ್ಜರಿ ಅವಕಾಶ

ಸರ್ಕಾರಿ ಯೋಜನೆಗಳ ಅಡಿಯಲ್ಲಿ ಉತ್ತಮ ಉದ್ಯೋಗಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳಿಗೆ ಸಂತಸದ ಸುದ್ದಿಯೊಂದು ಬಂದಿದೆ. ಬೆಳಗಾವಿ ಜಿಲ್ಲಾ ಪಂಚಾಯತ್‌ ನೇಮಕಾತಿ 2026 ಅಧಿಸೂಚನೆಯ ಮೂಲಕ ಬೆಳಗಾವಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಸಂಜೀವಿನಿ (KSRLPS) ಯೋಜನೆಯಲ್ಲಿ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತವಾಗಿ ಅರ್ಜಿ ಆಹ್ವಾನಿಸಲಾಗಿದೆ.

ಈ ನೇಮಕಾತಿಯ ವಿಶೇಷತೆ ಎಂದರೆ, ಕೇವಲ ಒಂದು ಅಥವಾ ಎರಡು ಹುದ್ದೆಗಳಲ್ಲ. ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ (District Program Manager), ಜಿಲ್ಲಾ ವ್ಯವಸ್ಥಾಪಕ (District Manager), ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ (Taluka Program Manager), ಬ್ಲಾಕ್ ವ್ಯವಸ್ಥಾಪಕ (Block Manager), ಕ್ಲಸ್ಟರ್ ಸೂಪರ್‌ವೈಸರ್ (Cluster Supervisor) ಹಾಗೂ MIS ಸಹಾಯಕ-ಕಂ-ಡೇಟಾ ಎಂಟ್ರಿ ಆಪರೇಟರ್ (MIS Assistant-cum-DEO) ಸೇರಿದಂತೆ ಒಟ್ಟು 17 ಹುದ್ದೆಗಳ ಭರ್ತಿ ನಡೆಯುತ್ತಿದೆ.

ಬೆಳಗಾವಿ ಜಿಲ್ಲಾ ಪಂಚಾಯತ್ ನೇಮಕಾತಿ 2026 ಅಧಿಕೃತ ಅಧಿಸೂಚನೆ PDF

Zilla Panchayat Recruitment 2026

ಸಂಬಂಧಿತ ವಿದ್ಯಾರ್ಹತೆ ಹಾಗೂ ಅನುಭವ ಹೊಂದಿರುವ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ₹18,000 ರಿಂದ ₹35,000 ವರೆಗೆ ವೇತನ ನೀಡಲಾಗುತ್ತದೆ.

ಉದ್ಯೋಗಕ್ಕಾಗಿ ಹಲವು ತಿಂಗಳುಗಳಿಂದ ಕಾಯುತ್ತಿರುವ ಪದವೀಧರರು ಹಾಗೂ ಸ್ನಾತಕೋತ್ತರ ಪದವೀಧರರಿಗೆ ಈ ನೇಮಕಾತಿ ಉತ್ತಮ ಅವಕಾಶವಾಗಿದ್ದು, ವಿಶೇಷವಾಗಿ ಗ್ರಾಮೀಣಾಭಿವೃದ್ಧಿ, ಜೀವನೋಪಾಯ ಯೋಜನೆಗಳು, ಮಹಿಳಾ ಸಬಲೀಕರಣ ಹಾಗೂ ಸಾಮಾಜಿಕ ಅಭಿವೃದ್ಧಿ ಕ್ಷೇತ್ರದಲ್ಲಿ ಕೆಲಸ ಮಾಡಲು ಆಸಕ್ತಿ ಇರುವವರಿಗೆ ಇದು ಉತ್ತಮ ಆಯ್ಕೆಯಾಗಿದೆ.

ಜಿಲ್ಲಾ ಪಂಚಾಯತ್‌ ನೇಮಕಾತಿ 2026 ಪ್ರಮುಖ ವಿವರಗಳು

ವಿವರ ಮಾಹಿತಿ
ಸಂಸ್ಥೆ ಬೆಳಗಾವಿ ಜಿಲ್ಲಾ ಪಂಚಾಯತ್
ಯೋಜನೆ ಸಂಜೀವಿನಿ (KSRLPS
ಒಟ್ಟು ಹುದ್ದೆಗಳು 17
ಉದ್ಯೋಗದ ವಿಧ ಹೊರಗುತ್ತಿಗೆ (Outsourcing)
ನೇಮಕಾತಿ ಸಂಸ್ಥೆ Ram Computers
ಅರ್ಜಿ ವಿಧಾನ Online
ಉದ್ಯೋಗ ಸ್ಥಳ ಬೆಳಗಾವಿ ಜಿಲ್ಲೆ
ಆನ್‌ಲೈನ್ ಅರ್ಜಿ ಆರಂಭ 01-07-2026
ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15-07-2026
ಅಧಿಕೃತ ವೆಬ್‌ಸೈಟ್ zpbelagavi.karnataka.gov.in

ಜಿಲ್ಲಾ ಪಂಚಾಯತ್‌ ನೇಮಕಾತಿ ಹುದ್ದೆಗಳ ವಿವರ

ಜಿಲ್ಲಾ ಮಟ್ಟದ ಹುದ್ದೆಗಳು (District Level Posts)

ಹುದ್ದೆ  ಹುದ್ದೆಗಳ ಸಂಖ್ಯೆ
ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ (District Program Manager) 1
ಜಿಲ್ಲಾ ವ್ಯವಸ್ಥಾಪಕ – SM & CD (District Manager – SM & CD) 1
ಜಿಲ್ಲಾ ವ್ಯವಸ್ಥಾಪಕ – ಫಾರ್ಮ್ ಲೈವ್ಲಿಹುಡ್ (District Manager – Farm Livelihood) 1
ಜಿಲ್ಲಾ ವ್ಯವಸ್ಥಾಪಕ – ಕೌಶಲ್ಯ ಮತ್ತು ಉದ್ಯಮಶೀಲತೆ (District Manager – Skill & Entrepreneur) 1
ಜಿಲ್ಲಾ MIS ಸಹಾಯಕ ಕಂ ಡೇಟಾ ಎಂಟ್ರಿ ಆಪರೇಟರ್ (District MIS Assistant cum DEO) 1
ತಾಲೂಕು ಮಟ್ಟದ ಹುದ್ದೆಗಳು (Taluka Level Posts) 
ಹುದ್ದೆ ಹುದ್ದೆಗಳ ಸಂಖ್ಯೆ
ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ (Taluka Program Manager) – ಚಿಕ್ಕೋಡಿ 1
ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ – SVEP (Taluka Program Manager – SVEP) – ಬೈಲಹೊಂಗಲ 1
ಬ್ಲಾಕ್ ವ್ಯವಸ್ಥಾಪಕ – ಫಾರ್ಮ್ (Block Manager – Farm) – ಅಥಣಿ, ಬೆಳಗಾವಿ, ರಾಮದುರ್ಗ, ಸವದತ್ತಿ 4
ಬ್ಲಾಕ್ ವ್ಯವಸ್ಥಾಪಕ – ನಾನ್-ಫಾರ್ಮ್ (Block Manager – Non-Farm) – ರಾಯಬಾಗ, ರಾಮದುರ್ಗ, ಸವದತ್ತಿ 3
ಕ್ಲಸ್ಟರ್ ಸೂಪರ್‌ವೈಸರ್ (Cluster Supervisor) – ರಾಯಬಾಗ 1
ಕ್ಲಸ್ಟರ್ ಸೂಪರ್‌ವೈಸರ್ – ಕೌಶಲ್ಯ (Cluster Supervisor – Skill) – ಅಥಣಿ, ಹುಕ್ಕೇರಿ 2

ಒಟ್ಟು 17 ಹುದ್ದೆಗಳು ಭರ್ತಿಯಾಗಲಿವೆ

ವೇತನ ವಿವರ (Salary Details)

ಈ ನೇಮಕಾತಿಯ ಮತ್ತೊಂದು ಪ್ರಮುಖ ಆಕರ್ಷಣೆ ಎಂದರೆ ಉತ್ತಮ ಮಾಸಿಕ ವೇತನ.ಹುದ್ದೆಗೆ ಅನುಗುಣವಾಗಿ ತಿಂಗಳಿಗೆ ₹18,000 ರಿಂದ ₹35,000 ವರೆಗೆ ಸಂಬಳ ನೀಡಲಾಗುತ್ತದೆ.

ಹುದ್ದೆವಾರು ಮಾಸಿಕ ವೇತನ 

ಹುದ್ದೆ ಮಾಸಿಕ ವೇತನ
ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ (District Program Manager) ₹35,000
ಜಿಲ್ಲಾ ವ್ಯವಸ್ಥಾಪಕ – SM & CD (District Manager – SM & CD) ₹30,000
ಜಿಲ್ಲಾ ವ್ಯವಸ್ಥಾಪಕ – ಫಾರ್ಮ್ ಲೈವ್ಲಿಹುಡ್ (District Manager – Farm Livelihood) ₹30,000
ಜಿಲ್ಲಾ ವ್ಯವಸ್ಥಾಪಕ – ಕೌಶಲ್ಯ ಮತ್ತು ಉದ್ಯಮಶೀಲತೆ (District Manager – Skill & Entrepreneur) ₹30,000
ಜಿಲ್ಲಾ MIS ಸಹಾಯಕ ಕಂ ಡೇಟಾ ಎಂಟ್ರಿ ಆಪರೇಟರ್ (District MIS Assistant cum DEO) ₹20,500
ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ (Taluk Program Manager) ₹28,000
ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ – SVEP (Taluk Program Manager – SVEP) ₹28,000
ಬ್ಲಾಕ್ ವ್ಯವಸ್ಥಾಪಕ – ಫಾರ್ಮ್ (Block Manager – Farm) ₹25,000
ಬ್ಲಾಕ್ ವ್ಯವಸ್ಥಾಪಕ – ನಾನ್-ಫಾರ್ಮ್ (Block Manager – Non-Farm) ₹25,000
ಕ್ಲಸ್ಟರ್ ಸೂಪರ್‌ವೈಸರ್ (Cluster Supervisor) ₹18,000
ಕ್ಲಸ್ಟರ್ ಸೂಪರ್‌ವೈಸರ್ – ಕೌಶಲ್ಯ (Cluster Supervisor – Skill) ₹18,000

ಗಮನಿಸಿ: ಮೇಲಿನ ಎಲ್ಲಾ ಹುದ್ದೆಗಳಿಗೆ ನಿಗದಿತ ಮಾಸಿಕ ಗೌರವಧನ ನೀಡಲಾಗುತ್ತದೆ. PDFನಲ್ಲಿ ಸೂಚಿಸಿರುವಂತೆ ಇದು ತಿಂಗಳ ವೇತನವಾಗಿದೆ.

ಶೈಕ್ಷಣಿಕ ಅರ್ಹತೆ ಮತ್ತು ಕೆಲಸದ ಅನುಭವ

ಜಿಲ್ಲಾ ಪಂಚಾಯತ್‌ ನೇಮಕಾತಿ 2026 ಅಧಿಸೂಚನೆಯ ಪ್ರಕಾರ, ಪ್ರತಿಯೊಂದು ಹುದ್ದೆಗೆ ಪ್ರತ್ಯೇಕ ಶೈಕ್ಷಣಿಕ ಅರ್ಹತೆ ಹಾಗೂ ಅನುಭವವನ್ನು ನಿಗದಿಪಡಿಸಲಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ತಾವು ಅರ್ಜಿ ಸಲ್ಲಿಸಲು ಬಯಸುವ ಹುದ್ದೆಗೆ ಅಗತ್ಯವಿರುವ ವಿದ್ಯಾರ್ಹತೆ ಮತ್ತು ಅನುಭವವನ್ನು ಹೊಂದಿರಬೇಕು.

ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಮತ್ತು ಜಿಲ್ಲಾ ವ್ಯವಸ್ಥಾಪಕ ಹುದ್ದೆಗಳು (SM & CD / Skill & Entrepreneur)
  • ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ Social Science, Rural Development, MSW, MBA ಅಥವಾ Agricultural Science ವಿಷಯದಲ್ಲಿ ಪೂರ್ಣಾವಧಿ Post Graduate Degree ಹೊಂದಿರಬೇಕು.
  • ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ 5 ವರ್ಷಗಳ ಕೆಲಸದ ಅನುಭವ ಕಡ್ಡಾಯ.
  • ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಓದಲು, ಬರೆಯಲು ಹಾಗೂ ಮಾತನಾಡಲು ತಿಳಿದಿರಬೇಕು.
  • ಕಂಪ್ಯೂಟರ್ ಬಳಕೆಯ ಜ್ಞಾನ ಹೊಂದಿರಬೇಕು.
ಜಿಲ್ಲಾ ವ್ಯವಸ್ಥಾಪಕ – ಫಾರ್ಮ್ ಲೈವ್ಲಿಹುಡ್ (District Manager – Farm Livelihood)
  • M.Sc (Agriculture), B.Sc (Agriculture) ಅಥವಾ M.Sc (Environmental Science) ವಿದ್ಯಾರ್ಹತೆ ಹೊಂದಿರಬೇಕು.
  • ವಿದ್ಯಾರ್ಹತೆಗೆ ಅನುಗುಣವಾಗಿ 2 ರಿಂದ 7 ವರ್ಷಗಳ ಕ್ಷೇತ್ರ ಮಟ್ಟದ ಅನುಭವ ಕಡ್ಡಾಯ.
ಜಿಲ್ಲಾ MIS ಸಹಾಯಕ ಕಂ ಡೇಟಾ ಎಂಟ್ರಿ ಆಪರೇಟರ್ (District MIS Assistant cum DEO)
  • ಯಾವುದೇ ವೃತ್ತಿಪರ ಪದವಿ (Professional Graduation) ಅಥವಾ ಸ್ನಾತಕೋತ್ತರ ಪದವಿ (Post Graduation) ಪಡೆದಿರಬೇಕು
  • ಜೊತೆಗೆ 3 ವರ್ಷಗಳ ಕಂಪ್ಯೂಟರ್ ಮತ್ತು ಡೇಟಾ ಎಂಟ್ರಿ ಕೆಲಸದ ಅನುಭವ ಹೊಂದಿರಬೇಕು.
ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ (Taluka Program Manager – SVEP)
  • ಗಣಿತ ವಿಷಯದೊಂದಿಗೆ ದ್ವಿತೀಯ ಪಿಯುಸಿ (PUC) ಪೂರ್ಣಗೊಳಿಸಿ, ನಂತರ ಯಾವುದೇ ವಿಷಯದಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆದಿರಬೇಕು.
  • ಕಾಮರ್ಸ್, ಮ್ಯಾನೇಜ್‌ಮೆಂಟ್ ಅಥವಾ ಎಂಜಿನಿಯರಿಂಗ್ ಹಿನ್ನೆಲೆಯ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ.
  • ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ 4 ವರ್ಷಗಳ ಅನುಭವ ಕಡ್ಡಾಯ.
ಬ್ಲಾಕ್ ವ್ಯವಸ್ಥಾಪಕ (Block Manager – Farm / Non-Farm)
  • Farm ಹುದ್ದೆಗೆ: M.Sc (Agriculture) ಅಥವಾ B.Sc (Agriculture) ಪದವಿ ಹೊಂದಿದ್ದು 1 ರಿಂದ 3 ವರ್ಷಗಳ ಅನುಭವ ಇರಬೇಕು.
  • Non-Farm ಹುದ್ದೆಗೆ: ಯಾವುದೇ ಸ್ನಾತಕೋತ್ತರ ಪದವಿಯೊಂದಿಗೆ ಕನಿಷ್ಠ 3 ವರ್ಷಗಳ ಅನುಭವ ಹೊಂದಿರಬೇಕು.
ಕ್ಲಸ್ಟರ್ ಸೂಪರ್‌ವೈಸರ್ (Cluster Supervisor / Skill)
  • ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ (Graduation) ಪಡೆದಿರಬೇಕು.
  • ಸಂಬಂಧಿತ ಕ್ಷೇತ್ರದಲ್ಲಿ 2 ರಿಂದ 3 ವರ್ಷಗಳ ಕೆಲಸದ ಅನುಭವ ಕಡ್ಡಾಯವಾಗಿದೆ.

ವಯೋಮಿತಿ (Age Limit)

ಅಧಿಕೃತ ಪ್ರಕಟಣೆಯ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಗರಿಷ್ಠ ವಯಸ್ಸು 45 ವರ್ಷಗಳ ಒಳಗಿರಬೇಕು.

ವಯಸ್ಸಿನ ಲೆಕ್ಕಾಚಾರವನ್ನು ಅಧಿಸೂಚನೆಯಲ್ಲಿ ಸೂಚಿಸಿರುವ ದಿನಾಂಕದ ಆಧಾರದ ಮೇಲೆ ಪರಿಗಣಿಸಲಾಗುತ್ತದೆ. ಆದ್ದರಿಂದ ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ತಮ್ಮ ವಯಸ್ಸಿನ ಅರ್ಹತೆಯನ್ನು ಖಚಿತಪಡಿಸಿಕೊಳ್ಳಬೇಕು.

ಅರ್ಜಿ ಶುಲ್ಕ (Application Fee)

ಈ ನೇಮಕಾತಿಯ ಪ್ರಮುಖ ವಿಶೇಷತೆಗಳಲ್ಲಿ ಒಂದೇನೆಂದರೆ ಯಾವುದೇ ಅರ್ಜಿ ಶುಲ್ಕ ಇಲ್ಲ. ಸಾಮಾನ್ಯ, ಓಬಿಸಿ, ಎಸ್‌ಸಿ, ಎಸ್‌ಟಿ ಸೇರಿದಂತೆ ಎಲ್ಲಾ ವರ್ಗದ ಅಭ್ಯರ್ಥಿಗಳು ಉಚಿತವಾಗಿ ಆನ್‌ಲೈನ್ ಅರ್ಜಿ ಸಲ್ಲಿಸಬಹುದು.

ಆಯ್ಕೆ ಪ್ರಕ್ರಿಯೆ (Selection Process)

  • ಸಂದರ್ಶನದ ಮೂಲಕ ಆಯ್ಕೆ: ಆನ್‌ಲೈನ್ ಮೂಲಕ ಸಲ್ಲಿಸಲಾದ ಅರ್ಜಿಗಳನ್ನು ಪರಿಶೀಲಿಸಿದ ನಂತರ, ಅರ್ಹ ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಿ ನೇರ ಸಂದರ್ಶನಕ್ಕೆ (Interview) ಆಹ್ವಾನಿಸಲಾಗುತ್ತದೆ. ಅಭ್ಯರ್ಥಿಗಳ ಆಯ್ಕೆಯನ್ನು ಸಂದರ್ಶನದ ಆಧಾರದ ಮೇಲೆ ಮಾಡಲಾಗುತ್ತದೆ.
  • ಆನ್‌ಲೈನ್ ಅರ್ಜಿ ಸಲ್ಲಿಕೆ ಮಾತ್ರ ಮಾನ್ಯ: ಅಭ್ಯರ್ಥಿಗಳು ಕಡ್ಡಾಯವಾಗಿ ಅಧಿಕೃತ ಜಾಬ್ ಪೋರ್ಟಲ್ ಮೂಲಕವೇ ಆನ್‌ಲೈನ್ ಅರ್ಜಿ ಸಲ್ಲಿಸಬೇಕು. ಬೆಳಗಾವಿ ಜಿಲ್ಲಾ ಪಂಚಾಯತ್ ಕಚೇರಿಗೆ ನೇರವಾಗಿ ಅಥವಾ ಅಂಚೆ ಮೂಲಕ ಸಲ್ಲಿಸುವ ಯಾವುದೇ ಭೌತಿಕ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.

Zilla Panchayat Recruitment 2026

ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕಡ್ಡಾಯವಾಗಿ ಆನ್‌ಲೈನ್ ವಿಧಾನವನ್ನು ಅನುಸರಿಸಬೇಕು. ಅಂಚೆ ಮೂಲಕ ಅಥವಾ ಕಚೇರಿಗೆ ನೇರವಾಗಿ ಅರ್ಜಿ ಸಲ್ಲಿಸಿದರೆ ಅವುಗಳನ್ನು ಪರಿಗಣಿಸಲಾಗುವುದಿಲ್ಲ.

ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ಎಲ್ಲಾ ದಾಖಲೆಗಳನ್ನು ಸಿದ್ಧಪಡಿಸಿಕೊಂಡಿರುವುದು ಉತ್ತಮ. ವಿಶೇಷವಾಗಿ ಶೈಕ್ಷಣಿಕ ಪ್ರಮಾಣಪತ್ರಗಳು, ಅನುಭವ ಪ್ರಮಾಣಪತ್ರಗಳು ಮತ್ತು ಗುರುತಿನ ದಾಖಲೆಗಳ ಸ್ಕ್ಯಾನ್ ಪ್ರತಿಗಳನ್ನು ಮುಂಚಿತವಾಗಿ ತಯಾರಿಸಿಟ್ಟುಕೊಳ್ಳಬೇಕು.ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು 2026ರ ಜುಲೈ 15ರೊಳಗೆ ಕೆಳಗಿನ ಹಂತಗಳನ್ನು ಅನುಸರಿಸಿ ಅಧಿಕೃತ ಜಾಬ್ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸುವ ಹಂತಗಳು

ಹಂತ 1: ಮೊದಲಿಗೆ ಸಂಜೀವಿನಿ ಸಂಸ್ಥೆಯ ಅಧಿಕೃತ ಜಾಬ್ ಪೋರ್ಟಲ್‌ಗೆ https://jobsksrlps.karnataka.gov.in/ ಭೇಟಿ ನೀಡಿ.

ಹಂತ 2: ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವ ಬೆಳಗಾವಿ ಜಿಲ್ಲಾ ಪಂಚಾಯತ್ ನೇಮಕಾತಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ, ಅರ್ಹತೆ ಹಾಗೂ ಇತರ ವಿವರಗಳನ್ನು ಪರಿಶೀಲಿಸಿ.

ಹಂತ 3: ಬಳಿಕ Apply Online ಲಿಂಕ್ ಮೇಲೆ ಕ್ಲಿಕ್ ಮಾಡಿ, ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಐಡಿ ಬಳಸಿ ನೋಂದಣಿ (Registration) ಮಾಡಿಕೊಳ್ಳಿ.

ಹಂತ 4: ಅರ್ಜಿ ನಮೂನೆಯಲ್ಲಿ ವೈಯಕ್ತಿಕ ಮಾಹಿತಿ, ಶೈಕ್ಷಣಿಕ ಅರ್ಹತೆ ಹಾಗೂ ಕೆಲಸದ ಅನುಭವ ಸೇರಿದಂತೆ ಅಗತ್ಯವಿರುವ ಎಲ್ಲ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ.

ಹಂತ 5: ಅರ್ಜಿ ನಮೂನೆಯಲ್ಲಿ ವೈಯಕ್ತಿಕ ಮಾಹಿತಿ, ಶೈಕ್ಷಣಿಕ ಅರ್ಹತೆ ಹಾಗೂ ಕೆಲಸದ ಅನುಭವ ಸೇರಿದಂತೆ ಅಗತ್ಯವಿರುವ ಎಲ್ಲ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ.

ಹಂತ 6: ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ, ಸಹಿ ಹಾಗೂ ಅಗತ್ಯ ದಾಖಲೆಗಳಾದ ಅಂಕಪಟ್ಟಿಗಳು, ಅನುಭವ ಪ್ರಮಾಣಪತ್ರ, ಆಧಾರ್ ಕಾರ್ಡ್ ಸೇರಿದಂತೆ ಕೇಳಲಾದ ದಾಖಲೆಗಳ ಸ್ಕ್ಯಾನ್ ಪ್ರತಿಗಳನ್ನು ಅಪ್‌ಲೋಡ್ ಮಾಡಿ.

ಹಂತ 7: ನಮೂದಿಸಿದ ಎಲ್ಲಾ ಮಾಹಿತಿಯನ್ನು ಮತ್ತೊಮ್ಮೆ ಪರಿಶೀಲಿಸಿ, ನಂತರ Submit ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಿ.

ಹಂತ 8: ಅರ್ಜಿ ಯಶಸ್ವಿಯಾಗಿ ಸಲ್ಲಿಸಿದ ನಂತರ ದೊರೆಯುವ Application Number ಅಥವಾ ಅರ್ಜಿಯ ಪ್ರತಿಯನ್ನು ಡೌನ್‌ಲೋಡ್ ಮಾಡಿ ಅಥವಾ ಪ್ರಿಂಟ್ ತೆಗೆದು ಭವಿಷ್ಯದ ಉಲ್ಲೇಖಕ್ಕಾಗಿ ಸುರಕ್ಷಿತವಾಗಿ ಇಟ್ಟುಕೊಳ್ಳಿ.

ಸಹಾಯವಾಣಿ ಮಾಹಿತಿ (Contact Information)

ಅರ್ಜಿ ಸಲ್ಲಿಕೆ ಅಥವಾ ನೇಮಕಾತಿಗೆ ಸಂಬಂಧಿಸಿದಂತೆ ಯಾವುದೇ ಹೆಚ್ಚಿನ ಮಾಹಿತಿ, ಸ್ಪಷ್ಟನೆ ಅಥವಾ ಗೊಂದಲಗಳಿದ್ದಲ್ಲಿ ಅಭ್ಯರ್ಥಿಗಳು ಕಚೇರಿ ಸಮಯದಲ್ಲಿ ಕೆಳಗಿನ ಸಂಪರ್ಕ ವಿವರಗಳ ಮೂಲಕ ಅಧಿಕಾರಿಗಳನ್ನು ಸಂಪರ್ಕಿಸಬಹುದು.

  • ಸಂಪರ್ಕಿಸಬೇಕಾದ ಕಚೇರಿ: ಯೋಜನಾ ನಿರ್ದೇಶಕರು,ಡಿ.ಆರ್.ಡಿ.ಎ ಕೋಶ,ಜಿಲ್ಲಾ ಪಂಚಾಯತ್, ಬೆಳಗಾವಿ.
  • ದೂರವಾಣಿ ಸಂಖ್ಯೆ: 0831-2407209

ಪ್ರಮುಖ ಲಿಂಕ್‌ಗಳು(Important Links)

ಅರ್ಜಿ ಸಲ್ಲಿಸುವ ಲಿಂಕ್ Click-Here
ಅಧಿಕೃತ ಅಧಿಸೂಚನೆ PDF Click-Here
ಅಧಿಕೃತ ವೆಬ್‌ಸೈಟ್ Click-Here

ಕೊನೆಯ ಮಾತು

ಬೆಳಗಾವಿ ಜಿಲ್ಲಾ ಪಂಚಾಯತ್ ನೇಮಕಾತಿ 2026 ಪದವಿ ಹಾಗೂ ಸ್ನಾತಕೋತ್ತರ ಪದವಿ ಹೊಂದಿರುವ ಅಭ್ಯರ್ಥಿಗಳಿಗೆ ಉತ್ತಮ ಉದ್ಯೋಗ ಅವಕಾಶವಾಗಿದೆ. ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದು, ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದವರೆಗೆ ಕಾಯದೆ ಶೀಘ್ರದಲ್ಲೇ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಉತ್ತಮ.

ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ, ನಿಮ್ಮ ಅರ್ಹತೆ ಮತ್ತು ಅಗತ್ಯ ದಾಖಲೆಗಳನ್ನು ಪರಿಶೀಲಿಸಿಕೊಂಡು ಅರ್ಜಿ ಸಲ್ಲಿಸಿ.

ಇದನ್ನು ಓದಿ:  

Leave a Comment